Bengaluru: ಪ್ರಯಾಣಿಕನ ಚಪ್ಪಲಿಯಲ್ಲಿ 69. 40 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ: ಓರ್ವ ವ್ಯಕ್ತಿಯ ಬಂಧನ
ಚಪ್ಪಲಿಯಲ್ಲಿ ಸುಮಾರು 69.40 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರು: ಚಪ್ಪಲಿಯಲ್ಲಿ ಸುಮಾರು 69.40 ಲಕ್ಷ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ (smuggling) ಸಾಗಿಸುತ್ತಿದ್ದ ಪ್ರಯಾಣಿಕನನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬ್ಯಾಂಕಾಕ್ನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದ ಮೂಲಕ ಆಗಮಿಸಿದ್ದ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ 1.2 ಕೆಜಿ ತೂಕದ ಚಿನ್ನ ಪತ್ತೆಯಾಗಿದೆ. ಸದ್ಯ ವ್ಯಕ್ತಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಇತ್ತೀಚೆಗೆ ವಿಮಾನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ65 ಲಕ್ಷ ಮೌಲ್ಯದ ಚಿನ್ನ ಜಪ್ತಿ ಮಾಡಿರುವಂತಹ ಘಟನೆ ದೇವನಹಳ್ಳಿ ಬಳಿಯ ಏರ್ಪೋರ್ಟ್ನಲ್ಲಿ ನಡೆದಿದೆ. ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆ ಮಾಡಿ ಬಹ್ರೇನ್ನಿಂದ ಬೆಂಗಳೂರಿಗೆ G280 ವಿಮಾನದಲ್ಲಿ ಬಂದಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದಿದ್ದಾರೆ. ಪ್ರಯಾಣಿಕ ವಿದೇಶದಿಂದ ಸೋಪ್ ಮಾದರಿಯಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಕಸ್ಟಮ್ಸ್ ಅಧಿಕಾರಿಗಳ ತಂಡ 65 ಲಕ್ಷ ಮೌಲ್ಯದ 1 ಕೆಜಿ 171 ಗ್ರಾಂ ಚಿನ್ನ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ.
#WATCH | Gold weighing 1.2 kg worth Rs 69.40 lakh seized from a slipper of a passenger who arrived from Bangkok in Bengaluru by IndiGo flight: Customs pic.twitter.com/4dBwb5Dhpv
— ANI (@ANI) March 15, 2023
ದಾಖಲೆ ಇಲ್ಲದೆ ಲಕ್ಷಾಂತರ ರೂ. ಮೌಲ್ಯದ ಚಿನ್ನ, ಬೆಳ್ಳಿ ಸಾಗಾಟ: ವ್ಯಕ್ತಿ ಬಂಧನ
ದಾಖಲೆ ಇಲ್ಲದೆ ಲಕ್ಷಾಂತರ ರೂ. ಮೌಲ್ಯದ 319 ಗ್ರಾಂ ಚಿನ್ನ, 15 ಕೆಜಿ ಬೆಳ್ಳಿ ಮತ್ತು 28 ಲಕ್ಷಕ್ಕೂ ಹೆಚ್ಚು ನಗದನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿ ರಾತ್ರಿ ಪೊಲೀಸರು ಪರಿಶೀಲನೆ ಮಾಡಿದಾಗ ಆಂಧ್ರದ ಧರ್ಮಾವರಂ ಮೂಲದ ಅಕ್ಷಯ್ ಸತೀಶ್ ಕದಂ ಎನ್ನುವವರ ಬಳಿ ಪತ್ತೆಯಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎನ್ಸಿಆರ್ ದಾಖಲು ಮಾಡಲಾಗಿದೆ. ಜಯದುರ್ಗ ಸಿಲ್ವರ್ ರಿಫೈನರಿಯಲ್ಲಿ ಅಕ್ಷಯ್ ಟ್ರಾನ್ಸ್ಪೋರ್ಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಣ, ಚಿನ್ನ, ಬೆಳ್ಳಿ ಬಗ್ಗೆ ಐಟಿ ಅಧಿಕಾರಿಗಳಿಗೆ ಪೊಲೀಸರು ಮಾಹಿತಿ ನೀಡಿದ್ದು, ಉಪ್ಪಾರಪೇಟೆ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟ: 65 ಲಕ್ಷ ಮೌಲ್ಯದ ಚಿನ್ನ ಸಮೇತ ಓರ್ವ ವ್ಯಕ್ತಿ ವಶಕ್ಕೆ
ಖತರ್ನಾಕ್ ಕಳ್ಳರ ಬಂಧನ
ಹದಿನಾಲ್ಕು ವರ್ಷಗಳಿಂದ ಕಳ್ಳತನ ಮಾಡಿ 24 ಕೇಸ್ನಲ್ಲಿ ವಾರೆಂಟ್ ಬಾಕಿ ಇದ್ದು ಮತ್ತೆ ಕಳ್ಳತನಕ್ಕೆ ಇಳಿದಿದ್ದ ಖತರ್ನಾಕ್ ಆರೋಪಿ ಇಬ್ಬರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಮ್ರಾನ್ ಅಲಿಯಾಸ್ ಚೋರ್ ಇಮ್ರಾನ್ ಮತ್ತು ನೂರುಲ್ಲಾ ಮುಲ್ಲಾ ಬಂಧಿತ ಆರೋಪಿಗಳು. ಸದ್ಯ ಬಂಧಿತರಿಂದ ಸುಮಾರು 70 ಲಕ್ಷ ಮೌಲ್ಯದ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆಯಲಾಗಿದೆ. ಹಲಸೂರು ಗೇಟ್, ಕೆ.ಪಿ ಅಗ್ರಹಾರ, ಎಸ್ಆರ್ ನಗರ, ಕೋಣನಕುಂಟೆ, ಕೆ.ಆರ್ ಪೇಟೆ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿರುವುದು ಬಯಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಮನೆಗೆ ನುಗ್ಗಿ ಪ್ರಿಯತಮೆಯನ್ನೇ ಕೊಂದ ಪಾಗಲ್ ಪ್ರೇಮಿ, ಕಾರಣವೇನು?
ಅಕ್ರಮವಾಗಿ ಚಿಂಕೆ ಕೊಂಬು ಮಾರಾಟ; ಆರೋಪಿ ಅರೆಸ್ಟ್
ದಾವಣಗೆರೆ: ಅಕ್ರಮವಾಗಿ ಚಿಂಕೆ ಕೊಂಬು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಚನ್ನಗಿರಿ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಾರವಾರ ಜಿಲ್ಲೆಯ ಶಿರಸಿ ತಾಲೂಕಿನ ಮುಡಗೋಡು ಮಳಲಿ ಗ್ರಾಮದ ನಿವಾಸಿ ಮಂಜುನಾಥ (32) ಬಂಧಿತ ಆರೋಪಿಯಾಗಿದ್ದು, ಈತನಿಂದ ಚಿಂಕೆಯ ಒಂದು ಕೊಂಬನ್ನು ವಶಕ್ಕೆ ಪಡೆಯಲಾಗಿದೆ. ಜಿಲ್ಲೆಯ ಚನ್ಮಗಿರಿ ಪಟ್ಟಣದಲ್ಲಿ ಜಿಂಕೆ ಕೊಂಬು ಮಾರಾಟ ಮಾಡುವಾಗ ಮಂಜುನಾಥ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕಾರ್ಯಾಚರಣೆ ವೇಳೆ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಈ ಹಿಂದೆ ಕೂಡಾ ಹಲವಾರು ಪ್ರಕರಣದಲ್ಲಿ ಭಾಗಿ ಆಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಬಂಧಿತ ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:20 pm, Wed, 15 March 23