ಬೀದರ್: ಕಳ್ಳತನಕ್ಕೆ ಅಡ್ಡಿ: ವಯೋವೃದ್ಧೆಗೆ ಚಾಕು ಇರಿದ ಅಪ್ರಾಪ್ತ ಬಾಲಕ

Bidar news: ಕಳ್ಳತನಕ್ಕೆ ಅಡ್ಡಿ ಪಡಿಸಿದರು ಎಂಬ ಕಾರಣಕ್ಕೆ ಅಪ್ರಾಪ್ತ ಬಾಲಕನೋರ್ವ ವಯೋವೃದ್ಧೆಗೆ ಚಾಕುವಿನಿಂದ ಇರಿದಿರುವಂತಹ ಘಟನೆ ಬೀದರ್ ತಾಲೂಕಿನ ಕಪಲಾಪುರ ಗ್ರಾಮದಲ್ಲಿ ನಡೆದಿದೆ. ಮತ್ತೊಂದು ಪ್ರಕರಣಲ್ಲಿ ಈಜಲು ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮಿಪುರ ಕೆರೆಯಲ್ಲಿ ನಡೆದಿದೆ.

ಬೀದರ್: ಕಳ್ಳತನಕ್ಕೆ ಅಡ್ಡಿ: ವಯೋವೃದ್ಧೆಗೆ ಚಾಕು ಇರಿದ ಅಪ್ರಾಪ್ತ ಬಾಲಕ
ಪ್ರಾತಿನಿಧಿಕ ಚಿತ್ರ
Follow us
ಸುರೇಶ ನಾಯಕ
| Updated By: ಗಂಗಾಧರ​ ಬ. ಸಾಬೋಜಿ

Updated on:Aug 14, 2023 | 8:54 PM

ಬೀದರ್, ಆಗಸ್ಟ್​ 14: ಕಳ್ಳತನಕ್ಕೆ ಅಡ್ಡಿ ಪಡಿಸಿದ ವಯೋವೃದ್ಧೆಗೆ ಅಪ್ರಾಪ್ತ ಬಾಲಕ (Minor boy) ಚಾಕು ಇರಿದಿರುವಂತಹ ಘಟನೆ ಬೀದರ್ ತಾಲೂಕಿನ ಕಪಲಾಪುರ ಗ್ರಾಮದಲ್ಲಿ ನಡೆದಿದೆ. ನಾಗಮ್ಮ ಪಂಚಾಳ ಹಲ್ಲೆಗೊಳಗಾದ ವಯೋವೃದ್ಧೆ. ಮನೆಯಲ್ಲಿ ಯಾರು ಇಲ್ಲಾ ಎಂದು ಬಾಲಕ ಕಳ್ಳತನಕ್ಕೆ ಬಂದಿದ್ದಾನೆ. ನಾಗಮ್ಮ ಪಂಚಾಳ ಎಂಬುವರ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ. ಸದ್ಯ ಬ್ರೀಮ್ಸ್ ಆಸ್ಪತ್ರೆಯಲ್ಲಿ ವಯೋವೃದ್ಧೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಈಜಲು ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವು: ನೀರಿನ ಟಬ್​ಗೆ ಬಿದ್ದು ಮಗು ಮೃತ

ನೆಲಮಂಗಲ: ಈಜಲು ಹೋಗಿದ್ದ ವ್ಯಕ್ತಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಉತ್ತರ ತಾಲೂಕಿನ ಲಕ್ಷ್ಮಿಪುರ ಕೆರೆಯಲ್ಲಿ ನಡೆದಿದೆ. ಗಂಗೊಂಡಹಳ್ಳಿ ನಿವಾಸಿ ರಾಜಗೋಪಾಲ್​ ಮೃತ ವ್ಯಕ್ತಿ. ಪೀಣ್ಯಾ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶವ ಹೊರಕ್ಕೆ ತೆಗೆಯಲಾಗಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಮಹಿಳೆ ಮೇಲೆ ಅತ್ಯಾಚಾರ: ವಿಡಿಯೋ ವೈರಲ್, 16 ಜನರ ವಿರುದ್ಧ ಎಫ್​ಐಆರ್

ಮತ್ತೊಂದು ಪ್ರಕರಣಲ್ಲಿ ಆಟವಾಡುತ್ತಿದ್ದ ಮಗು ನೀರಿನ ಟಬ್​ಗೆ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಒರಿಸ್ಸಾ ಮೂಲದ ದಂಪತಿಗಳಾದ ರಾಜಶೇಖರ ಮಲ್ಲಿಕ್, ಸಬೋನಿ ಮಲ್ಲಿಕ್​ ಅವರ ಹತ್ತು ತಿಂಗಳ ಮಗು ರೀತೇಶ್ ಮೃತಪಟ್ಟಿದೆ. 9 ತಿಂಗಳ ಹಿಂದೆಯಷ್ಟೇ ದೊಡ್ಡೇರಿ ಗ್ರಾಮಕ್ಕೆ ಬಂದಿದ್ದರು. ತಾಯಿ ಅಡುಗೆ ಮಾಡುತ್ತಿದ್ದಾಗ ಮಗು ಟಬ್​ನಲ್ಲಿ ಮುಳುಗಿ ಉಸಿರುಗಟ್ಟಿ ಸಾವನ್ನಪ್ಪಿದೆ ಎನ್ನಲಾಗುತ್ತಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಡಗಿದೆ.

ಮಹಿಳೆ ಮೇಲೆ ಅತ್ಯಾಚಾರ: 16 ಜನರ ವಿರುದ್ದ ಎಫ್​ಐಆರ್ ದಾಖಲು

ಕೊಪ್ಪಳ: ಮಹಿಳೆ ಮೇಲೆ ಅತ್ಯಾಚಾರ ಆರೋಪ ಹಿನ್ನೆಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ 16 ಜನರ ವಿರುದ್ದ ದೂರು ದಾಖಲಾಗಿದೆ. ನಾಗವೇಣಿ ರಾಜಕುಮಾರ್ ಭಾವ ಹಾಗೂ ಕುಟುಂಬ ಸದಸ್ಯರ ಮೇಲೆಯೇ ದೂರು ನೀಡಿದ್ದಾರೆ. ಶ್ರೀನಿವಾಸ್ ಸತ್ಯನಾರಯಣ್, ರಾಧಾ ಶ್ರೀನಿವಾಸ್, ಪ್ರದೀಪ್ ಶ್ರೀನಿವಾಸ್, ಸುದೀಪ್ ಶ್ರೀನಿವಾಸ್, ಹಾಗೂ ಗೋಪಾಲ್ ರಾವ್ ಪುಲ್ಲಯ್ಯ ಕೊಠಾರಿ, ರಾಮರಾವ್ ವೆಂಕಟನಾರಯಣ್ ಸೇರಿದಂತೆ 16 ಜನರ ವಿರುದ್ದ ಎಫ್​ಐಆರ್ ದಾಖಲಾಗಿದೆ.

ಇದನ್ನೂ ಓದಿ: ಬೆಳಗಾವಿ: ತನ್ನ ಪತ್ನಿ ಮೇಲೆ ಕಣ್ಣು ಹಾಕಿದ ಸ್ನೇಹಿತನಿಗೆ ಚಾಕು ಇರಿದ ಗೆಳೆಯ, ಚಿಕಿತ್ಸೆ ಫಲಿಸದೆ ಸಾವು

ಜಮೀನು ವಿವಾದ ಹಿನ್ನಲೆ 7 ವರ್ಷದಿಂದ ಎರಡೂ ಕುಟುಂಬದ ಮಧ್ಯೆ ವಿವಾದವಿತ್ತು. ಈ ಹಿನ್ನೆಲೆ ಜಲೈ 27ರಂದು ಮಹಿಳೆ ಜಮೀನಿಗೆ ಹೋದಾಗ ಅತ್ಯಾಚಾರ ಮಾಡಿದ್ದಾರೆಂದು ‌ದೂರಿನಲ್ಲಿ ಉಲ್ಲೇಖಿಸಲಾಗಿದೆ. ನಮ್ಮ‌ ಪಾಲಿಗೆ ಬಂದಿದ್ದ ಜಮೀನಿನಲ್ಲಿ ಉಳುಮೆ ಮಾಡುವುದಕ್ಕೆ ಹೋದಾಗ ಭಾವ ಹಾಗೂ ಸಂಬಂಧಿಕರೇ ಅತ್ಯಚಾರ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸದ್ಯ ಕಲಂ 143, 147, 376(D)148, 354, 504, 506 ಅಡಿ ಕೇಸ್ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:53 pm, Mon, 14 August 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ