ಪತ್ನಿ ವಿರುದ್ಧವೇ ಸುಳ್ಳು ದರೋಡೆ ಕೇಸ್ ದಾಖಲು: ಸ್ಯಾಂಟ್ರೋ ರವಿಗೆ ಸಾಥ್ ನೀಡಿದ್ದ ಪೊಲೀಸ್​ ಇನ್ಸ್​​ಪೆಕ್ಟರ್ ವಿರುದ್ಧ ಕೈಗೊಂಡ ಕ್ರಮವೇನು?

ಪತ್ನಿಯ ವಿರುದ್ಧವೇ ಸುಳ್ಳು ದರೋಡೆ ಪ್ರಕರಣ ತನಿಖೆಯಾಗಿ 8 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಪಶ್ಚಿಮ ವಿಭಾಗದ ಡಿಸಿಪಿ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಕಾಟನ್ ಪೇಟೆಯ ಅಂದಿನ ಇನ್ಸ್ ಪೆಕ್ಟರ್ ಪ್ರವೀಣ್ ಕರ್ತವ್ಯ ಲೋಪವೆಸಗಿರುವುದು ಬಹಿರಂಗವಾಗಿತ್ತು. ಸಿಸಿಬಿ ತನಿಖೆಯ ವೇಳೆಯೂ ಆತನ ಪಾತ್ರ ಬಹಿರಂಗವಾಗಿತ್ತು. ಹೀಗಿದ್ದರೂ ಆ ಅಧಿಕಾರಿ ವಿರುದ್ದ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ಈ ಕ್ಷಣದ ಸತ್ಯ.

ಪತ್ನಿ ವಿರುದ್ಧವೇ ಸುಳ್ಳು ದರೋಡೆ ಕೇಸ್ ದಾಖಲು: ಸ್ಯಾಂಟ್ರೋ ರವಿಗೆ ಸಾಥ್ ನೀಡಿದ್ದ ಪೊಲೀಸ್​ ಇನ್ಸ್​​ಪೆಕ್ಟರ್ ವಿರುದ್ಧ ಕೈಗೊಂಡ ಕ್ರಮವೇನು?
ಸ್ಯಾಂಟ್ರೋ ರವಿಗೆ ಸಾಥ್ ನೀಡಿದ್ದ ಪೊಲೀಸ್​ ಇನ್ಸ್​​ಪೆಕ್ಟರ್ ವಿರುದ್ಧ ಕೈಗೊಂಡ ಕ್ರಮವೇನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Sep 05, 2023 | 9:42 AM

ಬೆಂಗಳೂರು, ಸೆಪ್ಟೆಂಬರ್​ 5: ಈ ಹಿಂದೆ ತಮ್ಮ ಪತ್ನಿಯ (Wife) ವಿರುದ್ಧವೇ ಸ್ಯಾಂಟ್ರೋ ರವಿ (Santro Ravi) ಸುಳ್ಳು ದರೋಡೆ ಕೇಸ್ ಪ್ರಕರಣ (False robbery case) ದಾಖಲಿಸಿದ್ದು, ಅದಕ್ಕೆ ಸಾಥ್ ನೀಡಿದ್ದ ಆ ಪೊಲೀಸ್​​ ಅಧಿಕಾರಿಯ ವಿರುದ್ಧ ಏನಾದರೂ ಕ್ರಮ ಕೈಗೊಂಡಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ಸುಳ್ಳು ಕೇಸ್ ನಲ್ಲಿ ಶಾಮಿಲಾಗಿದ್ದ ಆ ಓರ್ವ ಇನ್ಸ್​​ಪೆಕ್ಟರ್ ಮಹಿಳೆಯ ಮೇಲೆ ಸುಳ್ಳು ದರೋಡೆ ಕೇಸ್ ದಾಖಲಿಸಿದ್ದರು. ಸುಳ್ಳು ಪ್ರಕರಣದ ಸಂಗತಿ ಬೆಳಕಿಗೆ ಬರುತಿದ್ದಂತೆ ತನಿಖೆ ಶಾಸ್ತ್ರ (Bangalore Police) ನಡೆಯತೊಡಗಿತ್ತು. ಖುದ್ದು ಡಿಸಿಪಿ ಸುಳ್ಳು ಪ್ರಕರಣದ ಬಗ್ಗೆ ನಗರ ಪೊಲೀಸ್ ಆಯುಕ್ತರಿಗೆ ವರದಿ ನೀಡಿದ್ದರು. ಬಳಿಕ ಪ್ರಕರಣದ ತನಿಖೆ ಸಿಸಿಬಿಗೆ (CCB) ವರ್ಗವಾಗಿತ್ತು.

ಆರೋಪ ಸಂಬಂಧ ಆ ಇನ್ಸ್​​ಪೆಕ್ಟರ್ ವಿರುದ್ಧ ಕ್ರಮವೇ ಜರುಗಿಸಿಲ್ಲ! ಯಾಕೆ?

2022ರಲ್ಲಿ ಕಾಟನ್ ಪೇಟೆಯ ಅಂದಿನ ಇನ್ಸ್ ಪೆಕ್ಟರ್ ಪ್ರವೀಣ್ ದಾಖಲಿಸಿದ್ದ ಸುಳ್ಳು ಪ್ರಕರಣ‌ ಅದಾಗಿತ್ತು. ಸ್ಯಾಂಟ್ರೋ ರವಿ ಜೊತೆಗೂಡಿ ಪ್ರಕಾಶ್ ಎಂಬಾತನಿಂದ ದಾಖಲಾಗಿದ್ದ ಸುಳ್ಳು ಕೇಸ್ ಅದಾಗಿತ್ತು. ಸುಳ್ಳು ಪ್ರಕರಣದ ತನಿಖೆ ಕೈಗೊಂಡಿದ್ದ ಸಿಸಿಬಿ ಪೊಲೀಸರು, ಬಿ ರಿಪೊರ್ಟ್ ಸಲ್ಲಿಸಿದ್ದರು. ತನಿಖೆ ವೇಳೆ ಇನ್ಸ್ ಪೆಕ್ಟರ್ ಪ್ರವೀಣ್ ಶಾಮೀಲಾದ ಸಾಕ್ಷ್ಯ ಸಹ ಸಂಗ್ರಹಿಸಿದ್ದರು. ಸ್ಯಾಂಟ್ರೋ ರವಿ ಷಡ್ಯಂತರದಿಂದ ಅವನ ಪರ ನೆಲಮಂಗಲದ ಪ್ರಕಾಶ್ ದೂರು ದಾಖಲಿಸಿದ್ದ. ಬಿಟಿಎಂ ಲೇಔಟ್ ನ ಶೇಖ್ ಸಹ ಅದಕ್ಕೆ ಕೈ ಜೊಡಿಸಿದ್ದ.

ಇದನ್ನೂ ಓದಿ: ಕುಖ್ಯಾತ ವಿಚಾರಣಾಧೀನ ಕೈದಿ ಸ್ಯಾಂಟ್ರೋ ರವಿ ಮೈಸೂರು ಜೈಲಿನಲ್ಲಿ ಅಧಿಕಾರಿಗಳಿಗೆ ಬಾಯಿಗೆ ಬಂದಂತೆ ಬೈತಾನಂತೆ!

ಸಾಲ ಕೊಡುವ ನೆಪದಲ್ಲಿ ಚಾಕುವಿನಿಂದ ಇರಿದು ದರೊಡೆ ಮಾಡಿದ ಸುಳ್ಳು ದೂರು ದಾಖಲು ಮಾಡಲಾಗಿತ್ತು. ಈ ವೇಳೆ ಹಣ, ಚಿನ್ನಾಭರಣ ಸಹ ದೊಚಿದ್ದಾಗಿ ಪ್ರಕಾಶ್ ನ ಸುಳ್ಳು ದೂರಿನಲ್ಲಿತ್ತು. ಸ್ಯಾಂಟ್ರೋ ರವಿ ಪತ್ನಿ ಹಾಗೂ ನಾದಿನಿ ಮೇಲೆ ಆ ಆರೋಪ ಮಾಡಲಾಗಿತ್ತು. ಆದರೆ ಪತ್ನಿಯಿಂದ ಲ್ಯಾಪ್ ಟಾಪ್ ಮತ್ತು ಇನ್ನಿತರೆ ದಾಖಲೆ ಪಡೆಯಲು ಸ್ಯಾಂಟ್ರೋ ರವಿ ಹೂಡಿದ್ದ ಷಡ್ಯಂತ್ರ ಅದಾಗಿತ್ತು.

ಸುಳ್ಳು ಕೇಸ್ ಸಂಬಂಧ ಪ್ಲ್ಯಾನ್ ನಂತೆ ಇನ್ಸ್ ಪೆಕ್ಟರ್ ಭಾಗಿಯಾಗಿದ್ದರು. ಜೊತೆಗೆ ಸುಳ್ಳು ಪ್ರಕರಣ ಸಂಬಂಧ ಇಬ್ಬರೂ ಮಹಿಳೆಯರನ್ನು ಇನ್ಸ್ ಪೆಕ್ಟರ್ ಬಂಧಿಸಿದ್ದರು. ಈ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಪ್ರವೀಣ್ ವಿರುದ್ಧ ಸ್ಯಾಂಟ್ರೋ ಪತ್ನಿ ಕ್ರಮಕ್ಕೆ ಆಗ್ರಹಿಸಿದ್ದರು. ಸುಳ್ಳು ಕೇಸ್ ಹಾಕಿ ತಮ್ಮನ್ನು ಜೈಲಿಗಟ್ಟಿದ್ದ ಇನ್ಸ್ ಪೆಕ್ಟರ್ ವಿರುದ್ಧ ಎಫ್ ಐಆರ್ ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದರು. ಈ ಸಂಬಂಧ ಕಾಟನ್ ಪೇಟೆ ಠಾಣೆಗೆ ಹಾಗೂ ಎಸಿಪಿಗೆ ದೂರು ನೀಡಿದ್ದರು.

ನನ್ನ ಹಾಗೂ ನನ್ನ ತಂಗಿ ಸ್ಟೇಟ್ ಮೆಂಟ್ ಅನ್ನು ಪೊಲೀಸರೇ ಮಾಡಿಕೊಂಡಿದ್ದರು. ಹತ್ತಕ್ಕೂ ಹೆಚ್ಚು ಪೊಲೀಸರು ನಮಗೆ ಟಾರ್ಚರ್ ನೀಡಿದ್ದರು. ಘಟನೆ ವೇಳೆ ತಾವು ಮೈಸೂರಿನಲ್ಲಿದ್ದರೂ, ಷಡ್ಯಂತರ ರೂಪಿಸಿ ಸುಳ್ಳು ಕೇಸ್ ನಲ್ಲಿ ನಮ್ಮಿಬ್ಬರನ್ನೂ ಬಂಧಿಸಿದ್ದರು. ಇನ್ಸ್ ಪೆಕ್ಟರ್ ಪ್ರವೀಣ್ ಪ್ರಕರಣದಲ್ಲಿ ಪ್ರಮುಖ ಪಾತ್ರಧಾರಿ. ಆತನ ವಿರುದ್ಧ ಕೇಸ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಮಹಿಳೆ ದೂರು ನೀಡಿದ್ದರು.

ಕೇಸ್ ನ ತನಿಖೆಯಾಗಿ 8 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಬೆಳಕಿಗೆ ಬಂದಿದೆ. ಪಶ್ಚಿಮ ವಿಭಾಗದ ಡಿಸಿಪಿ ಸಲ್ಲಿಸಿದ್ದ ತನಿಖಾ ವರದಿಯಲ್ಲಿ ಇನ್ಸ್ ಪೆಕ್ಟರ್ ಪ್ರವೀಣ್ ಕರ್ತವ್ಯ ಲೋಪವೆಸಗಿರುವುದು ಬಹಿರಂಗವಾಗಿತ್ತು. ಸಿಸಿಬಿ ತನಿಖೆಯ ವೇಳೆಯೂ ಆತನ ಪಾತ್ರ ಬಹಿರಂಗವಾಗಿತ್ತು. ಹೀಗಿದ್ದರೂ ಆ ಅಧಿಕಾರಿ ವಿರುದ್ದ ಇದುವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂಬುದು ಈ ಕ್ಷಣದ ಸತ್ಯ. ಇನ್ನಾದರೂ ಆ ಇನ್ಸ್ ಪೆಕ್ಟರ್ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಾರಾ?

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ