AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಾದಗಿರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಬೆಂಕಿ ಅವಘಡ; ಸುಟ್ಟು ಕರಕಲಾದ ಬ್ಯಾಂಕ್ ದಾಖಲೆಗಳು

ಕಂಪ್ಲಿಯ ರಾಮಸಾಗರ ಗ್ರಾಮದ ವಿಠಲಾಪುರ ಕೆರೆ ಬಳಿಯ ಗುಡ್ಡದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ.

ಯಾದಗಿರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಬೆಂಕಿ ಅವಘಡ; ಸುಟ್ಟು ಕರಕಲಾದ ಬ್ಯಾಂಕ್ ದಾಖಲೆಗಳು
ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಬೆಂಕಿ ಅವಘಡ
TV9 Web
| Edited By: |

Updated on: Apr 06, 2022 | 11:06 PM

Share

ಯಾದಗಿರಿ: ಕರ್ನಾಟಕ ಗ್ರಾಮೀಣ ಬ್ಯಾಂಕ್​ನಲ್ಲಿ ಬೆಂಕಿ (Fire)  ಅವಘಡ ಸಂಭವಿಸಿದೆ. ಜಿಲ್ಲೆಯ ಗುರುಮಠಕಲ್‌ ಪಟ್ಟಣದಲ್ಲಿರುವ ನಡೆದಿದೆ. ಅಗ್ನಿ ಅವಘಡದಿಂದ ಬ್ಯಾಂಕ್ ಹೊತ್ತಿ ಉರಿದಿದೆ. ಕಟ್ಟಡದ ಮೊದಲ ಮಹಡಿಯಲ್ಲಿರುವ ಬ್ಯಾಂಕ್, ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ ಹತ್ತಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಅಗ್ನಿ ಅವಘಡದಿಂದ ಬ್ಯಾಂಕ್​ನಲ್ಲಿದ್ದ ದಾಖಲೆಗಳು ಹಾಗೂ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುಮಠಕಲ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕ್ರಿಕೆಟ್ ಬೆಟ್ಟಿಂಗ್, ಜೂಜಾಟ ಆಡುತ್ತಿದ್ದ 4 ಜನರ ಬಂಧನ:

ಬಳ್ಳಾರಿ: ನಗರದ ಕೌಲ್ ಬಜಾರ್‌ ಪೊಲೀಸರ ಕಾರ್ಯಾಚರಣೆಯಿಂದ ಕ್ರಿಕೆಟ್ ಬೆಟ್ಟಿಂಗ್, ಜೂಜಾಟ ಆಡುತ್ತಿದ್ದ 4 ಜನರ ಬಂಧನ ಮಾಡಲಾಗಿದೆ. ಬಂಧಿತರಿಂದ 1,01,070 ನಗದು ಹಾಗೂ 4 ಮೊಬೈಲ್ ಹಣ ವಶಕ್ಕೆ ಪಡೆಯಲಾಗಿದೆ. ಕೋಟೆ ಪ್ರದೇಶದಲ್ಲಿ ಕ್ರಿಕೇಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ವೇಳೆ ದಾಳಿ ಮಾಡಲಾಗಿದೆ. ಕ್ರಿಕೆಟ್ ಬೆಟ್ಟಿಂಗ್​ಗೆ ಬಳಸುತ್ತಿದ್ದ ICICI ಬ್ಯಾಂಕ್​ ಖಾತೆ ಸೀಜ್ ಮಾಡಲಾಗಿದ್ದು, ಬ್ಯಾಂಕ ಖಾತೆಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ಬಳಸಿದ 13 ಲಕ್ಷ ರೂಪಾಯಿ ಜಮೆ ಮಾಡಲಾಗಿದೆ. ಮಹ್ಮದ್ ಜುಬೇರ್. ಪ್ರಕಾಶ, ಕೃಷ್ಣಮೂರ್ತಿ, ವಿಜಯಕುಮಾರ್, ರವಿಕಿರಣ್ ಕ್ರಿಕೆಟ್ ಬೆಟ್ಟಿಂಗ್​ನಲ್ಲಿ ತೊಡಗಿದ್ದರು. ನಾಲ್ವರ ಬಂಧನ ಮಾಡಲಾಗಿದ್ದು ಓರ್ವ ಪರಾರಿಯಾಗಿದ್ದಾನೆ. ಬಳ್ಳಾರಿಯ ಕೌಲ ಬಜಾರ್ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಠಲಾಪುರ ಕೆರೆ ಬಳಿಯ ಗುಡ್ಡದಲ್ಲಿ ನಡೆದಿದ್ದ ಕೊಲೆ ಪ್ರಕರಣ; ಮತ್ತಿಬ್ಬರ ಆರೋಪಿಗಳ ಬಂಧನ:

ಬಳ್ಳಾರಿ: ಕಂಪ್ಲಿಯ ರಾಮಸಾಗರ ಗ್ರಾಮದ ವಿಠಲಾಪುರ ಕೆರೆ ಬಳಿಯ ಗುಡ್ಡದಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ. ಮಾರ್ಚ್ ೧೯ ರಂದು ಗಂಗಾವತಿಯ ಪ್ಲಾಂಟ್​ನಲ್ಲಿ ಹಮಾಲಿಯಾಗಿದ್ದ ಅಮರೇಶ ಕೊಲೆ ಮಾಡಲಾಗಿತ್ತು. ಕೊಲೆ‌ ಮಾಡಿ ಗುಡ್ಡದಲ್ಲಿ ಶವ ಬಿಸಾಕಿದ ೧೦ ದಿನಗಳ‌ ನಂತರ ತಲೆಬುರುಡೆ, ಮೂಳೆಗಳು ಪತ್ತೆಯಾಗಿದ್ದವು. ಶರ್ಟ್ ಕಾರ್ಲರ್ ಗುರುತಿನ ಮೇಲೆ ಕೊಲೆ ಆರೋಪಿಗಳನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಇಂದು ಮತ್ತಿಬ್ಬರು ಆರೋಪಿಗಳ ಬಂಧನ ಮಾಡಲಾಗಿದ್ದು, ಶಹಾಪುರ ತಾಲೂಕಿನ ದೊಡ್ಡಸಾಗರ ಗ್ರಾಮದ ಮಲ್ಮಲ್ಲಿಕಾರ್ಜುನ ಮತ್ತು ಅಫಜಲಪುರ ತಾಲ್ಲೂಕಿನ ಔರಾದ್ ಗ್ರಾಮದ ಸಂಗಮನಾಥ ಬಂಧಿತರು. ಈ ಮೊದಲು ಕಿರಣಕುಮಾರ್ ಹಾಗೂ ರೇವಣ್ಣಸಿದ್ದಯ್ಯರನ್ನ ಪೊಲೀಸರು ಬಂಧಿಸಿದ್ದರು. ಕಿರಣಕುಮಾರ್ ಸಹೋದರಿಯನ್ನ ಚುಡಾಯಿಸಿ ಅಮರೇಶ್ ಕೊಲೆಯಾಗಿದ್ದ. ಕಂಪ್ಲಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

Indian Railway Recruitment 2022: ರೈಲ್ವೆ ಇಲಾಖೆಯ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

Covid XE Variant: ಭಾರತದಲ್ಲಿ ಕೊವಿಡ್ ರೂಪಾಂತರಿ XE ಮೊದಲ ಪ್ರಕರಣ ಮುಂಬೈನಲ್ಲಿ ಪತ್ತೆ ಎಂದ ಬಿಎಂಸಿ; ಇದಕ್ಕೆ ಪುರಾವೆಗಳಿಲ್ಲ ಎಂದ ಕೇಂದ್ರ ಸರ್ಕಾರ