ಬೆಂಗಳೂರಲ್ಲಿ ಡಬಲ್​ ಮರ್ಡರ್​: ತಮ್ಮನಿಂದಲೇ ಅಣ್ಣಂದಿರು ಫಿನಿಶ್​?

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆ ಆಗುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಅಪರಾಧದ ಪ್ರಕರಣಗಳು ಸಹ ಹೆಚ್ಚುತ್ತಿವೆ. ಇದೀಗ ಜೋಡಿ ಕೊಲೆಯೊಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಬಡಾವಣೆಯ ಖಾಲಿ ಕಟ್ಟಡವೊಂದರ ತಳಮಹಡಿಯಲ್ಲಿ ಮೃತ ದೇಹಗಳು ಪತ್ತೆಯಾಗಿದ್ದು ಹತ್ಯೆಯಾಗಿರುವವರನ್ನ ಸಹೋದರರಾದ ಸದಾಶಿವ ಹಾಗೂ ದಂಡಪಾಣಿ ಎಂದು ಗುರುತಿಸಲಾಗಿದೆ. ತಮ್ಮನಿಂದಲೇ ನಡೆದಿತ್ತಾ ಅಣ್ಣಂದಿರ ಕೊಲೆ..? ದೊಣ್ಣೆಯಿಂದ ಹೊಡೆದು ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ಹತ್ಯೆ ನಡೆದು 2-3 ದಿನಗಳಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. […]

ಬೆಂಗಳೂರಲ್ಲಿ ಡಬಲ್​ ಮರ್ಡರ್​: ತಮ್ಮನಿಂದಲೇ ಅಣ್ಣಂದಿರು ಫಿನಿಶ್​?
Follow us
KUSHAL V
| Updated By: ಆಯೇಷಾ ಬಾನು

Updated on:Jun 17, 2020 | 1:48 PM

ಬೆಂಗಳೂರು: ಲಾಕ್​ಡೌನ್​ ಸಡಿಲಿಕೆ ಆಗುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಅಪರಾಧದ ಪ್ರಕರಣಗಳು ಸಹ ಹೆಚ್ಚುತ್ತಿವೆ. ಇದೀಗ ಜೋಡಿ ಕೊಲೆಯೊಂದು ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಬಡಾವಣೆಯ ಖಾಲಿ ಕಟ್ಟಡವೊಂದರ ತಳಮಹಡಿಯಲ್ಲಿ ಮೃತ ದೇಹಗಳು ಪತ್ತೆಯಾಗಿದ್ದು ಹತ್ಯೆಯಾಗಿರುವವರನ್ನ ಸಹೋದರರಾದ ಸದಾಶಿವ ಹಾಗೂ ದಂಡಪಾಣಿ ಎಂದು ಗುರುತಿಸಲಾಗಿದೆ.

ತಮ್ಮನಿಂದಲೇ ನಡೆದಿತ್ತಾ ಅಣ್ಣಂದಿರ ಕೊಲೆ..? ದೊಣ್ಣೆಯಿಂದ ಹೊಡೆದು ನಂತರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ. ಇನ್ನು ಹತ್ಯೆ ನಡೆದು 2-3 ದಿನಗಳಾಗಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಜೊತೆಗೆ ಪೊಲೀಸರ ಪ್ರಕಾರ ಮೃತರ ತಮ್ಮನಿಂದಲೇ ಸಹೋದರರಿಬ್ಬರ ಹತ್ಯೆಯಾಗಿದೆ ಎಂದು ತಿಳಿದುಬಂದಿದೆ.

Published On - 2:53 pm, Tue, 16 June 20