ತನ್ನದೇ ಶಾಲಾವಾಹನಕ್ಕೆ ಸಿಲುಕಿ 4 ವರ್ಷದ ಮಗು ಸಾವು

ದಾವಣಗೆರೆ: ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಮಗು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾರಥಿ ಗ್ರಾಮದಲ್ಲಿ ನಡೆದಿದೆ. 4 ವರ್ಷದ ಪುಟ್ಟ ಮಗು ಅಜಯ್ ಶಾಲಾ ವಾಹನದಿಂದ ಇಳಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಜಯ್ ಸುಣಿಗೆರೆ ಗ್ರಾಮದ ಪದ್ಮದೀಪ ಶಾಲೆಯಲ್ಲಿ ಓದುತ್ತಿದ್ದ. ಶಾಲೆ ಮುಗಿಸಿ ತನ್ನದೇ ಶಾಲೆಯ ಬಸ್​ನಲ್ಲಿ ಮನೆಗೆ ತೆರಳಿದ್ದಾನೆ. ಮನೆಯ ಬಳಿ ವಾಹನದಿಂದ ಬಾಲಕ ಇಳಿಯುತ್ತಿದ್ದ ವೇಳೆ ವಾಹನ ಮುಂದಕ್ಕೆ ಚಲಿಸಿದೆ. ವಾಹನದ ಚಕ್ರಕ್ಕೆ ಸಿಲುಕಿ […]

ತನ್ನದೇ ಶಾಲಾವಾಹನಕ್ಕೆ ಸಿಲುಕಿ 4 ವರ್ಷದ ಮಗು ಸಾವು
ಸಾಧು ಶ್ರೀನಾಥ್​

Updated on: Nov 27, 2019 | 7:58 PM

ದಾವಣಗೆರೆ: ಶಾಲಾ ವಾಹನಕ್ಕೆ ಸಿಲುಕಿ 4 ವರ್ಷದ ಮಗು ಸ್ಥಳದಲ್ಲೇ ಮೃತ ಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಾರಥಿ ಗ್ರಾಮದಲ್ಲಿ ನಡೆದಿದೆ. 4 ವರ್ಷದ ಪುಟ್ಟ ಮಗು ಅಜಯ್ ಶಾಲಾ ವಾಹನದಿಂದ ಇಳಿಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.

ಅಜಯ್ ಸುಣಿಗೆರೆ ಗ್ರಾಮದ ಪದ್ಮದೀಪ ಶಾಲೆಯಲ್ಲಿ ಓದುತ್ತಿದ್ದ. ಶಾಲೆ ಮುಗಿಸಿ ತನ್ನದೇ ಶಾಲೆಯ ಬಸ್​ನಲ್ಲಿ ಮನೆಗೆ ತೆರಳಿದ್ದಾನೆ. ಮನೆಯ ಬಳಿ ವಾಹನದಿಂದ ಬಾಲಕ ಇಳಿಯುತ್ತಿದ್ದ ವೇಳೆ ವಾಹನ ಮುಂದಕ್ಕೆ ಚಲಿಸಿದೆ.

ವಾಹನದ ಚಕ್ರಕ್ಕೆ ಸಿಲುಕಿ ಮಗು ದುರ್ಮರಣ. ಸ್ಥಳದಲ್ಲೇ ಶಾಲಾ ವಾಹನ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಈ ಪ್ರಕರಣ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Published On - 7:09 pm, Wed, 27 November 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us