Davanagere News: ಆರ್​ಟಿಐ ಕಾರ್ಯಕರ್ತ ಅನುಮಾನಾಸ್ಪದ ಸಾವು; ಪಿಎಸ್​ಐ, ಕಾನ್ಸ್​ಸ್ಟೇಬಲ್ ಸಸ್ಪೆಂಡ್; ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ

ಮೇ.27 ರಂದು ಆರ್​ಟಿಐ ಕಾರ್ಯಕರ್ತ ಹರೀಶ್ ಹಳ್ಳಿ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನೀಡಿದ ದೂರಿನನ್ವಯ ಪಿಎಸ್​ಐ ಹಾಗೂ ಓರ್ವ ಕಾನ್ಸ್​ಸ್ಟೇಬಲ್​ನ್ನು ಸಸ್ಪೆಂಡ್ ಮಾಡಲಾಗಿದ್ದು, ಜೊತೆಗೆ ಈ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ.

Davanagere News: ಆರ್​ಟಿಐ ಕಾರ್ಯಕರ್ತ ಅನುಮಾನಾಸ್ಪದ ಸಾವು; ಪಿಎಸ್​ಐ, ಕಾನ್ಸ್​ಸ್ಟೇಬಲ್ ಸಸ್ಪೆಂಡ್; ಪ್ರಕರಣದ ತನಿಖೆ ಸಿಐಡಿಗೆ ಹಸ್ತಾಂತರ
ದಾವಣಗೆರೆ ಆರ್​ಟಿಐ ಕಾರ್ಯಕರ್ತ ಸಾವು, ಸಿಐಡಿಗೆ ತನಿಖೆ ವರ್ಗಾವಣೆ
Follow us
|

Updated on: May 30, 2023 | 8:38 AM

ದಾವಣಗೆರೆ: ಮೇ.27 ರಂದು ಆರ್​ಟಿಐ ಕಾರ್ಯಕರ್ತ (RTI Activist)ಹರೀಶ್ ಹಳ್ಳಿ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ನೀಡಿದ ದೂರಿನನ್ವಯ ಪಿಎಸ್​ಐ ಹಾಗೂ ಓರ್ವ ಕಾನ್ಸ್​ಸ್ಟೇಬಲ್​ನ್ನು ಸಸ್ಪೆಂಡ್ ಮಾಡಲಾಗಿದ್ದು, ಜೊತೆಗೆ ಈ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ. ಈ ಹಿನ್ನಲೆ ಸಿಐಡಿ ಡಿಎಸ್ಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರಿಂದ‌ ತಪ್ಪಿಸಿಕೊಳ್ಳಲು ಹೋಗಿ ಸೇತುವೆ ಮೇಲಿಂದ ಹಾರಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ದಾವಣಗೆರೆ (Davanagere )ತಾಲೂಕಿನ ತೋಳಹುಣಸೆ ಬಳಿಯ ಸೇತುವೆ ಬಳಿ ನಡೆದಿತ್ತು. ಹರೀಶ್ ಹಳ್ಳಿ (40) ಸಾವನ್ನಪ್ಪಿದ ವ್ಯಕ್ತಿ. ಪ್ರಕರಣವೊಂದರಲ್ಲಿ ಪೊಲೀಸರಿಗೆ ಬೇಕಾಗಿದ್ದ ಹರೀಶ್ ಹಳ್ಳಿಯನ್ನ ಪೊಲೀಸರು ವಶಕ್ಕೆ ಪಡೆದು ಕರೆ ತರುವ ವೇಳೆ ತಾಲೂಕಿನ ತೋಳಹುಣಸೆ ಬಳಿಯ ಸೇತುವೆ ಬಳಿ ಪೊಲೀಸ್ ಜೀಪ್​ನಿಂದ ಮೇ.28 ರ ಬೆಳಿಗ್ಗೆ 2.30ಕ್ಕೆ ತಪ್ಪಿಸಿಕೊಂಡು ಹರೀಶ್ ಹಾರಿದ್ದ. ಬಳಿಕ ತೀವ್ರಗಾಯಗೊಂಡ ಹರೀಶ್​ನನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದ.

ಮಾಹಿತಿ ಹಕ್ಕು ಹೋರಾಟಗಾರನಾಗಿದ್ದ ಹರೀಶ್ ಹಳ್ಳಿ

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದ ನಿವಾಸಿಯಾದ ಹರೀಶ್ ಹಳ್ಳಿಯೊಬ್ಬ ಮಾಹಿತಿ ಹಕ್ಕು ಹೋರಾಟಗಾರನಾಗಿದ್ದ. ನಿನ್ನೆ(ಮೇ.27) ನಕಲಿ ದಾಖಲೆ ಸೃಷ್ಠಿಸಿ ಬೇರೊಬ್ಬರ ಸೈಟ್ ತನ್ನ ಹೆಸರಿಗೆ ಮಾಡಿಕೊಂಡ ಆರೋಪ ಎದುರಿಸುತ್ತಿದ್ದ ಹರೀಶ್ ಹಳ್ಳಿಯನ್ನ ಇತನ ಪತ್ನಿಯ ಊರಾದ ಚನ್ನಗಿರಿ ಕಾಕನೂರ ಗ್ರಾಮದಿಂದ ಪೊಲೀಸರು ಕರೆ ತಂದಿದ್ದರು. ಈ ವೇಳೆ ದುರ್ಘಟನೆ ನಡೆದಿತ್ತು. ಕುಟುಂಬ ಸದಸ್ಯರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಆಸ್ಪತ್ರೆ ಎದುರು ಹೋರಾಟ ನಡೆಸಿದ್ದರು.

ಇದನ್ನೂ ಓದಿ:Kalaburagi News: ಹಾಡಹಗಲೇ ಬಸ್​ ಚಾಲಕನ ಹತ್ಯೆ; ಇಬ್ಬರು ಆರೋಪಿಗಳು ಅರೆಸ್ಟ್​, ಕೊಲೆಗೆ ಕಾರಣ ಕೇಳಿ ದಂಗಾದ ಪೋಲಿಸರು​

ಬಳಿಕ ಪೊಲೀಸರೇ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಸುರೇಶ್​ ಪತ್ನಿಯಿಂದ ಪಿಎಸ್​ಐ ಹಾಗೂ ಇಬ್ಬರು ಪಿಸಿಗಳ ವಿರುದ್ದ ದೂರು ನೀಡಿದ್ದರು. ಪ್ರಕರಣದ ವಿಚಾರವಾಗಿ ತನ್ನ ಪತಿಯನ್ನ ಕರೆದುಕೊಂಡು ಹೋಗಿ ಗಾಂಧಿನಗರ ಪೊಲೀಸ್ ಠಾಣೆಯ ಪಿಎಸ್​ಐ ಕೃಷ್ಣಪ್ಪ ಹಾಗೂ ಇಬ್ಬರು ಪಿಸಿಗಳು ಸೇರಿ ಕೊಲೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ದಾವಣಗೆರೆ ಎಸ್ಪಿ ಡಾ.ಕೆ.ಅರುಣ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ದೂರಿನನ್ವಯ ಇಬ್ಬರನ್ನ ಸಸ್ಪೆಂಡ್​ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ