ಬಾಗಲಕೋಟೆ: ತಮ್ಮನನ್ನ ಕೊಂದು ಸ್ಮಶಾನಕ್ಕೆ ಹೋಗಿ ಭಸ್ಮ ಧರಿಸಿ ನಿಂತ ಅಣ್ಣ
ಆತ ಓರ್ವ ಚಿತ್ರಕಲೆ ಓದಿದ ಯುವಕ.ಆದರೆ ಸೂಕ್ತವಾದ ಕೆಲಸ ಸಿಕ್ಕಿರಲಿಲ್ಲ.ಇದರಿಂದ ಕೆಲ ವರ್ಷಗಳಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಮನೆಯಲ್ಲೂ ಕೆಲಸ ಮಾಡುತ್ತಿರಲಿಲ್ಲ. ಮನೆಯಲ್ಲಿ ತಾಯಿ ಹಾಗೂ ತಮ್ಮ ಬೈದು ಬುದ್ದಿ ಹೇಳುತ್ತಿದ್ದರು. ಇದರಿಂದ ರಾತ್ರಿ ಮಲಗಿದ ತಮ್ಮನನ್ನು ಕೊಡಲಿಯಿಂದ ಕೊಚ್ಚಿ ಸೈಕೋ ಅಣ್ಣ ಕೊಲೆ ಮಾಡಿದ್ದಾನೆ.
ಬಾಗಲಕೋಟೆ, ಏ.17: ಜಿಲ್ಲೆಯ ಮುಧೋಳ್(Mudhol) ನಗರದ ಗಾಂಧಿ ಚೌಕ್ನಲ್ಲಿ ಸೈಕೋ ಅಣ್ಣನೊಬ್ಬ ಮಲಗಿದ್ದ ತಮ್ಮನ ಮುಖಕ್ಕೆ ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಸುನಿಲ್ ರಜಪೂತ(24) ಮೃತ ರ್ದುದೈವಿ. ಆರೋಪಿ ಅಣ್ಣ ಸುಖೇನ್ ಸಿಂಗ್ ರಜಪೂತ್ ತಮ್ಮ ಸುನಿಲ್ ರಾತ್ರಿ ನಿದ್ದೆಯಲ್ಲಿದ್ದಾಗ ಕೊಲೆ ಮಾಡಿದ್ದಾನೆ. ಬಳಿಕ ಅಲ್ಲಿಂದ ಸುಖೇನ್ ಸಿಂಗ್, ಸ್ಮಶಾನಕ್ಕೆ ಹೋಗಿ ಪಕ್ಕದಲ್ಲಿನ ಘಟಪ್ರಭಾ ನದಿಯಲ್ಲಿ ಸ್ನಾನ ಮಾಡಿದ್ದಾನೆ. ನಂತರ ಹಣೆಗೆ ಭಸ್ಮ ಧರಿಸಿಕೊಂಡು ಹುಚ್ಚುತನ ಮೆರೆದಿದ್ದಾನೆ. ಅಷ್ಟೇ ಅಲ್ಲ, ಅಲ್ಲಿನ ಕೆಲಸಗಾರರಿಗೆ ನನ್ನ ತಮ್ಮನ ಶವ ಬರುತ್ತದೆ ಎಂದು ಹೇಳಿದ್ದಾನೆ.
ಸುಖೇನ್ ಸಿಂಗ್ ರಜಪೂತ್ ಹಾಗೂ ಸುನಿಲ್ ಇಬ್ಬರು ಅಣ್ಣ-ತಮ್ಮಂದಿರು, ಒಬ್ಬ ಸಹೋದರಿ ಇದ್ದು, ಮದುವೆಯಾಗಿದೆ. ತಂದೆ ಪಿ ಡಬ್ಲ್ಯುಡಿಯಲ್ಲಿ ಡಿ ದರ್ಜೆ ನೌಕರನಾಗಿ ನಿವೃತ್ತಿಯಾಗಿದ್ದಾರೆ. ಸುನಿಲ್ ಬಿ.ಕಾಮ್ ಪದವೀಧರ, ಸುಖೇನ್ ಸಿಂಗ್ ಚಿತ್ರಕಲೆ ಓದಿದ್ದಾನೆ. ಸುಖೇನ್ ಕಳೆದ ಐದಾರು ವರ್ಷದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಮನೆಯಲ್ಲಿ ಕೆಲಸ ಮಾಡದೆ ಹುಚ್ಚುನಂತೆ ವರ್ತನೆ ತೋರುತ್ತಿದ್ದ. ತಂದೆ-ತಾಯಿ ಆತನಿಗೆ ಬೈದು ಬುದ್ದಿ ಹೇಳುತ್ತಿದ್ದರು. ಹೊಸ ಮನೆ ಕಟ್ಟಿದ ಪೋಷಕರು, ಒಂದು ಕೆಲಸ ಅಂತ ಮಾಡಿದರೆ ಇಬ್ಬರಿಗೂ ಮದುವೆ ಮಾಡುವವರಿದ್ದರು.
ಇದನ್ನೂ ಓದಿ:ಕೋಲಾರ: ಮೀನು ಹಿಡಿಯುವ ವಿಚಾರಕ್ಕೆ ಸೋದರ ಸಂಬಂಧಿಗಳ ನಡುವೆ ಗಲಾಟೆ; ಕೊಲೆಯಲ್ಲಿ ಅಂತ್ಯ
ಇನ್ನು ತಂದೆ-ತಾಯಿ, ಅಜ್ಜಿ ಎಲ್ಲರೂ ತೊಟ್ಟಿಲು ಕಾರ್ಯಕ್ಕೆ ಎಂದು ಎಪ್ರಿಲ್ 15 ರಂದು ರಾಯಚೂರಿಗೆ ಹೋಗಿದ್ದರು. ಅದೇ ದಿನ ರಾತ್ರಿ 11.20 ರ ಸುಮಾರಿಗೆ ಸುಖೇನ್ ಈ ಕೃತ್ಯವೆಸಗಿದ್ದಾನೆ. ಸ್ಥಳಕ್ಕೆ ಮುಧೋಳ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಖೇನ್ ಸಿಂಗ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೈಕೋ ಅಣ್ಣ ಇಷ್ಟು ದಿನ ಮಾಡಿದ ಎಲ್ಲ ಹುಚ್ಚುತನವನ್ನು ಕುಟುಂಬಸ್ಥರು ಸಹಿಸಿಕೊಂಡೆ ಹೊರಟಿದ್ದಾರೆ. ಆದರೆ, ಆತನ ಹುಚ್ಚುತನ ಒಡ ಹುಟ್ಟಿದ ತಮ್ಮನನ್ನೇ ಬಲಿ ಪಡೆದಿದ್ದು ವಿಪರ್ಯಾಸ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ