ಸಂತೋಷದಿಂದ ಆಚರಿಸುತ್ತಿದ್ದ ವಿವಾಹ ಮಹೋತ್ಸವದಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಘಟನೆ ಘಾಜಿಯಾಬಾದ್ನಲ್ಲಿ(Ghaziabad) ನಡೆದಿದ್ದು ಆಪ್ತ ಸ್ನೇಹಿತನ ತಂಗಿಯ ಮದುವೆಗೆಂದು ತೆರಳಿದ್ದ ಸ್ನೇಹಿತರ(Friends) ನಡುವೆ ಜಗಳ ಉಂಟಾಗಿದೆ. ವಾದ-ವಿವಾದ ವಿಪರೀತಕ್ಕೆ ಇಳಿದ ಪರಿಣಾಮ 19 ವರ್ಷದ ಯುವಕ ಸಾವಿಗೀಡಾಗಿದ್ದಾನೆ(Crime News). ಪೊಲೀಸರು ಹೇಳಿದ ಮಾಹಿತಿ ಪ್ರಕಾರ, ಮೃತ ದುರ್ದೈವಿ ಟಿಂಕು ಎಂದು ಗುರುತಿಸಲಾಗಿದೆ.
ಟಿಂಕು ಸ್ಥಳೀಯ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಟಿಂಕು ಮತ್ತು ದೀಪಕ್ ಪಂಡಿತ್ ಬಾಲ್ಯದ ಗೆಳೆಯರು. ವಿವಾಹ ಕಾರ್ಯಕ್ರಮಕ್ಕಾಗಿ ಘಾಜಿಯಾಬಾದ್ಗೆ ತೆರಳಿದ್ದರು. ಸ್ನೇಹತರೆಲ್ಲಾ ಸೇರಿ ಟೆರೇಸ್ ಮೇಲೆ ಹತ್ತಿ ಕುಳಿತು ಪಾರ್ಟಿ(Drinks) ಮಾಡುತ್ತಿದ್ದರು. ಈ ಮಧ್ಯೆ ಟಿಂಕು ಮತ್ತು ಪಂಡಿತ್ ನಡುವೆ ಜಗಳ ಉಂಟಾಗಿದೆ. ಮಾತುಕತೆ ವಿಪರೀತಗೊಂಡಿದ್ದು ದೀಪಕ್ ಪಂಡಿತ್, ಕೈಯ್ಯಲ್ಲಿದ್ದ ಗಾಜಿನ ಬಾಟಲಿ(Glass) ಮೂಲಕ ಟಿಂಕುವಿನ ಕುತ್ತಿಗೆ ಕುಯ್ದುಹಾಕಿದ್ದಾನೆ. ಬಳಿಕ ಪಂಡಿತ್ ಸ್ಥಳದಿಂದ ಪರಾರಿಯಾಗಿದ್ದಾನೆ. ಟಿಂಕುವಿನ ಕುತ್ತಿಗೆಯಿಂದ ರಕ್ತ ಹರಿಯಲು ಪ್ರಾರಂಭವಾಗಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯ ಮಧ್ಯೆ ಕೊನೆಯುಸಿರುಬಿಟ್ಟಿದ್ದಾನೆ.
ಅವರ ಸ್ನೇಹಿತರೊಬ್ಬರು 1 ಗಂಟೆಯ ಸರಿಸುಮಾರಿಗೆ ಕರೆ ಮಾಡಿ ಟಿಂಕು ಟೆರೆಸ್ನಿಂದ ಬಿದ್ದು ಅಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವಿಷಯ ತಿಳಿಸಿದರು. ಆದರೆ ಆಸ್ಪತ್ರೆಯಲ್ಲಿಯೇ ಗೊತ್ತಾದದ್ದು ದೀಪಕ್ ಪಂಡಿತ್ ನನ್ನ ಸಹೋದರನ ಗಂಟಲು ಕತ್ತರಿಸಿದ್ದಾನೆ ಎಂದು ಮೃತ ದುರ್ದೈವಿ ಟಿಂಕುವಿನ ಹಿರಿಯ ಸಹೋದರ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 304 ಅಡಿಯಲ್ಲಿ ಪಂಡಿತ್ ವಿರುದ್ಧ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
ದಾವಣಗೆರೆ: ಒಂಟಿ ವೃದ್ಧೆ ಕೊಲೆ ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ಡಾಗ್ ತುಂಗಾ; ಶ್ವಾನದ ಯಶೋಗಾಥೆ ಇಲ್ಲಿದೆ