ಕೊಡಗು: ಮಗನನ್ನೆ ಬಂದೂಕಿನಿಂದ (gun) ಗುಂಡಿಟ್ಟು ತಂದೆ ಹತ್ಯೆ (killed) ಮಾಡಿರುವಂತಹ ಘಟನೆ ಜಿಲ್ಲೆಯ ಮಡಿಕೇರಿ ತಾಲೂಕಿನ ಕಟ್ಟೆಮಾಡು ಗ್ರಾಮದಲ್ಲಿ ನಡೆದಿದೆ. ತಂದೆ ನಂದೇಟಿರ ಚಿಟ್ಟಿಯಪ್ಪನಿಂದ ಪುತ್ರ ನಿರೆನ್(28) ಹತ್ಯೆ ಮಾಡಲಾಗಿದೆ. ಪುತ್ರನನ್ನು ಹತ್ಯೆಗೈದು ತಂದೆ ಪೊಲೀಸರಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಪುತ್ರನನ್ನು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಬೆಂಗಳೂರು: ಆತ ಹೆಂಡತಿಗೆ ಕೈಕೊಟ್ಟು ಆಕೆಗೆ ತಿಳಿಯದಂತೆ ನಮ್ಮ ಸಂಸಾರ ಆನಂದ ಸಾಗರ ಅಂತ ಪ್ರೇಯಸಿ ಜೊತೆ ಕಾಲ ಕಳೆಯುತ್ತಿದ್ದನು. ಒಂದು ದಿನ ತನ್ನನ್ನು ಬಿಟ್ಟು ಪ್ರೇಯಸಿ ಜೊತೆ ಲವ್ವಿಡವ್ವಿಯಲ್ಲಿ ತೊಡಗಿರುವುದು ತಿಳಿದು ಆಕ್ರೋಶಭರಿತಳಾಗಿ ಪತ್ನಿ ಎಂಟ್ರಿಕೊಟ್ಟಿದ್ದಾಳೆ. ಇತ್ತ ಸಿಕ್ಕಿಬಿದ್ದ ಗಂಡ ಮತ್ತು ಮಹಿಳೆಗೆ ದಿಕ್ಕು ತೋಚದಂತಾಗಿದೆ. ಪರಿಣಾಮ ತನ್ನ ಪತ್ನಿಯಿಂದ ಗಂಡ ಹಾಗೂ ಆತನ ಪ್ರೇಯಸಿ ಹಿಗ್ಗಾಮುಗ್ಗ ಬೈಗುಳ ತಿನ್ನಬೇಕಾಯಿತು. ಇನ್ನು ಪತ್ನಿಯ ಕೋಪಕ್ಕೆ ತುತ್ತಾಗಿ ಎದುರಿಗೆ ನಿಂತವರಿದ್ದಾರೆಯೇ? ಪತ್ನಿಯ ಚೀರಾಟಕ್ಕೆ ಹೆದರಿದ ಪತಿರಾಯ ಮನೆಬಿಟ್ಟೇ ಹೋಗುವಂತಾಯಿತು. ಆದರೀಗ ಆತ ಶವವಾಗಿ ಪತ್ತೆಯಾಗಿದ್ದು, ಬೆಂಗಳೂರು ನಗರದ ಜ್ಞಾನಭಾರತಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ದೊಡ್ಡಬಳ್ಳಾಪುರ: ಕೊಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಮೇಲೆ ಪೊಲೀಸ್ ಫೈರಿಂಗ್
ನಾಗೇಶ್ ಎಂಬಾತ ತನ್ನ ಪತ್ನಿಯನ್ನು ಬಿಟ್ಟು ಸುನೀತ ಎಂಬಾಕೆಯೊಂದಿಗೆ ಅಕ್ರಮ ಸಂಬಂಧವನ್ನು ನಡೆಸುತ್ತಿದ್ದನು. ಹೀಗೆ ಪ್ರೇಯಸಿ ಜೊತೆ ಇರುವಾಗ ಪತ್ನಿ ಎಂಟ್ರಿ ಕೊಟ್ಟು ಇಬ್ಬರಿಗೂ ಹಿಗ್ಗಾಮುಗ್ಗ ಬೈದಿದ್ದಾಳೆ. ಪತ್ನಿಯ ಚೀರಾಟಕ್ಕೆ ಹೆದರಿದ ನಾಗೇಶ್, ತನ್ನ ಮನೆ ಖಾಲಿ ಮಾಡಿ ಪ್ರೇಯಸಿ ಜೊತೆ ಎಸ್ಕೇಪ್ ಆಗಿದ್ದನು. ಈ ಬಗ್ಗೆ ಪತ್ನಿ ಕುಂಬಳಗೋಡು ಠಾಣೆಯಲ್ಲಿ ಪತಿ ಮಿಸ್ಸಿಂಗ್ ಅಂತಾ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ: ಯಾದಗಿರಿ: ಮದುವೆಯಾದರೂ ಯುವಕನ ಜೊತೆ ಪ್ರೀತಿ ಮುಂದುವರೆಸಿದ್ದ ಯುವತಿ; ಇಬ್ಬರು ಆತ್ಮಹತ್ಯೆಗೆ ಶರಣು
ಗದಗ: ಕ್ಷುಲ್ಲಕ ಕಾರಣಕ್ಕೆ ಮಗ ತಂದೆಯನ್ನ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದಲ್ಲಿ ನಡೆದಿದೆ. ಡಿಸೆಂಬರ್ ತಿಂಗಳಲ್ಲಿ ಇದೇ ಗ್ರಾಮದಲ್ಲಿ ಶಿಕ್ಷಕನೊಬ್ಬ ಓರ್ವ ಶಿಕ್ಷಕಿ ಹಾಗೂ ಮಗುವನ್ನು ಭೀಕರವಾಗಿ ಕೊಂದು ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಅದೇ ಗ್ರಾಮದಲ್ಲಿ ಈಗ ಮತ್ತೊಂದು ಭೀಕರ ಕೊಲೆಯಾಗಿದೆ. ಹೌದು ತಂದೆ ಮಲಕಸಾಬ್ನನ್ನು ಪಾಪಿ ಪುತ್ರ ಮೌಲಾಸಾಬ್ ಕೊಡಲಿಯಿಂದ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಗ್ರಾಮದ ನಡುರಸ್ತೆಯಲ್ಲೇ ತಂದೆಯನ್ನು ಕೊಂದು ಹಾಕಿದ್ದಾನೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:53 pm, Sun, 19 February 23