AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಕ್ಕಾ ಪ್ರೋಫೆಷನಲ್ ಕಳ್ಳರ ರೀತಿಯಲ್ಲೆ ಸೋದರ ಮಾವನ ಮನೆ ಲೂಟಿ ಮಾಡಿದ ಕಿಲಾಡಿ ಅಳಿಯ

ಅಳಿಯ ಮನೆ ತೊಳಿಯ ಎಂಬ ಮಾತು ಇಲ್ಲಿ ಅಕ್ಷರಶಃ ಸತ್ಯವಾಗಿದೆ. ಹೌದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದಲ್ಲಿ ವಾಸವಾಗಿರುವ ಅಶೋಕ ಪೆಲ್ಲದ ಎಂಬುವರ ಮನೆಯಲ್ಲಿ ಇವರ ಸೋದರ ಅಳಿಯ ವಿಜಯ ಕಳ್ಳಿ ಕಳ್ಳತನ ಮಾಡಿದ್ದಾನೆ. ಆರೋಪಿಯನ್ನು ಶಿರಹಟ್ಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪಕ್ಕಾ ಪ್ರೋಫೆಷನಲ್ ಕಳ್ಳರ ರೀತಿಯಲ್ಲೆ ಸೋದರ ಮಾವನ ಮನೆ ಲೂಟಿ ಮಾಡಿದ ಕಿಲಾಡಿ ಅಳಿಯ
ಆರೋಪಿಗಳಾದ ವಿಜಯ ಕಳ್ಳಿ, ರವಿ ಬಾರಿಕಾಯಿ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ವಿವೇಕ ಬಿರಾದಾರ|

Updated on: Apr 17, 2024 | 9:41 AM

Share

ಗದಗ, ಏಪ್ರಿಲ್​ 17: ಸೋದರ ಮಾವನ ಮನೆಯಲ್ಲೇ ಕಳ್ಳತನ (Theft) ಮಾಡಿದ್ದ ಅಳಿಯನನ್ನು ಶಿರಹಟ್ಟಿ ಠಾಣೆ ಪೊಲೀಸರು (Shirahatti Police) ಬಂಧಿಸಿದ್ದಾರೆ. ವಿಜಯ ಕಳ್ಳಿ ಬಂಧಿತ ಆರೋಪಿ. ಕಳೆದ ವರ್ಷ ಡಿಸೆಂಬರ್ 6 ರಂದು ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಅಶೋಕ ಪಲ್ಲೇದ ಎಂಬುವರ ಮನೆ ಕಳ್ಳತನವಾಗಿತ್ತು. 5 ಲಕ್ಷ ನಗದು, 240 ಚಿನ್ನಾಭರಣ ಲೂಟಿಯಾಗಿತ್ತು. ಯಾರೋ ಖತರ್ನಾಕ ಕಳ್ಳರು ಲೂಟಿ ಮಾಡಿದ್ದಾರೆ ಅಂತ ಇಡೀ ಗ್ರಾಮದಲ್ಲಿ ಭಾರಿ ಚರ್ಚೆಯಾಯಿತು. ಮನೆ ಮಾಲೀಕ ಕೂಡ ಲಕ್ಷಾಂತರ ಹಣ, ಚಿನ್ನಾಭರಣ ಕಳೆದುಕೊಂಡು ಕಂಗಾಲಾಗಿದ್ದನು. ಇನ್ನು ವಿಚಾರ ತಿಳಿದು ಶಿರಹಟ್ಟಿ ಠಾಣೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮನೆ ಮಾಲಿಕ ಅಶೋಕ ಪಲ್ಲೇದ ಶಿರಹಟ್ಟಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದರು. ಅಶೋಕ ಪಲ್ಲೇದ ಅವರ ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ, ಇದು ಪರಿಚಿತರೇ ಮಾಡಿದ ಕಳ್ಳತನ ಎಂದು ಗೋತ್ತಾಯಿತು. ಆರೋಪಿಗಾಗಿ ಬಲೆ ಬೀಸಿದ್ದ ಪೊಲೀಸರಿಗೆ ಈ ಕಳ್ಳತನ ಮಾಡಿದ್ದು, ಅಶೋಕ ಪಲ್ಲೇದ ಸೋದರ ಅಳಿಯ ವಿಜಯ ಕಳ್ಳಿ ಆ್ಯಂಡ್​ ಗ್ಯಾಂಗ್​ ಅಂತ ತಿಳಿಯಿತು. ಕೂಡಲೆ ಅವರನ್ನು ಬಂಧಿಸಿ, ವಿಚಾರಣೆಗೆ ಒಳಡಪಡಿಸಿದಾಗ, ಸತ್ಯ ಬಾಯಿಬಿಟ್ಟಿದ್ದಾರೆ.

ಕಳ್ಳತನವಾದ ಮನೆ

ಸೋದರ ಮಾವ ಅಶೋಕ ಪೆಲ್ಲದ ಮನೆಯಲ್ಲಿರುವ ಹಣ ಮತ್ತು ಚಿನ್ನ ಅಳಿಯ ವಿಜಯ ಕಳ್ಳಿಗೆ ತಿಳಿದಿತ್ತು. ಆಗ ವಿಜಯ ಕಳ್ಳಿ ಮಾವನ ಮನೆ ಲೂಟಿ ಮಾಡಬೇಕು ಅಂತ ಹೊಂಚು ಹಾಕಿದ್ದಾನೆ. ಅದೊಂದು ದಿನ ಅಶೋಕ ಪೆಲ್ಲದ ಪುತ್ರನಿಗೆ ಅಪಘಾತವಾಗಿ ಇಡೀ ಕುಟುಂಬಸ್ಥರು ಆಸ್ಪತ್ರೆಯಲ್ಲಿದ್ದರು. ಮನೆಯಲ್ಲಿ ಯಾರೂ ಇರಲಿಲ್ಲ. ಇದೇ ಸೂಕ್ತ ಸಮಯ ಅಂತ ವಿಜಯ ಕಳ್ಳಿ, ರವಿ ಬಾರಿಕಾಯಿ ಎಂಬಾತನ ಜೊತೆ ಸೇರಿ ಡಿಸೆಂಬರ್​ 6 ನಡುರಾತ್ರಿ ಇಡೀ ಗ್ರಾಮದ ಕರೆಂಟ್ ಕಟ್ ಮಾಡಿದ್ದಾನೆ. ಬಳಿಕ ಮಾವ ಅಶೋಕ ಪೆಲ್ಲದ ಮನೆಗೆ ನುಗ್ಗಿ 5 ಲಕ್ಷ ನಗದು, 240 ಚಿನ್ನಾಭರಣ ಕದ್ದಿದ್ದಾನೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದ ರನ್ ​ವೇನಲ್ಲಿ ವಿಡಿಯೋ ಚಿತ್ರೀಕರಿಸಿದ್ದ ಯೂಟ್ಯೂಬರ್​ ಬಂಧನ

ಮಾವನ ಮನೆ ಲೂಟಿ ಮಾಡಿದ ಬಳಿಕ ಅಳಿಯ ವಿಜಯ ಕಳ್ಳಿ, ರವಿ ಬಾರಿಕಾಯಿ ಮಸ್ತ್ ಮಜಾ ಮಾಡಿದ್ದಾರೆ. ಗೋವಾದಲ್ಲಿ ಕ್ಯಾಸಿನೋ, ಹುಬ್ಬಳ್ಳಿ ಸೇರಿದಂತೆ ರಾಜ್ಯದ ವಿವಿಧೆಡೆ ಸುತ್ತಾಡಿ ಮಜಾ ಮಾಡಿದ್ದಾರೆ. ಅಷ್ಟೇ ಅಲ್ಲದೆ ಐಪಿಎಲ್ ಬೆಟ್ಟಿಂಗ್ ಹಾಗೂ ಇಸ್ಪೇಟ್ ಆಡಿ ಕಳ್ಳತನ ಮಾಡಿದ ಲಕ್ಷಾಂತರ ಹಣ ಖಾಲಿಯಾಗೋವವೆಗು ಮೋಜು, ಮಸ್ತಿ ಮಾಡುತ್ತಿದ್ದರು. ಈ ಎಲ್ಲ ವಿಚಾರವನ್ನು ವಿಜಯ ಕಳ್ಳಿ ಮತ್ತು ಆತನ ಗ್ಯಾಂಗ್​ ಪೊಲೀಸರ ಮುಂದೆ ಬಾಯಿ ಬಿಟ್ಟಿದೆ.

ಶಿರಹಟ್ಟಿ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ಶಿವಾನಂದ, ಪೊಲೀಸ್ ಪೆದೆಗಳಾದ ಹನುಮಂತ ದೊಡ್ಡಮನಿ, ಚನ್ನಬಸುವ, ಸೋಮು ನೇತೃತ್ವದ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 120 ಗ್ರಾಂ ಬಂಗಾರ ಮಾತ್ರ ವಶಪಡಿಸಿಕೊಂಡಿದ್ದು, 5 ಲಕ್ಷ ಹಣ, ಇನ್ನುಳಿದ ಚಿನ್ನಾಭರಣವನ್ನು ಕಿಲಾಡಿಗಳು ಮೋಜು, ಮಸ್ತಿ ಮಾಡಿ ಖಾಲಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ