ಶಾರ್ಟ್ ಸರ್ಕ್ಯೂಟ್ನಿಂದ 9 ಗುಡಿಸಲು ಬೆಂಕಿಗಾಹುತಿ ಪ್ರಕರಣ: ಮೂವರ ವಿರುದ್ಧ FIR ದಾಖಲು
ಶಾರ್ಟ್ ಸರ್ಕ್ಯೂಟ್ನಿಂದ 9 ಗುಡಿಸಲು ಬೆಂಕಿಗಾಹುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಟ್ಟಮರಡಿ ಜೆಸ್ಕಾಂನ ಜೆಸ್ಕಾಂನ ಓರ್ವ ಜೆಇ, ಇಬ್ಬರು ಲೈನ್ಮ್ಯಾನ್ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ.
ರಾಯಚೂರು: ಶಾರ್ಟ್ ಸರ್ಕ್ಯೂಟ್ನಿಂದ 9 ಗುಡಿಸಲು ಬೆಂಕಿಗಾಹುತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಟ್ಟಮರಡಿ ಜೆಸ್ಕಾಂನ ಜೆಸ್ಕಾಂನ ಓರ್ವ ಜೆಇ, ಇಬ್ಬರು ಲೈನ್ಮ್ಯಾನ್ ವಿರುದ್ಧ ಗಬ್ಬೂರು ಪೊಲೀಸ್ ಠಾಣೆಯಲ್ಲಿ FIR ದಾಖಲು ಮಾಡಲಾಗಿದೆ. ಜಿಲ್ಲೆಯ ದೇವದುರ್ಗ ತಾಲೂಕಿನ ಜಾಗಟಕಲ್ ಗ್ರಾಮದಲ್ಲಿ ಫೆಬ್ರವರಿ 25ರಂದು 9 ಗುಡಿಸಲು, ಹತ್ತಿ ರಾಶಿಗೆ ಬೆಂಕಿ ತಗುಲಿದ್ದು, ಇದೇ ವೇಳೆ ಗುಡಿಸಲಿನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ದುರಂತ ಸಂಭವಿಸಿತ್ತು. ಘಟನೆಯಲ್ಲಿ ಸುಮಾರು 500 ಕ್ವಿಂಟಾಲ್ ಹತ್ತಿ, 9 ಗುಡಿಸಲು, 2 ಬೈಕ್ಗಳು, ದವಸ ಧಾನ್ಯ, ಬಟ್ಟೆ, ಕ್ರಿಮಿನಾಶಕ ಸೇರಿದಂತೆ ಇತರೆ ವಸ್ತುಗಳು ನಾಶವಾಗಿದ್ದವು. 77.49 ಲಕ್ಷ ಮೌಲ್ಯದ ಆಸ್ತಿ ಹಾನಿ ಆಗಿದೆ ಎಂದು ತಾಲೂಕು ಆಡಳಿತ ಅಂದಾಜಿಸಿದೆ. ಸದ್ಯ ದೇವದುರ್ಗ ತಾಲೂಕು ಆಡಳಿತದಿಂದ ಸಂತ್ರಸ್ತರಿಗೆ ಫುಡ್ ಕಿಟ್ ಸೇರಿದಂತೆ ಉಪ ಜೀವನಕ್ಕೆ ಬೇಕಾದ ವಸ್ತುಗಳ ವಿತರಣೆ ಮಾಡಲಾಗಿದೆ.
ಮುಳ್ಳಂದಿ ಹಿಡಿಯಲು ಹೋಗಿ ಗುಹೆಯಲ್ಲಿ ಸಿಲುಕಿ ಇಬ್ಬರ ದುರ್ಮರಣ
ಚಿಕ್ಕಮಗಳೂರು: ಮುಳ್ಳಂದಿ ಹಿಡಿಯಲು ಹೋಗಿ ಗುಹೆಯಲ್ಲಿ ಸಿಲುಕಿದ್ದ ನಾಲ್ವರ ಪೈಕಿ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆಗುಂದಿ ಬಳಿ ನಡೆದಿದೆ. ತಮಿಳುನಾಡು ಮೂಲದ ಗೋವಿಂದರಾಜು, ವಿಜಯಕುಮಾರ್ ಮೃತರು. ತಮಿಳುನಾಡಿನಿಂದ ಕಾಫಿ ತೋಟದ ಕೆಲಸಕ್ಕೆ ಕಾರ್ಮಿಕರು ಬಂದಿದ್ದರು. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ, ಮಲಗಿದ್ದಲ್ಲೇ ಸುಟ್ಟು ಕರಕಲಾದ ವೃದ್ಧ ದಂಪತಿ
ಶಿವರಾಮ್ ಹೆಬ್ಬಾರ ಪುತ್ರನ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ದುರಂತ
ಹಾವೇರಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಪುತ್ರ ವಿವೇಕ ಹೆಬ್ಬಾರ್ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಬೆಲ್ಟ್ಗೆ ಸಿಲುಕಿ 19 ವರ್ಷದ ಯುವ ಕಾರ್ಮಿಕ ದಾರುಣ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕೋಣನಕೇರಿಯಲ್ಲಿರುವ ವಿಐಪಿಎನ್ ಡಿಸ್ಟಲರಿಸ್ ಕಾರ್ಖಾನೆಯಲ್ಲಿ ನಡೆದಿದೆ. ನವೀನ ಬಸಪ್ಪ ಚಲವಾದಿ(19) ಮೃತ ಕಾರ್ಮಿಕ. ಕೆಲಸ ಮಾಡುತ್ತಿದ್ದ ವೇಳೆ ನಿನ್ನೆ ಶನಿವಾರ ಸಂಜೆ ಕಬ್ಬಿನ ಪುಡಿ ತುಂಬುತ್ತಿದ್ದಾಗ ದುರ್ಘಟನೆ ನಡೆದಿದೆ. ಯಾವುದೇ ಸುರಕ್ಷಾ ಕ್ರಮ ಅಳವಡಿಸದ ಹಿನ್ನೆಲೆ ಘಟನೆ ಸಂಭವಿಸಿದೆ. ಕಾರ್ಖಾನೆ ಮಾಲೀಕ ಸೇರಿ ಆರು ಜನರ ವಿರುದ್ಧ ಬಂಕಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯಪುರ: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ವೃದ್ಧ ದಂಪತಿ ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆ ಚಡಚಣ ಹೊರವಲಯದ ಜಮೀನಿನಲ್ಲಿ ನಡೆದಿದೆ. ಕರೀಂಸಾಬ್ ಟಪಾಲ್(82), ಸಾಜನಬೀ ಟಪಾಲ್(72) ಮೃತ ವೃದ್ಧರು. ಮತ್ತೊಂದೆಡೆ ಯಾದಗಿರಿಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಗುಡಿಸಲು ಸುಟ್ಟು ಕರಕಲಾಗಿದೆ. ಜಮೀನಿನಲ್ಲಿದ್ದ ಗುಡಿಸಲಿನಲ್ಲಿ ಕರೀಂಸಾಬ್ ಟಪಾಲ್ ಮತ್ತು ಸಾಜನಬೀ ಟಪಾಲ್ ಎಂಬ ವೃದ್ಧ ದಂಪತಿ ವಾಸವಾಗಿದ್ದರು.
ಇದನ್ನೂ ಓದಿ: Karwar: ಪತ್ನಿಯನ್ನ ಕೊಂದು ಬ್ಯಾರೆಲ್ನಲ್ಲಿ ಬಚ್ಚಿಟ್ಟ ಪತಿರಾಯ, ಮನೆ ಖಾಲಿ ಮಾಡುವಾಗ ಭಯಾನಕ ಘಟನೆ ಬಯಲಿಗೆ
ತಡರಾತ್ರಿ ಆಕಸ್ಮಿಕವಾಗಿ ಗುಡಿಸಲಿಗೆ ಬೆಂಕಿ ತಗುಲಿದ್ದು ಮಲಗಿದ್ದಲ್ಲೇ ಪತಿ-ಪತ್ನಿ ಸುಟ್ಟು ಕರಕಲಾಗಿದ್ದಾರೆ. ಇಂದು ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಚಡಚಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:58 pm, Mon, 27 February 23