‘ಪಕ್ಕಕ್ಕೆ ಸರಿಯಪ್ಪ ಕಸ ಗುಡಿಸ್ಬೇಕು’ ಅಂದಿದ್ದೇ ತಪ್ಪಾಯ್ತಾ!?

ಹುಬ್ಬಳ್ಳಿ: ರಸ್ತೆ ಕಸ ಗುಡಿಸುವಾಗ ಪಕ್ಕಕ್ಕೆ ಹೋಗಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹುಬ್ಬಳ್ಳಿಯ ಉಣಕಲ್​ನ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಅರ್ಚಕ ಬಸಪ್ಪ ಗುಡಿಮನಿ. 2ದಿನದ ಹಿಂದೆ ದೇಗುಲದ ಕಸ ಗುಡಿಸ್ತಿದ್ದಾಗ, ಶಿವಾನಂದ ಗಂಬ್ಯಾಪೂರ್ ಎಂಬ ವ್ಯಕ್ತಿಗೆ ಸ್ವಲ್ಪ ಆ ಕಡೆ ಕೂರಿ ಎಂದಿದ್ದಾರೆ. ಇಷ್ಟಕ್ಕೆ ಶಿವಾನಂದ ಜಗಳ ಮಾಡಿದ್ದಾನೆ. ನಂತರ ಸ್ಥಳದಲ್ಲಿದ್ದ ಭಕ್ತರು ಜಗಳ ಬಿಡಿಸಿ ಕಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶಿವಾನಂದ ರಾತ್ರಿ ಯಾರೂ ಇಲ್ಲದ ಹೊತ್ತಲ್ಲಿ ಬಂದು […]

‘ಪಕ್ಕಕ್ಕೆ ಸರಿಯಪ್ಪ ಕಸ ಗುಡಿಸ್ಬೇಕು ಅಂದಿದ್ದೇ ತಪ್ಪಾಯ್ತಾ!?
ಸಾಧು ಶ್ರೀನಾಥ್​

Updated on: Nov 21, 2019 | 2:01 PM

ಹುಬ್ಬಳ್ಳಿ: ರಸ್ತೆ ಕಸ ಗುಡಿಸುವಾಗ ಪಕ್ಕಕ್ಕೆ ಹೋಗಿ ಎಂದು ಹೇಳಿದ್ದಕ್ಕೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ಉಣಕಲ್​ನ ಉಳವಿ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಅರ್ಚಕ ಬಸಪ್ಪ ಗುಡಿಮನಿ. 2ದಿನದ ಹಿಂದೆ ದೇಗುಲದ ಕಸ ಗುಡಿಸ್ತಿದ್ದಾಗ, ಶಿವಾನಂದ ಗಂಬ್ಯಾಪೂರ್ ಎಂಬ ವ್ಯಕ್ತಿಗೆ ಸ್ವಲ್ಪ ಆ ಕಡೆ ಕೂರಿ ಎಂದಿದ್ದಾರೆ. ಇಷ್ಟಕ್ಕೆ ಶಿವಾನಂದ ಜಗಳ ಮಾಡಿದ್ದಾನೆ. ನಂತರ ಸ್ಥಳದಲ್ಲಿದ್ದ ಭಕ್ತರು ಜಗಳ ಬಿಡಿಸಿ ಕಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಶಿವಾನಂದ ರಾತ್ರಿ ಯಾರೂ ಇಲ್ಲದ ಹೊತ್ತಲ್ಲಿ ಬಂದು ಬಸಪ್ಪನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾನೆ. ಗಂಭೀರವಾಗಿ ಗಾಯಗೊಂಡ ಬಸಪ್ಪ ಆಸ್ಪತ್ರೆ ಸೇರಿದ್ದಾರೆ.

ಹಿನ್ನೆಲೆ:
ಶಿವಾನಂದ ಈ ಹಿಂದೆ ದೇಗುಲದಲ್ಲಿ ಸ್ಮೋಕ್​ ಮಾಡ್ತಿದ್ನಂತೆ. ಈ ವೇಳೆ ಅರ್ಚಕ ಬಸಪ್ಪ ಇಲ್ಲಿ ಸ್ಮೋಕ್ ಮಾಡ್ಬೇಡಿ ಎಂದು ಹೇಳಿ ಕಳುಹಿಸಿದ್ದರಂತೆ. ಇದ್ರಿಂದ ಕುಪಿತಗೊಂಡಿದ್ದ ಶಿವಾನಂದ, ಸರಿದು ನಿಲ್ಲು ಎಂದಿದ್ದನ್ನೇ ನೆಪವಾಗಿಟ್ಕೊಂಡು ಹಲ್ಲೆ ನಡೆಸಿದ್ದಾನೆ ಎನ್ನಲಾಗ್ತಿದೆ. ಇನ್ನು, ಹಲ್ಲೆಯಿಂದ ಬಸಪ್ಪರ ಕಿಡ್ನಿ ಹಾಗೂ ಎದೆಗೆ ತೀವ್ರವಾಗಿ ಪೆಟ್ಟಾಗಿದೆ. ಸದ್ಯ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಪ್ರಕರಣ ಸಂಬಂಧ ವಿದ್ಯಾನಗರ ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೆ ಪೊಲೀಸರು ಶಿವಾನಂದ ವಿರುದ್ಧ ಏನೂ ಕ್ರಮ ಕೈಗೊಂಡಿಲ್ಲ ಅಂತ ಬಸಪ್ಪನ ಸಂಬಂಧಿಕರು ಆರೋಪಿಸಿದ್ದಾರೆ.

Published On - 1:44 pm, Thu, 21 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us