AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಾಳಿ ಕಟ್ಟುವ 1 ಗಂಟೆ ಮುಂಚೆ ಸೀರೆ ವಿಚಾರಕ್ಕೆ ವಧುವನ್ನು ಕೊಂದ ವರ

Bride-To-Be Killed By Fiance Hour Before Wedding After Fight Over Saree: ಸೀರೆ ಮತ್ತು ಹಣದ ವಿಚಾರಕ್ಕೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯಗೊಂಡಿದೆ. ಗುಜರಾತ್​ನ ಭಾವನಗರ್​ನಲ್ಲಿ ತನ್ನ ನಲ್ಲೆಗೆ ತಾಳಿ ಕಟ್ಟಬೇಕಿದ್ದ ವ್ಯಕ್ತಿ ಮಸಣದ ದಾರಿ ತೋರಿದ ಘಟನೆ ನಡೆದಿದೆ. ಮನೆಯವರ ವಿರೋಧದ ನಡುವೆ ಪ್ರೀತಿಸಿ ಒಂದೂವರೆ ವರ್ಷದಿಂದ ಲಿವಿಂಗ್ ಟುಗೆದರ್​ನಲ್ಲಿದ್ದ ಮಹಿಳೆ ಹತ್ಯೆಯಾಗಿದ್ದಾಳೆ.

ತಾಳಿ ಕಟ್ಟುವ 1 ಗಂಟೆ ಮುಂಚೆ ಸೀರೆ ವಿಚಾರಕ್ಕೆ ವಧುವನ್ನು ಕೊಂದ ವರ
ಸೋನಿ ಮತ್ತು ಸಾಜನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 16, 2025 | 8:47 PM

Share

ಅಹ್ಮದಾಬಾದ್, ನವೆಂಬರ್ 16: ತಾಳಿ ಕಟ್ಟಲು ಕೆಲವೇ ಕ್ಷಣ ಇರುವಾಗ ಏನೇನೋ ಘಟನೆಗಳು ಸಂಭವಿಸಿಬಿಡುತ್ತವೆ. ವಧು (Would-be bride) ಓಡಿ ಹೋಗಬಹುದು, ಇನ್ಯಾರೋ ಹಳೆಯ ಪ್ರೇಮಿ ಬಂದು ಮದುವೆ ನಿಲ್ಲಿಸಬಹುದು, ವರದಕ್ಷಿಣ ಕೊಟ್ಟಿಲ್ಲವೆಂದು ಮದುವೆ ಮುರಿದುಬೀಳಬಹುದು. ಆದರ, ಗುಜರಾತ್​ನ ಭಾವನಗರ್ (Bhavnagar, Gujarat) ಎಂಬಲ್ಲಿ ಸೀರೆ ವಿಚಾರವೊಂದು ವರನಿಂದ ವಧು ಹತ್ಯೆಯಾಗಲು (murder) ಕಾರಣವಾಗಿದೆ.

ಹತ್ಯೆಯಾಗಿರುವ ವಧುವಿನ ಹೆಸರು ಸೋನಿ ಹಿಮ್ಮತ್ ರಾಥೋಡ್. ಈಕೆಯನ್ನು ಕೊಂದ ಆರೋಪ ಎದುರಿಸುತ್ತಿರುವ ವರನ ಹೆಸರು ಸಾಜನ್ ಬರೇಯ. ಘಟನೆ ನಡೆದಿರುವುದು ಗುಜರಾತ್​ನ ಭಾವನಗರ್​ನ ಪ್ರಭುದಾಸ್ ಲೇಕ್​ನಲ್ಲಿನ ತೇಕ್ರಿ ಚೌಕ್ ಎಂಬಲ್ಲಿ. ತಾಳಿ ಕಟ್ಟಲು ಒಂದು ಗಂಟೆ ಇರುವಾಗ ವರ ಮತ್ತು ವಧುವಿನ ನಡುವೆ ಸೀರೆ ಹಾಗೂ ಹಣದ ವಿಚಾರಕ್ಕೆ ಜಗಳವಾಗಿದೆ. ಆ ವೇಳೆ, ಸೋನಿ ರಾಥೋಡ್​ಳನ್ನು ಸಾಜನ್ ಕೊಂದಿದ್ದಾನೆ ಎನ್ನಲಾಗಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ನೋಯ್ಡಾ: ಬಸ್ಸಿನೊಳಗೆ ಪ್ರೇಯಸಿಯ ಶಿರಚ್ಛೇದ ಮಾಡಿದ್ದ ಪ್ರಿಯಕರ ಹೇಳಿದ್ದೇನು?

ಸೋನಿ ಹಿಮ್ಮತ್ ರಾಥೋಡ್ ಮತ್ತು ಸಾಜನ್ ಬರೈಯ ಇಬ್ಬರೂ ಕೂಡ ಒಂದೂವರೆ ವರ್ಷಗಳಿಂದ ವಿಲಿಂಗ್ ಟುಗೆದರ್ ಸಂಬಂಧದಲ್ಲಿ ಇದ್ದರು. ವಿವಾಹದ ಎಲ್ಲಾ ಶಾಸ್ತ್ರಗಳು ಮುಗಿದಿದ್ದವು. ಸೀರೆ ಹಾಗೂ ಹಣದ ವಿಚಾರಕ್ಕೆ ಇಬ್ಬರ ನಡುವೆ ಜಗಳ ಶುರುವಾಗಿದೆ. ಕೋಪದ ಭರದಲ್ಲಿ ಆರೋಪಿಯು ಕಬ್ಬಿಣದ ರಾಡ್​ನಿಂದ ಸೋನಿಗೆ ಬಡಿದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ಆಕೆಯ ತಲೆಯನ್ನು ಗೋಡೆಗೆ ಗುದ್ದಿಸಿದ್ದಾನೆ.

ಇಬ್ಬರೂ ವಾಸಿಸುತ್ತಿದ್ದ ಮನೆಯಲ್ಲಿ ಈ ಘಟನೆ ನಡೆದಿದೆ. ಅಲ್ಲಿಯೇ ಇಬ್ಬರ ವಿವಾಹ ಜರುಗುವುದಿತ್ತು. ಇಬ್ಬರೂ ಕೂಡ ತಮ್ಮ ಕುಟುಂಬಗಳ ವಿರೋಧ ಲೆಕ್ಕಿಸದೆ ಪ್ರೀತಿಸಿ, ಒಟ್ಟಿಗೆ ವಾಸವಿದ್ದರು. ಆರೋಪಿ ಸಾಜನ್ ತನ್ನ ಪ್ರಿಯತಮೆಯನ್ನು ಕೊಂದಿದ್ದು ಮಾತ್ರವಲ್ಲ, ನೆರೆಮನೆಯರೊಬ್ಬರ ಮೇಲೆಯೂ ಹಲ್ಲೆ ಮಾಡಿರುವ ಆರೋಪ ಇದೆ. ಎರಡೂ ಘಟನೆಗಳ ಸಂಬಂಧ ಆತನ ಮೇಲೆ ಪ್ರತ್ಯೇಕ ದೂರುಗಳು ದಾಖಲಾಗಿವೆ.

ಇದನ್ನೂ ಓದಿ: ಧೂಮ್​ ಸಿನಿಮಾ ಪ್ರೇರಣೆ, ಶ್ರೀಮಂತರ ಮನೆಗಳೇ ಟಾರ್ಗೆಟ್​​: ಬೆಳಗಾವಿಯಲ್ಲೊಬ್ಬ ಖತರ್ನಾಕ್​ ಕಳ್ಳ

ಪೊಲೀಸರು ಘಟನೆಯ ತನಿಖೆ ನಡೆಸುತ್ತಿದ್ದಾರೆ. ಕೊಲೆಯಾದ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಇನ್ನಷ್ಟು ಕ್ರೈಂ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!