ಯಾದಗಿರಿ: ಮದುವೆಯಾದರೂ ಯುವಕನ ಜೊತೆ ಪ್ರೀತಿ ಮುಂದುವರೆಸಿದ್ದ ಯುವತಿ; ಇಬ್ಬರು ಆತ್ಮಹತ್ಯೆಗೆ ಶರಣು

ಅವರಿಬ್ಬರು ಕಳೆದ ಆರೇಳು ವರ್ಷದಿಂದ ಪರಸ್ಪರ ಪ್ರೀತಿ ಮಾಡ್ತಾಯಿದ್ರು. ಆದ್ರೆ ಕಳೆದ ಎರಡು ವರ್ಷಗಳ ಹಿಂದೆ ಆಕೆಯನ್ನ ಮದುವೆ ಮಾಡಿ ಬೇರೆ ಊರಿಗೆ ಕೊಡಲಾಗಿತ್ತು. ಮದುವೆಯಾದ್ರು ಇಬ್ಬರ ಮಧ್ಯೆ ಪ್ರೇಮ ಮುಂದೆ ವರೆದಿತ್ತು. ಆದ್ರೆ ನಿನ್ನೆ ರಾತ್ರಿ ಇಬ್ಬರ ಮಧ್ಯೆ ಏನಾಗಿದಿಯೋ ಗೊತ್ತಿಲ್ಲ. ಬೆಳಗ್ಗೆ ಆಗುವಷ್ಟರಲ್ಲಿ ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಯಾದಗಿರಿ: ಮದುವೆಯಾದರೂ ಯುವಕನ ಜೊತೆ ಪ್ರೀತಿ ಮುಂದುವರೆಸಿದ್ದ ಯುವತಿ; ಇಬ್ಬರು ಆತ್ಮಹತ್ಯೆಗೆ ಶರಣು
ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 19, 2023 | 2:54 PM

ಯಾದಗಿರಿ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಹುರುಸಗುಂಡಗಿ ಗ್ರಾಮದಲ್ಲಿ ನಡೆದಿದೆ. ಗ್ರಾಮವೇ ಶಾಕ್ ಆಗುವಂತ ಘಟನೆ ಬೆಳ್ಳಂಬೆಳಗ್ಗೆ ನಡೆದು ಹೋಗಿದೆ. ಬದುಕಿ ಬಾಳಬೇಕಿದ್ದ ಇಬ್ಬರು ಪ್ರೇಮಿಗಳು ಸಾವಿನ ಮನೆ ಸೇರಿದ್ದಾರೆ. ಹೌದು ಗ್ರಾಮದ 22 ವರ್ಷದ ಈಶಪ್ಪ ಇದೆ ಗ್ರಾಮದ 20 ವರ್ಷದ ಸುವರ್ಣ ಎಂಬುವವರ ಜೊತೆ ಪ್ರೀತಿ ಮಾಡ್ತಾಯಿದ್ದ. ಒಂದೆ ಊರಿನವರು ಆಗಿದ್ದರಿಂದ ಇಬ್ಬರು ಕಳೆದ ಆರೇಳು ವರ್ಷದಿಂದ ಪ್ರೀತಿ ಮಾಡ್ತಾಯಿದ್ರು. ಆದರೆ ಕಳೆದ ಎರಡು ವರ್ಷಗಳ ಹಿಂದೆ ಯುವತಿ ಪೋಷಕರು ಆಕೆಯನ್ನ ಜಿಲ್ಲೆಯ ವಡಗೇರ ತಾಲೂಕಿನ ಗೋಡಿಹಾಳ ಗ್ರಾಮದ ಯುವಕನಿಗೆ ಮದುವೆ ಮಾಡಿಕೊಟ್ಟಿದ್ರು. ಹೀಗಾಗಿ ಪತಿ ಪತ್ನಿ ಇಬ್ಬರು ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.

ಆದರೆ ಮದುವೆಯಾದರೂ ಕೂಡ ಸುವರ್ಣ ಈಶಪ್ಪನ ಜೊತೆ ಸಂಪರ್ಕದಲ್ಲಿದಳು. ಹೀಗಾಗಿ ಆಗಾಗ ಸುವರ್ಣ ಗಂಡನಿಗೆ ಗೊತ್ತಾಗದ ರೀತಿಯಲ್ಲಿ ಈಶಪ್ಪನಿಗೆ ಭೇಟಿಯಾಗುತ್ತಿದ್ದು, ಕಳೆದ ಆರು ತಿಂಗಳ ಹಿಂದೆ ಇದೆ ಈಶಪ್ಪ ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುತ್ತೆನೆ ಎಂದು ಮನೆಯಲ್ಲಿ ಹೇಳಿ ಬೆಂಗಳೂರಿಗೆ ಹೋಗಿ ಸುವರ್ಣ ಜೊತೆಗೆ ಮೈಸೂರು ಕಡೆ ಟ್ರಿಪ್ ಮಾಡಿದ್ದ. ಇಷ್ಟೇಲ್ಲ ಆದ್ರೆ ಯಾರಿಗೂ ಇಬ್ಬರು ಪ್ರೇಮದ ಬಗ್ಗೆ ಗೊತ್ತೆ ಆಗಿರಲಿಲ್ಲ. ಆದ್ರೆ ಕಳೆದ ನಾಲ್ಕು ದಿನಗಳ ಹಿಂದೆ ಈಶಪ್ಪ ಮತ್ತೆ ಮನೆಯಲ್ಲಿ ಮನೆ ದೇವರ ದರ್ಶನಕ್ಕೆ ಹೋಗುತ್ತೆನೆ ಅಂತ ಸುಳ್ಳು ಹೇಳಿ ಮತ್ತೆ ಬೆಂಗಳೂರಿಗೆ ಹೋಗಿದ್ದ. ಸುವರ್ಣ ಜೊತೆ ನಾಲ್ಕು ದಿನ ಬೆಂಗಳೂರಿನಲ್ಲಿದ್ದ ಈಶಪ್ಪ ವಾಪಸ್ ನಿನ್ನೆ(ಫೆ.18) ರಾತ್ರಿ ಇಬ್ಬರು ಜೊತೆಯಾಗಿ ಊರಿಗೆ ಬಂದಿದ್ದಾರೆ. ಬಳಿಕ ಊರ ಹೊರ ಭಾಗದಲ್ಲಿರುವ ಹಳ್ಳದ ಬಳಿ ಬೆಳಗಿನ ಜಾವ ಬಂದಿದ್ದ ಇಬ್ಬರು ಕೀಟನಾಶಕ ಸೇವಿಸಿ ಸಾವಿನ ಮನೆ ಸೇರಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ: ಮದುವೆಯಾಗುವಂತೆ ಪೀಡಿಸುತ್ತಿದ್ದ ಭಾವಿ ಪತಿ, ಸಂಬಂಧಿಕರು: ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ಇನ್ನು ಇಬ್ಬರು ಬೆಳಗ್ಗೆ ಬಂದು ಹಳ್ಳದ ಬಳಿ ಜಮೀನಿನಲ್ಲಿ ಕುಳಿತುಕೊಂಡಿದ್ದಾರೆ. ಹೀಗೆ ಕದ್ದು ಮುಚ್ಚಿ ಎಷ್ಟು ದಿನ ಅಂತ ಭೇಟಿ ಆಗೋದು ಇಬ್ಬರು ಮುಂದೆ ಒಂದಾಗುವುದ್ದಕ್ಕೆ ಸಾಧ್ಯವಿಲ್ಲ ಅಂತ ಅಂದುಕೊಂಡಿದ್ದಾರೆ. ಇಬ್ಬರು ಒಂದೆರಡು ಗಂಟೆಗಳ ಕಾಲ ಯೋಚನೆ ಮಾಡಿದ್ದಾರೆ. ಬಳಿಕ ಬೆಂಗಳೂರಿನಿಂದಾನೆ ತಂದಿದ್ದ ಕೀಟನಾಶಕವನ್ನ ಸೇವಿಸಿದ್ದಾರೆ. ಸೇವಿಸಿದ ಬಳಿಕ ಸುವರ್ಣ ಸ್ಥಳದಲ್ಲೇ ಬಿದ್ದು ಒದ್ದಾಡುತ್ತಿದ್ದಳು. ನಸುಗಿನ ಜಾವ ಗ್ರಾಮಸ್ಥರು ಬಹಿರ್ದೇಸೆಗೆ ಹೋದಾಗ ನೋಡಿದ್ದಾರೆ. ಕೂಡಲೇ ಸುವರ್ಣ ಹಾಗೂ ಈಶಪ್ಪನ ಮನೆಯಲ್ಲಿ ವಿಷಯ ತಿಳಿಸಿದ್ದಾರೆ. ಈಶಪ್ಪನ ಕುಟುಂಬಸ್ಥರು ಶಹಾಪುರದ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದ್ರೆ ಅತಿಯಾದ ಕೀಟನಾಶಕ ಸೇವಿಸಿದ್ದ ಕಾರಣಕ್ಕೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ.

ಇನ್ನು ಇತ್ತು ಸುವರ್ಣಗೆ ಆಸ್ಪತ್ರೆಗೆ ಕರೆದುಕೊಂಡು ಹೋಗುವುದ್ದಕ್ಕೆ ತಡವಾಗಿದ್ದ ಕಾರಣಕ್ಕೆ ಸುವರ್ಣ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಇನ್ನು ಇಬ್ಬರ ಮಧ್ಯೆ ಕಳೆದ ಆರೇಳು ವರ್ಷಗಳಿಂದ ಪ್ರೇಮ ಇದ್ರು ಸಹ ಇಬ್ಬರ ಮನೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಈಶಪ್ಪ ರೈತನಾಗಿದ್ದರಿಂದ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇರ್ತಾಯಿದ್ದ ಇನ್ನು ಮದುವೆ ವಯಸ್ಸು ಕೂಡ ಆಗಿಲ್ಲ ಅಂತ ಮನೆಯಲ್ಲಿ ಮದುವೆ ಮಾಡುವ ಕೆಲಸಕ್ಕೂ ಇನ್ನು ಮುಂದಾಗಿರಲಿಲ್ಲ. ಆದ್ರೆ ಇಬ್ಬರು ಮಾತ್ರ ಪ್ರೀತಿ ಪ್ರೇಮ ಅಂತ ತಲೆ ಕಡೆಸಿಕೊಂಡಿದ್ರು. ಮದುವೆಯಾಗಿ ಸುವರ್ಣ ಗಂಡನ ಮನೆಗೆ ಹೋಗಿದ್ದರಿಂದ ಇಬ್ಬರು ಮುಂದೆಂದು ಒಂದಾಗಲ್ಲ ಅಂತ ಅಂದುಕೊಂಡು ವಿಷ ಸೇವಿಸಿ ಪ್ರಾಣ ಬಿಟ್ಟಿದ್ದಾರೆ.

ಇದನ್ನೂ ಓದಿ:ಪ್ರೇಮಿಗಳ ದಿನಾಚರಣೆ ಮಧ್ಯೆ ನಂದಿಬೆಟ್ಟದ ಟಿಪ್ಪು ಡ್ರಾಪ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಂಗಳೂರು ಯುವಕನ ಶವ ಪತ್ತೆ!

ಒಟ್ಟಿನಲ್ಲಿ ಪ್ರೀತಿ ಪ್ರೇಮ ಅಂತ ತಲೆ ಕೆಡಿಸಿಕೊಂಡಿದ್ದ ಇಬ್ಬರು ಇವತ್ತು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇಬ್ಬರ ಮಧ್ಯೆದ ಪ್ರೇಮದ ಬಗ್ಗೆ ಮನೆಯಲ್ಲಿ ಹೇಳಿದ್ರೆ ಇವತ್ತು ಇಬ್ಬರು ಜೊತೆಯಾಗಿ ಇರ್ತಾಯಿದ್ರು. ಆದ್ರೆ ದುಡುಕಿ ನಿರ್ಧಾರ ಕೈಗೊಂಡು ಕುಟುಂಬಸ್ಥರಿಗೆ ಕಣ್ಣೀರಲ್ಲಿ ಕೈತೊಳೆಯುವಂತೆ ಮಾಡಿದ್ದಾರೆ.

ವರದಿ: ಅಮೀನ್ ಹೊಸುರ್ ಟಿವಿ9 ಯಾದಗಿರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಮೋಕ್ಷಿತಾ ಪೈ ಹಳೇ ಕೇಸ್​ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ಮೋಕ್ಷಿತಾ ಪೈ ಹಳೇ ಕೇಸ್​ ಬಗ್ಗೆ ಗೋಲ್ಡ್ ಸುರೇಶ್ ಹೇಳಿದ್ದೇನು?
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ತುಂಬಾ ನೊಂದಿದ್ದೇನೆ, ಮಾತಾಡಲಾಗಲ್ಲ; ನಾಳೆ ಮಾತಾಡ್ತೀನಿ: ಹೆಬ್ಬಾಳ್ಕರ್
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸತತ 7 ಎಸೆತಗಳಲ್ಲಿ 7 ಬೌಂಡರಿ ಬಾರಿಸಿದ ಸ್ಮೃತಿ
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ಸುವರ್ಣಸೌಧದಿಂದಲೇ ಸಿ.ಟಿ ರವಿನ ಹೇಗೆ ಪೊಲೀಸ್ರು ಎತ್ತಾಕೊಂಡು ಹೋದ್ರು ನೋಡಿ..
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ವಕ್ಫ್ ಹೋರಾಟ; ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಗೊತ್ತಿಲ್ಲ: ವಿಜಯೇಂದ್ರ
ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಈ ಬಾರಿ ಬಿಗ್​ಬಾಸ್​ ಗೆಲ್ಲೋದು ಯಾರು? ಉತ್ತರ ಕೊಟ್ಟ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ಬಿಗ್ ಬಾಸ್​ಗೆ ಆಯ್ಕೆ ಆಗುವುದು ಹೇಗೆ? ಪ್ರಕ್ರಿಯೆ ವಿವರಿಸಿದ ಗೋಲ್ಡ್ ಸುರೇಶ್
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ರವಿ ಮಾತಿಂದ ಲಕ್ಷ್ಮಿ ಹೆಬ್ಬಾಳ್ಕರ್ ಬಹಳ ನೊಂದುಕೊಂಡಿದ್ದಾರೆ: ಸಿದ್ದರಾಮಯ್ಯ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಆಸೀಸ್ ಮಾಧ್ಯಮಗಳ ಮೇಲೆ ಮುಗಿಬಿದ್ದ ವಿರಾಟ್ ಕೊಹ್ಲಿ
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್
ಸಹ ಸ್ಪರ್ಧಿಗಳ ಸ್ವಿಮ್ಮಿಂಗ್ ಪೂಲ್​ಗೆ ತಳ್ಳಿದ ಮೋಕ್ಷಿತಾ, ರಜತ್