ತಿರುವನಂತಪುರಂ: ಬ್ರೇಕ್ ಅಪ್ ಮಾಡಿಕೊಳ್ಳುವಂತೆ ತನ್ನ ಪ್ರೀತಿಸಿದ ಹುಡುಗನಿಗೆ ಕೇಳಿಕೊಂಡ ಯುವತಿ, ಆದರೆ ಇದಕ್ಕೆ ಒಪ್ಪಿಗೆ ನೀಡದ ಪ್ರೀತಿಸಿದ ಹುಡುಗನಿಗೆ ಮನೆ ಕರೆಸಿ ವಿಷ ನೀಡಿರುವ ಘಟನೆ ಕೇರಳದ ತಿರುವನಂತಪುರಂನಲ್ಲಿ ನಡೆದಿದೆ. 23 ವರ್ಷದ ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ತಾನು ಪ್ರೀತಿಸಿದ ಹುಡುಗಿ ವಿಷ ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದಾಗ ಯುವತಿಯು ವಿಚಾರಣೆಯ ಬಳಿಕ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಇದೀಗ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
23 ವರ್ಷದ ರೇಡಿಯಾಲಜಿ ವಿದ್ಯಾರ್ಥಿ, ಶರೋನ್ ರಾಜ್, ಅಕ್ಟೋಬರ್ 25ರಂದು ಸಾವನ್ನಪ್ಪಿದ್ದಾನೆ. ಅಕ್ಟೋಬರ್ 31 ರಂದು ಪೊಲೀಸರು, ಆತನ ಗೆಳತಿ ವಿಷ ಸೇವಿಸಿದ್ದಾರೆ ಎಂದು ದೃಢಪಡಿಸಿದರು. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಅಜಿತ್ ಕುಮಾರ್ ಅವರು ತಿರುವನಂತಪುರಂ ಮೂಲದ ಶರೋನ್ ರಾಜ್ನ್ನು ಆತನ ಸ್ನೇಹಿತೆ ಗ್ರೀಷ್ಮಾ ಹತ್ಯೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
8 ಗಂಟೆಗಳ ವಿಚಾರಣೆಯ ನಂತರ ಗ್ರೀಷ್ಮಾ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ಬ್ರೇಕ್ ಅಪ್ ಮಾಡಿಕೊಳ್ಳುವಂತೆ ಕೇಳಿಕೊಂಡಾಗ ಇದಕ್ಕೆ ಹುಡುಗ ಒಪ್ಪದ ಕಾರಣ ಅವನನ್ನು ವಿಷ ಕೊಟ್ಟು ಕೊಲೆ ಮಾಡಿದ್ದಾಳೆ ಎಂದು ಹೇಳಲಾಗಿದೆ.
ಅವನನ್ನು ತನ್ನ ಮನೆಗೆ ಕರೆದು ಆಯುರ್ವೇದದ ಮಿಶ್ರಣದಲ್ಲಿ ಕಪಿಕ್ ಎಂಬ ಕೀಟನಾಶಕವನ್ನು ಬೆರೆಸಿ ಕುಡಿಯುವಂತೆ ಮಾಡಿದಳು. ಇದಾದ ಕೂಡಲೇ ವಾಂತಿ ಮಾಡಿಕೊಂಡ ತನ್ನ ಸ್ನೇಹಿತನೊಂದಿಗೆ ತೆರಳಿದ್ದ. ಆತನನ್ನು ವಿಷ ಹಾಕಿ ಕೊಲೆ ಮಾಡಬೇಕು ಎಂಬ ಯೋಜನೆಯನ್ನು ಮೊದಲೆ ಹಾಕಿಕೊಂಡಿದ್ದಳು, ಎಂದು ಎಡಿಜಿಪಿ ಹೇಳಿದರು. ಅಕ್ಟೋಬರ್ 14 ರಂದು ಈ ಘಟನೆ ನಡೆದಿದೆ.
ಇದನ್ನು ಓದಿ: Crime News: ಗುರುಗ್ರಾಮದಲ್ಲಿ ಭೀಕರ ಅಪಘಾತ; ಬಸ್ ಚಾಲಕ ಸಾವು, 15 ಜನರಿಗೆ ಗಾಯ
ಗ್ರೀಷ್ಮಾ ಮತ್ತು ಶರೋನ್ ಪ್ರೀತಿ ಒಂದು ವರ್ಷವಾಗಿತ್ತು ಅಷ್ಟೇ. ಫೆಬ್ರವರಿ 2022 ರಲ್ಲಿ, ಅವರ ನಡುವೆ ಕೆಲವು ಸಮಸ್ಯೆಗಳಿದ್ದವು ಮತ್ತು ಗ್ರೀಷ್ಮಾ ಬೇರೆ ಹುಡುಗನ ಜೊತೆಗೆ ಮದುವೆಯಾಲು ಅವರ ಮನೆಯಲ್ಲಿ ನಿರ್ಧಾರವನ್ನು ಮಾಡಿದ್ದರು. ಆದರೂ ಅವರು ನಡುವೆ ಸಂಬಂಧವನ್ನು ಮುಂದುವರೆಸಿದರು. ಇತ್ತೀಚೆಗೆ, ಅವರು ಮತ್ತೆ ಕೆಲವು ಸಮಸ್ಯೆಗಳನ್ನು ಎದುರಿಸಿದರು ಮತ್ತು ಶರೋನ್ ಜೊತೆಗೆ ಬ್ರೇಕ್ ಅಪ್ ಮಾಡಿಕೊಳ್ಳವ ನಿರ್ಧಾರವನ್ನು ಮಾಡಿದ್ದರು. ಆ ಕಾರಣಕ್ಕೆ ಅವನನ್ನು ಕೊಲೆ ಮಾಡುವ ನಿರ್ಧಾರವನ್ನಯ ಆಕೆ ತೆಗೆದುಕೊಂಡಿದ್ದಳು. ಇದರ ಮೊದಲು ಗ್ರೀಷ್ಮಾ ಹೇಗಾದರೂ ಪ್ರೀತಿಯನ್ನು ಇಲ್ಲಿಗೆ ಕೊನೆಗೊಳಿಸುವಂತೆ ಒಪ್ಪುವಂತೆ ಮಾಡಲು ಮೃದುವಾದ ಆತನಿಗೆ ಹೇಳಿದ್ದಾಳೆ.
ಗ್ರೀಷ್ಮಾ ತನ್ನ ಜಾತಕದ ಪ್ರಕಾರ, ತನ್ನ ಮೊದಲ ಪತಿ ಸಾಯುತ್ತಾನೆ ಎಂದು ಹೇಳುವ ಮೂಲಕ ಅವನನ್ನು ಬಿಟ್ಟು ಹೋಗುವಂತೆ ಹೆದರಿಸಲು ಕಥೆಯನ್ನು ಮಾಡಿದ್ದಾಳೆ, ಆದರೆ ಆತ ಇದಕ್ಕೆ ಒಪ್ಪಲಿಲ್ಲ, ನಾನು ನಿನ್ನನ್ನೂ ತುಂಬಾ ಪ್ರೀತಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಶರೋನ್ ಅವರ ಸಹೋದರ ಗ್ರೀಷ್ಮಾಗೆ ಫೋನ್ ಮಾಡಿ ಶರೋನ್ ಯಾಕೆ ಹೀಗೆ ಮಾಡಿದ್ದಾನೆ ಎಂದು ಕೇಳಿದ್ದಾರೆ. ಆತನ ಬಳಿಯಲ್ಲೂ ಈ ಬಗ್ಗೆ ಕೇಳಿದ್ದಾರೆ. ಗ್ರೀಷ್ಮಾ ಭಯದಿಂದ ಏನನ್ನೂ ಬಹಿರಂಗಪಡಿಸಲಿಲ್ಲ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಶರೋನ್ ಅಕ್ಟೋಬರ್ 25 ರಂದು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಇದು ಆತನ ಗೆಳತಿಯ ಯೋಜಿತ ಕೊಲೆ ಎಂದು ಆತನ ಕುಟುಂಬದವರು ಆರೋಪಿಸಿದ್ದಾರೆ. ಮ್ಯಾಜಿಸ್ಟ್ರೇಟ್ ಅಕ್ಟೋಬರ್ 20 ರಂದು ಅವರ ಸಾವಿನ ಹೇಳಿಕೆಯನ್ನು ದಾಖಲಿಸಿದ್ದಾರೆ ಮತ್ತು ಪೊಲೀಸರು ಅಕ್ಟೋಬರ್ 21 ರಂದು ಹೇಳಿಕೆಯನ್ನು ತೆಗೆದುಕೊಂಡರು. ಶರೋನ್ ತನ್ನ ಸಾವಿನ ಮೊದಲು ನೀಡಿರುವ ಹೇಳಿಕೆ ಪ್ರಕಾರ ಯಾರನ್ನೂ ಅನುಮಾನಿಸುವುದಿಲ್ಲ ಎಂದು ಪದೇ ಪದೇ ಹೇಳಿದ್ದರು. ಇದೀಗ, 8 ಗಂಟೆಗಳ ವಿಚಾರಣೆಯ ನಂತರ ಅಪರಾಧವನ್ನು ಒಪ್ಪಿಕೊಂಡ ಗ್ರೀಷ್ಮಾ ಅವರನ್ನು ತಿರುವನಂತಪುರಂನಲ್ಲಿ ಪೊಲೀಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.