Haryana Crime: ಹರ್ಯಾಣದ ಕುರುಕ್ಷೇತ್ರದಲ್ಲಿ ವ್ಯಕ್ತಿಯ ಎರಡೂ ಕೈಗಳನ್ನು ಕತ್ತರಿಸಿ ಕೊಂಡೊಯ್ದ ದುಷ್ಕರ್ಮಿಗಳು

| Updated By: ನಯನಾ ರಾಜೀವ್

Updated on: Jan 10, 2023 | 8:37 AM

ಹರ್ಯಾಣದ ಕುರುಕ್ಷೇತ್ರದಲ್ಲಿ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ದುಷ್ಕರ್ಮಿಗಳು ವ್ಯಕ್ತಿಯ ಎರಡೂ ಕೈಗಳನ್ನು ಕತ್ತರಿಸಿ ಕೊಂಡೊಯ್ದಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಸಹಿತ ಪರಿಶೀಲನೆ ನಡೆಸುತ್ತಿದ್ದಾರೆ.

Haryana Crime: ಹರ್ಯಾಣದ ಕುರುಕ್ಷೇತ್ರದಲ್ಲಿ ವ್ಯಕ್ತಿಯ ಎರಡೂ ಕೈಗಳನ್ನು ಕತ್ತರಿಸಿ ಕೊಂಡೊಯ್ದ ದುಷ್ಕರ್ಮಿಗಳು
ಪೊಲೀಸ್
Follow us on

ಹರ್ಯಾಣದ ಕುರುಕ್ಷೇತ್ರದಲ್ಲಿ ರೌಡಿಗಳ ಅಟ್ಟಹಾಸ ಮುಂದುವರೆದಿದೆ. ದುಷ್ಕರ್ಮಿಗಳು ವ್ಯಕ್ತಿಯ ಎರಡೂ ಕೈಗಳನ್ನು ಕತ್ತರಿಸಿ ಕೊಂಡೊಯ್ದಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳ ಸಹಿತ ಪರಿಶೀಲನೆ ನಡೆಸುತ್ತಿದ್ದಾರೆ. ರಕ್ತದ ಮಡುವಿನಲ್ಲಿದ್ದ ವ್ಯಕ್ತಿಯನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಪ್ರಥಮ ಚಿಕಿತ್ಸೆಯ ನಂತರ ವೈದ್ಯರು ಯುವಕನನ್ನು ಪಿಜಿಐ ಚಂಡೀಗಢಕ್ಕೆ ಕಳುಹಿಸಿದ್ದಾರೆ.

ವ್ಯಕ್ತಿಯೊಬ್ಬರು ಕುಳಿತಿರುವಾಗ ಅದೇ ವೇಳೆಗೆ 10/12 ಮಂದಿ ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಿ ಎರಡು ಕೈಗಳು ತುಂಡಾಗುವ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಇದರಿಂದ ಕಿಡಿಗೇಡಿಗಳು ತೃಪ್ತರಾಗಿರಲಿಲ್ಲ. ಅಲ್ಲಿಂದ ಹೋಗುವಾಗ ದುಷ್ಕರ್ಮಿಗಳು ಕತ್ತರಿಸಿದ ಎರಡೂ ಕೈಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ.

ಜಿಟಿ ರಸ್ತೆಯ ಹವೇಲಿ ಬಳಿ ನಡೆದ ಘಟನೆಯಿಂದಾಗಿ ಸಂಚಲನ ಮೂಡಿಸಿದೆ. ಯುವಕನ ಹೇಳಿಕೆಯ ಮೇರೆಗೆ ಆರೋಪಿ ಸಂಜು ಮುಹಾನ ಮತ್ತು ಅಂಕುಶ್ ಜಮಾಲ್‌ಪುರಿಯಾ ಸೇರಿದಂತೆ 8-10 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮತ್ತಷ್ಟು ಓದಿ: Delhi Accident: ಕಾರಿಗೆ ಸಿಲುಕಿಕೊಂಡಿದ್ದ ಯುವತಿ ಮೃತದೇಹ ಬೇರ್ಪಡಿಸಲು ಅಂದು ಯುವಕರು ಮಾಡಿದ್ದೇನು?

ಕರ್ನಾಲ್‌ನ ರಾಹ್ರಾ ಗ್ರಾಮದ ನಿವಾಸಿ ಜುಗ್ನು (30) ಸೋಮವಾರ ಪಿಪ್ಲಿಗೆ ಬಂದಿದ್ದರು. ಇಲ್ಲಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಜಿಟಿ ರಸ್ತೆಯ ಹವೇಲಿಯಲ್ಲಿ ತನ್ನ ಸ್ನೇಹಿತೆಯೊಂದಿಗೆ ಊಟ ಮಾಡುತ್ತಿದ್ದರು. ನಂತರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರೋಪಿಗಳು ಬ್ರೀಝಾ ಕಾರಿನಲ್ಲಿ ಬಂದಿದ್ದರು. ಆರೋಪಿಗಳು ಬಂದ ಕೂಡಲೇ ಜುಗ್ನು ಮೇಲೆ ಹಲ್ಲೆ ನಡೆಸಿ ಥಳಿಸಿದ ಬಳಿಕ ಆತನ ಎರಡೂ ಕೈಗಳನ್ನು ಕತ್ತರಿಸಿದ್ದಾರೆ.

ಘಟನೆಯಿಂದ ಸುತ್ತಮುತ್ತಲಿನವರೂ ಬೆಚ್ಚಿಬಿದ್ದಿದ್ದಾರೆ. ಸಂಜು ಮತ್ತು ಅಂಕುಶ್ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದೆ. ಸುಮಾರು ಒಂದೂವರೆ ವರ್ಷಗಳ ಹಿಂದೆ, ಜುಗ್ನು ಅಸ್ಸಾಂದ್‌ನಲ್ಲಿ ಗುತ್ತಿಗೆದಾರರ ಮೇಲೆ ಗುಂಡು ಹಾರಿಸಿದ ಆರೋಪವಿದೆ. ಈ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಹೊರ ಬಂದಿದ್ದ.

ಸದ್ಯ ಪೊಲೀಸರು ಘಟನೆ ನಡೆದ ಜಿಟಿ ರಸ್ತೆಯಲ್ಲಿರುವ ಭವನದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಸುಮಾರು ಒಂದೂವರೆ ವರ್ಷಗಳ ಹಿಂದೆ ಕರ್ನಾಲ್‌ನ ಅಸ್ಸಂದ್ ಪ್ರದೇಶದ ಜೈಸಿಂಗ್‌ಪುರ ಗ್ರಾಮದ ಬಳಿ ಜುಗ್ನು ತನ್ನ ಸಹಚರರೊಂದಿಗೆ ಸೇರಿ ಮದ್ಯದ ಗುತ್ತಿಗೆದಾರ ಸಂಜಯ್ ರಾಣಾ ಅಲಿಯಾಸ್ (ಸಂಜು) ಮೇಲೆ ಸುಮಾರು 15 ಗುಂಡುಗಳನ್ನು ಹಾರಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಘಟನೆಯಲ್ಲಿ ಜುಗ್ನು ಬೈಕ್ ಚಲಾಯಿಸುತ್ತಿದ್ದ ಎನ್ನಲಾಗಿದೆ. ದೂರಿನ ಮೇರೆಗೆ ಕರ್ನಾಲ್ ಪೊಲೀಸರು ಜುಗ್ನು ಮತ್ತು ಆತನ ಸಹಚರನನ್ನು ಬಂಧಿಸಿದ್ದರು.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ