AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೇಸ್​ಬುಕ್ ಸ್ನೇಹಿತನಿಂದ ಅತ್ಯಾಚಾರ ಯತ್ನ, ತಡೆಯಲು ಯತ್ನಿಸಿದಾಗ ಯುವತಿಯ ತಲೆ ಬುರುಡೆಯನ್ನೇ ಒಡೆದ ವ್ಯಕ್ತಿ

ಅವರಿಬ್ಬರದ್ದು ಫೇಸ್​ಬುಕ್ ಸ್ನೇಹ, ಹೇಗೋ ಆತ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಈಕೆಯೂ ಅಕ್ಸೆಪ್ಟ್​ ಮಾಡಿದ್ದಳು, ಬಳಿಕ ಅಷ್ಟಷ್ಟಾಗಿ ಮಾತನಾಡುತ್ತಾ ಇಬ್ಬರೂ ಹತ್ತಿರವಾದರು. ಆತ ಒಮ್ಮೆಲೇ ಆಕೆಯ ಕುಟುಂಬದವರ ಬಳಿ ಮದುವೆಯ ಪ್ರೊಪೋಸಲ್ ಇಟ್ಟುಬಿಟ್ಟ, ಯುವತಿಯ ಮನೆಯವರು ಕೂಡ ಒಪ್ಪಿಗೆ ಸೂಚಿಸಿಯೇ ಬಿಟ್ಟರು. ಏನು ಇಷ್ಟು ಸರಾಗವಾಗಿ ಎಲ್ಲದೂ ನಡೆದೇ ಹೋಯಿತಲ್ಲ ಎನ್ನುವಾಗ ನಡೆದಿದ್ದೇ ಬೇರೆ.

ಫೇಸ್​ಬುಕ್ ಸ್ನೇಹಿತನಿಂದ ಅತ್ಯಾಚಾರ ಯತ್ನ, ತಡೆಯಲು ಯತ್ನಿಸಿದಾಗ ಯುವತಿಯ ತಲೆ ಬುರುಡೆಯನ್ನೇ ಒಡೆದ ವ್ಯಕ್ತಿ
ಫೇಸ್​ಬುಕ್ ಸ್ನೇಹಿತ
ನಯನಾ ರಾಜೀವ್
|

Updated on: Aug 17, 2023 | 7:46 AM

Share

ಅವರಿಬ್ಬರದ್ದು ಫೇಸ್​ಬುಕ್ ಸ್ನೇಹ, ಹೇಗೋ ಆತ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ ಈಕೆಯೂ ಅಕ್ಸೆಪ್ಟ್​ ಮಾಡಿದ್ದಳು, ಬಳಿಕ ಅಷ್ಟಷ್ಟಾಗಿ ಮಾತನಾಡುತ್ತಾ ಇಬ್ಬರೂ ಹತ್ತಿರವಾದರು. ಆತ ಒಮ್ಮೆಲೇ ಆಕೆಯ ಕುಟುಂಬದವರ ಬಳಿ ಮದುವೆಯ ಪ್ರೊಪೋಸಲ್ ಇಟ್ಟುಬಿಟ್ಟ, ಯುವತಿಯ ಮನೆಯವರು ಕೂಡ ಒಪ್ಪಿಗೆ ಸೂಚಿಸಿಯೇ ಬಿಟ್ಟರು. ಏನು ಇಷ್ಟು ಸರಾಗವಾಗಿ ಎಲ್ಲದೂ ನಡೆದೇ ಹೋಯಿತಲ್ಲ ಎನ್ನುವಾಗ ನಡೆದಿದ್ದೇ ಬೇರೆ. ಆಕೆ ಇನ್ನೂ ಪ್ರಥಮ ವರ್ಷದ ವಿಜ್ಞಾನ ವಿದ್ಯಾರ್ಥಿನಿ, ಅವರಿಬ್ಬರಿಗೂ ಕುಟುಂಬದವರು 1 ಬಿಎಚ್​ಕೆ ಫ್ಲಾಟ್​ನಲ್ಲಿ ಇರಲು ಅವಕಾಶ ಮಾಡಿಕೊಟ್ಟರು. ಯುವತಿಗೆ ತಾನು ತನ್ನ ಶಿಕ್ಷಣವನ್ನು ಮುಗಿಸಬೇಕು, ನಂತರ ಬಾಲಿವುಡ್​ನಲ್ಲಿ ಕೆಲಸ ಮಾಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸಿದ್ದಳು.

ಅದಕ್ಕೆ ಕೋಪಗೊಂಡ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ನಡೆಸಲು ಮುಂದಾಗಿದ್ದ, ಅದನ್ನು ಪ್ರತಿಭಟಿಸಿದ್ದಕ್ಕೆ, ಆಕೆಯ ತಲೆಬುರುಡೆಯನ್ನೇ ಒಡೆದು ಹಾಕಿದ್ದಾನೆ, ಆಕೆ ನೆಲಕ್ಕೆ ಕುಸಿದು ಬಿದ್ದ ಬಳಿ ಅಲ್ಲಿಂದ ಆತ ಪರಾರಿಯಾಗಿದ್ದಾನೆ.

ಮತ್ತಷ್ಟು ಓದಿ: ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದ ಕಾರು ಚಾಲಕ, ಇಬ್ಬರು ಸಾವು

ಆರೋಪಿ ತಾನು ಚಲನಚಿತ್ರ ನಿರ್ಮಾಪಕ ಎಂದು ಹೇಳಿಕೊಂಡಿದ್ದ, ಆರಂಭದಲ್ಲಿ ಯುವತಿ ಸಾವನ್ನಪ್ಪಿದ್ದಾಳೆ ಎಂದು ಆರೋಪಿ ಮಾಲಕರ್ ಭಾವಿಸಿದ್ದ. ಹೀಗಾಗಿ ಭಯದಿಂದ ಮನೆಯಿಂದ ಓಡಿ ಹೋಗಿದ್ದಾನೆ. ಹೊರಗಿನಿಂದ ಮನೆಗೆ ಬೀಗ ಹಾಕಿ ನಗರದಿಂದ ಪರಾರಿಯಾಗಿದ್ದಾನೆ. ಒಂದು ಗಂಟೆಯ ನಂತರ ಬಾಲಕಿಗೆ ಪ್ರಜ್ಞೆ ಬಂದಾಗ ಕಿರುಚಲು ಆರಂಭಿಸಿದ್ದಾಳೆ. ಅಕ್ಕಪಕ್ಕದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಈ ಘಟನೆ ಬಯಲಾಗಿದೆ.

ಕೂಡಲೇ ಪೊಲೀಸರು ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಎರಡು ದಿನ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಾಲಕಿಯನ್ನು ಕೊಲ್ಲಲು ಬಯಸಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ. ಸೂರತ್‌ನಲ್ಲಿ ಎಟಿಎಂ ಒಂದರಲ್ಲಿ ಆರೋಪಿ ದೀಪಕ್ ಮಾಲಕರ್‌ನನ್ನು ವರ್ಸೋವಾ ಪೊಲೀಸರು ಬಂಧಿಸಿದ್ದಾರೆ.

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ