ಮಂಗಳೂರು, ಡಿಸೆಂಬರ್ 08: ಅಯ್ಯಪ್ಪ ಮಾಲೆ (Ayyappa Male) ಧರಿಸಿ, ಸಂಸ್ಥೆಯೊಂದರ ಹೆಸರನ್ನು ದುರುಪಯೋಗಪಡಿಸಿಕೊಂಡು ದೇಣಿಗೆ ಸಂಗ್ರಹಿಸುತ್ತಿದ್ದ ಇಬ್ಬರು ಯುವಕರನ್ನು ಹಿಡಿದು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದಲ್ಲಿ, ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೋಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಹೆಸರಿನಲ್ಲಿ ದೇಣಿಗೆ ಕೇಳುತ್ತಿದ್ದರು.
ಯುವಕರು ಬೆಂಗಳೂರಿನ ಸ್ವಾಮಿ ವಿವೇಕಾನಂದ ಸೋಷಿಯಲ್ ಸರ್ವಿಸ್ ಟ್ರಸ್ಟ್ (ರಿ) ಹೆಸರಲ್ಲಿ ನಿಡ್ಲೆ ಗ್ರಾಮದ ಧನುಷ್ ಎಂಬವರ ಬಳಿ ದೇಣಿಗೆ ಕೇಳಿದ್ದಾರೆ. ಅನುಮಾನಗೊಂಡ ಧನುಷ್ ಸಂಸ್ಥೆಯ ಮೊಬೈಲ್ ನಂಬರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆಗ ಸಂಸ್ಥೆಯವರು ನಾವು ಯಾರನ್ನೂ ಕಳುಹಿಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ವಿಷಯ ತಿಳಿದ ಕೂಡಲೆ ಧನುಷ್ ಸೇರಿದಂತೆ ಸುತ್ತಮುತ್ತಲಿನ ಜನರು ಯುವಕರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿತರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಬ್ಬರು ಯುವಕರಲ್ಲಿ ಓರ್ವ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ್ದನು. ಸದ್ಯ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿಗೆ ನೋ ಎಂಟ್ರಿ ಎಂದ ಪ್ರಿನ್ಸಿಪಾಲ್, ಕೊನೆಗೇನಾಯ್ತು?
ಬೆಂಗಳೂರಿನಲ್ಲಿ ಸೈಬರ್ ಕ್ರೈಂ ಪ್ರರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲಂತು ವಿಐಪಿ ಮತ್ತು ವಿವಿಐಪಿ ವ್ಯಕ್ತಿಗಳ ಹೆಸರಿನಲ್ಲಿ ವಂಚಿಸುವುದು ಜಾಸ್ತಿಯಾಗಿದೆ. ಇದೀಗ ವಂಚಕರು ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಅವರ ಹೆಸರನ್ನು ಬಳಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೇಂದ್ರ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಅವರ ಫೋಟೋ ದುರ್ಬಳಕೆ ಮಾಡಿಕೊಂಡು ವಾಟ್ಸ್ ಆ್ಯಪ್ ಸಂಖ್ಯೆ ಸೃಷ್ಟಿಸಿದ್ದಾರೆ. ನಂತರ ಜಿಲ್ಲಾಧಿಕಾರಿಗಳ ಪರಿಚಯಸ್ಥರಿಗೆ ತುರ್ತು ಅಗತ್ಯ ಹಣ ಬೇಕಿದೆ, ಕೂಡಲೇ ಟ್ರಾನ್ಸ್ಫರ್ ಮಾಡಿ ಎಂದು ಸಂದೇಶ ಕಳಹುಸಿದ್ದಾರೆ. ಈ ರೀತಿ ಜಿಲ್ಲಾಡಳಿತದ ಹಲವು ಇಲಾಖೆಯ ಅಧಿಕಾರಿಗಳು ಹಾಗೂ ಇತರರಿಗೆ ಸಂದೇಶ ರವಾನಿಸಿದ್ದಾರೆ. ಅನುಮಾನಗೊಂಡ ಕೆಲ ಅಧಿಕಾರಿಗಳು ವಿಚಾರಿಸಿದಾಗ ಕೃತ್ಯ ಬಯಲಾಗಿದೆ. ಸದ್ಯ ಘಟನೆ ಸಂಬಂಧ ಜಿಲ್ಲಾಧಿಕಾರಿ ಕೆ.ಎ ದಯಾನಂದ್ ಅವರು ಕೇಂದ್ರ ವಿಭಾಗದ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 am, Fri, 8 December 23