ಹರ್ಯಾಣ: ವೈದ್ಯನಿಗೆ ಕಾರು ಡಿಕ್ಕಿ ಹೊಡೆಸಿ ಬಾನೆಟ್ ಮೇಲೆ 50 ಮೀಟರ್ ಎಳೆದೊಯ್ದ ಚಾಲಕ

ವೈದ್ಯನಿಗೆ ಚಾಲಕನೊಬ್ಬ ಕಾರು ಡಿಕ್ಕಿ ಹೊಡೆಸಿ ಬಾನೆಟ್​ ಮೇಲೆ 50 ಮೀಟರ್ ಎಳೆದೊಯ್ದ ಘಟನೆ ಹರ್ಯಾಣದಲ್ಲಿ ನಡೆದಿದೆ. ಹರ್ಯಾಣದ ಪಂಚಕುಲಾ ಸೆಕ್ಟರ್ 8ರ ಟ್ರಾಫಿಕ್ ಸಿಗ್ನಲ್ ಬಳಿ ವೈದ್ಯರೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, 50 ಮೀಟರ್​ ದೂರ ಎಳೆದೊಯ್ಯಲಾಗಿತ್ತು. ವೈದ್ಯರು ಟ್ಯೂಷನ್​ಗೆ ಹೋಗಿದ್ದ ಮಕ್ಕಳನ್ನು ಕರೆತರಲು ಹೋಗಿದ್ದರು, ಆ ಸಮಯದಲ್ಲಿ ವೈದ್ಯರ ಕಾರಿಗೆ ಯಾವುದೋ ಕಾರೊಂದು ಡಿಕ್ಕಿ ಹೊಡೆದಿತ್ತು.

ಹರ್ಯಾಣ: ವೈದ್ಯನಿಗೆ ಕಾರು ಡಿಕ್ಕಿ ಹೊಡೆಸಿ ಬಾನೆಟ್ ಮೇಲೆ 50 ಮೀಟರ್ ಎಳೆದೊಯ್ದ ಚಾಲಕ
ವೈದ್ಯ
Image Credit source: India Today

Updated on: Aug 28, 2023 | 12:25 PM

ವೈದ್ಯನಿಗೆ ಚಾಲಕನೊಬ್ಬ ಕಾರು ಡಿಕ್ಕಿ ಹೊಡೆಸಿ ಬಾನೆಟ್​ ಮೇಲೆ 50 ಮೀಟರ್ ಎಳೆದೊಯ್ದ ಘಟನೆ ಹರ್ಯಾಣದಲ್ಲಿ ನಡೆದಿದೆ. ಹರ್ಯಾಣದ ಪಂಚಕುಲಾ ಸೆಕ್ಟರ್ 8ರ ಟ್ರಾಫಿಕ್ ಸಿಗ್ನಲ್ ಬಳಿ ವೈದ್ಯರೊಬ್ಬರಿಗೆ ಕಾರು ಡಿಕ್ಕಿ ಹೊಡೆದಿದ್ದು, 50 ಮೀಟರ್​ ದೂರ ಎಳೆದೊಯ್ಯಲಾಗಿತ್ತು.
ವೈದ್ಯರು ಟ್ಯೂಷನ್​ಗೆ ಹೋಗಿದ್ದ ಮಕ್ಕಳನ್ನು ಕರೆತರಲು ಹೋಗಿದ್ದರು, ಆ ಸಮಯದಲ್ಲಿ ವೈದ್ಯರ ಕಾರಿಗೆ ಯಾವುದೋ ಕಾರೊಂದು ಡಿಕ್ಕಿ ಹೊಡೆದಿತ್ತು.

ಅದನ್ನು ಪ್ರಶ್ನಿಸಲು ಕಾರಿನಿಂದ ಕೆಳಗಿಳಿದಿದ್ದ ಸಂದರ್ಭದಲ್ಲಿ ಕಾರು ಚಾಲಕ ವೈದ್ಯರಿಗೆ ಡಿಕ್ಕಿ ಹೊಡೆದು ಬಾನೆಟ್​ ಮೇಲೆ 50 ಮೀಟರ್​ನಷ್ಟು ದೂರ ಎಳೆದೊಯ್ದಿದ್ದಾನೆ.

ಗಗನ್ ಗಾರ್ಗ್ ಎಂದು ಗುರುತಿಸಲಾಗಿರುವ ವೈದ್ಯ, ಸೆಕ್ಟರ್ 4 ಮಾನಸಾ ದೇವಿ ಕಾಂಪ್ಲೆಕ್ಸ್‌ನ ನಿವಾಸಿಯಾಗಿದ್ದು, ಪಂಚಕುಲದ ಖಾಸಗಿ ಆಸ್ಪತ್ರೆಯಲ್ಲಿ ಉದ್ಯೋಗಿಯಾಗಿದ್ದಾರೆ.

ಮತ್ತಷ್ಟು ಓದಿ: ಬೆಂಗಳೂರು: ಕಾರಿನ ಬಾನೆಟ್​​​ ಮೇಲೆ ಬಿದ್ದ ವ್ಯಕ್ತಿಯನ್ನು 2 ಕಿ.ಮೀ. ದೂರಕ್ಕೆ ಹೊತ್ತೊಯ್ದ ಚಾಲಕಿ; ಐವರು ಅರೆಸ್ಟ್

ಕರ್ ಮಲಿಕ್ ಎಂದು ಗುರುತಿಸಲಾದ ಆರೋಪಿಯು ತನಗೆ ಬೆದರಿಕೆ ಹಾಕಿ ಚಾಕುವನ್ನು ಸಹ ತೋರಿಸಿದ್ದಾನೆ ಎಂದು ಗಾರ್ಗ್ ಹೇಳಿದರು.
ಇದೀಗ ಕಾರು ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಯುವಕನೊಬ್ಬ ಘಟನೆಯ ಸಂಪೂರ್ಣ ವಿಡಿಯೋ ಮಾಡಿದ್ದಾನೆ. ಈ ವಿಡಿಯೋ ಮತ್ತು ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಗಗನ್ ಅವರನ್ನು ಸೆಕ್ಟರ್ 6ರಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಯಿತು.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us