ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಮಹಿಳೆ, ಕೊನೆಗೂ ಸಿಕ್ಕಿ ಬಿದ್ದಿದ್ಹೇಗೆ?

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಲಿವ್ ಇನ್​ ಸಂಬಂಧದಲ್ಲಿದ್ದರು, ಆದರೆ ತಮ್ಮ ಮಧ್ಯೆ ಮಗ ಬರಬಾರದೆಂದು ಆತನನ್ನು ಹತ್ಯೆ ಮಾಡಿದ್ದಾಳೆ.

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಮಹಿಳೆ, ಕೊನೆಗೂ ಸಿಕ್ಕಿ ಬಿದ್ದಿದ್ಹೇಗೆ?
ಸಾವು
Image Credit source: The Statesman

Updated on: Aug 16, 2023 | 11:49 AM

ಗೆಳೆಯನ ಅಪ್ರಾಪ್ತ ಮಗನನ್ನು ಕೊಂದು ಮಹಿಳೆಯೊಬ್ಬಳು ಹಾಸಿಗೆಯಲ್ಲಿ ಶವ ಬಚ್ಚಿಟ್ಟ ಘಟನೆ ದೆಹಲಿಯಲ್ಲಿ ನಡೆದಿದೆ. ಇಬ್ಬರೂ ಲಿವ್ ಇನ್​ ಸಂಬಂಧದಲ್ಲಿದ್ದರು, ಆದರೆ ತಮ್ಮ ಮಧ್ಯೆ ಮಗ ಬರಬಾರದೆಂದು ಆತನನ್ನು ಹತ್ಯೆ ಮಾಡಿದ್ದಾಳೆ. 11 ವರ್ಷದ ದಿವ್ಯಾಂಶ್​ನನ್ನು ಕತ್ತು ಹಿಸುಕಿ ಕೊಂದು, ಬಳಿಕ ಮನೆಯ ಹಾಸಿಗೆಯಲ್ಲಿ ಅಮಾಯಕನ ಶವವನ್ನು ಬಚ್ಚಿಟ್ಟಿದ್ದಾಳೆ. ಆದರೆ, ದೆಹಲಿ ಪೊಲೀಸರ ಅಪರಾಧ ವಿಭಾಗವು 24 ವರ್ಷದ ಆರೋಪಿ ಪೂಜಾಳನ್ನು ಬಂಧಿಸಿದೆ. ಪೊಲೀಸರಿಂದ ಬಂದ ಮಾಹಿತಿಯ ಪ್ರಕಾರ, ಆ.10ರಂದು ಮಧ್ಯಾಹ್ನ ಮನೆಯಲ್ಲಿ ಮಲಗಿದ್ದ ದಿವ್ಯಾಂಶ್‌ನನ್ನು ಪೂಜಾ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.

ಪೂಜಾ ಮತ್ತು ಜಿತೇಂದ್ರ 2019 ರಿಂದ ಲಿವ್-ಇನ್ ಸಂಬಂಧದಲ್ಲಿದ್ದರು. ಜಿತೇಂದ್ರ ತನ್ನ ಹೆಂಡತಿಗೆ ವಿಚ್ಛೇದನ ನೀಡುವ ಮೂಲಕ ಪೂಜಾಳನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದನು, ಆದರೆ 2022 ರಲ್ಲಿ ಜಿತೇಂದ್ರ ಪೂಜಾಳನ್ನು ತೊರೆದು ತನ್ನ ಹೆಂಡತಿ ಮತ್ತು ಮಗ ದಿವ್ಯಾಂಶ್ ಜೊತೆ ವಾಸಿಸಲು ಹೋಗಿದ್ದ.

ಇದರಿಂದ ಜಿತೇಂದ್ರನ ಮೇಲೆ ಕೋಪಗೊಂಡ ಪೂಜಾ, ಆತನಿಗೆ ತಕ್ಕ ಪಾಠ ಕಲಿಸಲು ಬಯಸಿದ್ದಳು. ತನ್ನ ಮಗ ದಿವ್ಯಾಂಶ್‌ನಿಂದಾಗಿ ಜಿತೇಂದ್ರ ತನ್ನನ್ನು ಮದುವೆಯಾಗಲು ನಿರಾಕರಿಸಿದನೆಂದು ಪೂಜಾ ಭಾವಿಸಿದಳು, ನಂತರ ಅವಳು ಜಿತೇಂದ್ರ ಮತ್ತು ತನ್ನ ನಡುವಿನ ಮುಳ್ಳಾಗಿ ದಿವ್ಯಾಂಶ್‌ನನ್ನು ಇದ್ದಾನೆ ಎಂದುಕೊಂಡಳು.

ಮತ್ತಷ್ಟು ಓದಿ: ಬೀದರ್: ಕಳ್ಳತನಕ್ಕೆ ಅಡ್ಡಿ: ವಯೋವೃದ್ಧೆಗೆ ಚಾಕು ಇರಿದ ಅಪ್ರಾಪ್ತ ಬಾಲಕ

ಆಗಸ್ಟ್ 10 ರಂದು ಪೂಜಾ ಇಂದ್ರಪುರಿಯಲ್ಲಿರುವ ಜಿತೇಂದ್ರನ ಮನೆಯ ವಿಳಾಸವನ್ನು ಕಾಮನ್ ಫ್ರೆಂಡ್ ಬಳಿ ಕೇಳಿದ್ದಳು. ಬಳಿಕ ಜಿತೇಂದ್ರನ ಮನೆಗೆ ಬಂದಾಗ ಮನೆಯ ಬಾಗಿಲು ತೆರೆದಿತ್ತು. ಪೊಲೀಸರಿಂದ ಬಂದ ಮಾಹಿತಿ ಪ್ರಕಾರ, ಆ ಸಮಯದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ ಮತ್ತು ದಿವ್ಯಾಂಶು ಹಾಸಿಗೆಯ ಮೇಲೆ ಮಲಗಿದ್ದ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಆರೋಪಿ ಪೂಜಾ, ಅಮಾಯಕನ ಪ್ರಾಣ ತೆಗೆದಿದ್ದು, ಅದೇ ಹಾಸಿಗೆಯಲ್ಲಿ ಶವವನ್ನು ಬಚ್ಚಿಟ್ಟು ಓಡಿ ಹೋಗಿದ್ದಾಳೆ.

300 ಸಿಸಿಟಿವಿಗಳ ತನಿಖೆ ನಡೆಸಿದ ಪೊಲೀಸರು
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಸಹಾಯದಿಂದ ಪೂಜಾಳನ್ನು ಗುರುತಿಸಿದ್ದಾರೆ. ಅದರ ನಂತರ, ನಜಾಫ್‌ಗಢ-ನಾಗ್ಲೋಯ್ ರಸ್ತೆಯಲ್ಲಿರುವ ರಂಹೋಲಾ, ನಿಹಾಲ್ ವಿಹಾರ್ ಮತ್ತು ರಿಶಾಲ್ ಗಾರ್ಡನ್ ಪ್ರದೇಶಗಳ ಸುಮಾರು 300 ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಸ್ಕ್ಯಾನ್ ಮಾಡಲಾಯಿತು.

3 ದಿನಗಳ ಕಠಿಣ ಪರಿಶ್ರಮದ ನಂತರ ಆರೋಪಿ ಪೂಜಾಳನ್ನು ಬಕ್ಕರ್‌ವಾಲಾ ಪ್ರದೇಶದಲ್ಲಿ ಬಂಧಿಸಲಾಗಿದೆ. ಬಂಧನದ ನಂತರ ಪೂಜಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 11:48 am, Wed, 16 August 23

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us