50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್

ಹುಬ್ಬಳ್ಳಿಯಲ್ಲಿ ಓರ್ವ ವ್ಯಕ್ತಿ ಮಹಿಳೆಗೆ ₹60 ಲಕ್ಷಗಳನ್ನು ಪಡೆದು ನಕಲಿ ನೋಟುಗಳನ್ನು ನೀಡಿ ವಂಚಿಸಿದ್ದಾನೆ. ಮೈಸೂರು ಮೂಲದ ಮಹಮ್ಮದ್ ಆಸೀಪ್ ಎಂಬ ಆರೋಪಿಯು ಪುಣೆಯ ಮಹಿಳೆಗೆ ₹50 ಕೋಟಿ ಸಾಲ ಒದಗಿಸುವುದಾಗಿ ನಂಬಿಸಿ ಹಣ ಪಡೆದಿದ್ದಾನೆ. ನಂತರ, ನಕಲಿ ನೋಟುಗಳನ್ನು ನೀಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣವು ವಿದ್ಯಾನಗರ ಠಾಣೆಯಲ್ಲಿ ದಾಖಲಾಗಿದೆ.

50 ಕೋಟಿ ರೂ.ಸಾಲ ಕೊಡಿಸುವುದಾಗಿ ಮಹಿಳೆಗೆ ಕೋಟಾ ನೋಟು ಕೊಟ್ಟ ಮಹಮ್ಮದ್
ನಕಲಿ ನೋಟು, ಆರೋಪಿ ಮಹಮ್ಮದ್​
Edited By:

Updated on: Jun 11, 2025 | 10:42 PM

ಹುಬ್ಬಳ್ಳಿ, ಜೂನ್​ 11: ವಂಚಕನೋರ್ವ ಸಾಲ ಕೊಡಿಸುವುದಾಗಿ ನಂಬಿಸಿ ಮಹಿಳೆಯಿಂದ 60 ಲಕ್ಷ ರೂ. ಪಡೆದು ಕೋಟಾ ನೋಟು (Fake Note) ನೀಡಿ ವಂಚಿಸಿದ್ದ ಘಟನೆ ಹುಬ್ಬಳ್ಳಿಯಲ್ಲಿ (Hubballi) ನಡೆದಿದೆ. ಮೈಸೂರು ಮೂಲದ ಆರೋಪಿ ಮಹಮ್ಮದ್ ಆಸೀಪ್ ವಂಚಕ. ಆರೋಪಿ ಮಹಮ್ಮದ್​ ಆಸೀಪ್​ ಪುಣೆ ಮೂಲದ ಮಹಿಳೆಗೆ ಕಟ್ಟಡ ಕೆಲಸಕ್ಕಾಗಿ ಕಡಿಮೆ ಬಡ್ಡಿದರಲ್ಲಿ ಐವತ್ತು ಕೋಟಿ ರೂಪಾಯಿ ಹಣ ಸಾಲ ಕೊಡಿಸುವುದಾಗಿ ಹೇಳಿದ್ದಾನೆ. ಪ್ರೊಸೆಸಿಂಗ್ ಶುಲ್ಕ ಅಂತ ಮಹಿಳೆಯಿಂದ 60 ಲಕ್ಷ ರೂ. ಹಣ ಪಡೆದಿದ್ದಾನೆ. ನಂತರ, ಮೊದಲ ಕಂತಿನ ರೂಪದಲ್ಲಿ ಮಹಿಳೆಗೆ 1.87 ಕೋಟಿ ರೂ. ನೀಡಿದ್ದಾನೆ. ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆ ಬ್ಯಾಗ್ ತೆರೆದು ನೋಡಿದಾಗ, ನಕಲಿ ನೋಟುಗಳು ಕಂಡಿದ್ದು, ಆಘಾತಕ್ಕೆ ಒಳಗಾಗಿದ್ದಾರೆ.

ಮಹಮ್ಮದ್ ಆಸೀಪ್, ಸುಧೀರ್ ಮೆಹ್ತಾ ಅಂತ ಎಲ್ಲರಿಗೂ ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದನು. ಒಂದು ವರ್ಷದ ಹಿಂದೆ ಮೈಸೂರಿಗೆ ಬಂದಿದ್ದ ಪುಣಾ ಮೂಲದ ಓರ್ವ ಮಹಿಳೆಗೆ ಆರೋಪಿ ಮಹಮ್ಮದ್ ಆಸೀಪ್​ ಪರಿಚಯವಾಗಿದ್ದನು. ಆಗ ಮಹಿಳೆಗೆ, ಮಹಮ್ಮದ್​ ಆಸೀಪ್​ ತಾನು ಅನೇಕ ಉದ್ಯಮಿಗಳಿಗೆ ಸಾಲ ಕೊಡಿಸುತ್ತೇನೆ, ತನಗೆ ದೊಡ್ಡ ದೊಡ್ಡ ಪೈನಾನ್ಸ್​ರಗಳು ಪರಿಚಯವಿದ್ದಾರೆ ಅಂತ ಹೇಳಿದ್ದನು. ಈತನ ಮಾತನ್ನು ನಂಬಿದ್ದ ಮಹಿಳೆ, ನನ್ನ ಮಗಳು ಮುಂಬೈನಲ್ಲಿ ಕಟ್ಟಡದ ಕಾಮಗಾರಿ ಆರಂಭಿಸುವವಳಿದ್ದಾಳೆ, ಅದಕ್ಕಾಗಿ ಐವತ್ತು ಕೋಟಿ ರೂಪಾಯಿ ಸಾಲ ಬೇಕು ಎಂದು ಹೇಳಿದ್ದರಂತೆ.

ಆಗ, ಮಹಮ್ಮದ್ ಆಸೀಪ್ ಸಾಲ ಕೊಡಿಸುವುದಾಗಿ ಹೇಳಿದ್ದನಂತೆ. ಐವತ್ತು ಕೋಟಿ ರೂಪಾಯಿಗೆ ಪ್ರೊಸೆಸಿಂಗ್ ಚಾರ್ಜ್ ಅಂತ 60 ಲಕ್ಷ ರೂಪಾಯಿ ನೀಡಬೇಕು ಅಂತ ಹೇಳಿದ್ದನಂತೆ. ಈತನ ಮಾತನ್ನು ನಂಬಿದ್ದ ಮಹಿಳೆ, ಕೆಲ ದಿನಗಳ ಹಿಂದೆ ಮಹಮ್ಮದ್ ಆಸೀಪ್​ಗೆ 60 ಲಕ್ಷ ಹಣ ನೀಡಿದ್ದರಂತೆ. ಸಾಲದ ಮೊದಲ ಕಂತಿನ ಭಾಗವಾಗಿ, ನಿಮಗೆ 2ಕೋಟಿ ಹಣ ನೀಡುತ್ತೇನೆ, ಹುಬ್ಬಳ್ಳಿಗೆ ಬನ್ನಿ ಅಂತ ಮಹಮ್ಮದ್ ಆಸೀಪ್ ಕರೆದಿದ್ದನಂತೆ. ಈತನ ಮಾತು ನಂಬಿದ್ದ ಮಹಿಳೆ, ತನ್ನ ಜೊತೆ ಕೆಲ ಪರಿಚಿತರನ್ನು ಕರೆದುಕೊಂಡು ಜೂನ್ 5 ರಂದು ಹುಬ್ಬಳ್ಳಿಗೆ ಬಂದಿದ್ದರಂತೆ.

ಇದನ್ನೂ ಓದಿ
ಜಗಳ ಬಿಡಿಸಲು ಹೋದ ತಾಯಿ ದುರಂತ ಸಾವು, ಜನ್ಮ ಕೊಟ್ಟವಳಿಗೆ ಇರಿದು ಕೊಂದ ಮಗ
ಪತ್ನಿಯಿಂದ ಪತಿಗೆ ಟಾರ್ಚರ್ ಪ್ರಕರಣಗಳು ಇತ್ತೀಚಿಗೆ ಜಾಸ್ತಿಯಾಗುತ್ತಿವೆ
ಒಬ್ಬ ವ್ಯಕ್ತಿ ಹೆಸರಲ್ಲಿ ಐದಾರು ಸಿಮ್: ಪಾಕ್ ಪರ ಕೃತ್ಯಕ್ಕೆ ಬಳಸಿರುವ ಶಂಕೆ
ಹುಬ್ಬಳ್ಳಿ​: ನುಡಿದಂತೆ ನಡೆಯದ ಸರ್ಕಾರ, ಕುಟುಂಬಕ್ಕೆ ಬಾರದ ಪರಿಹಾರ

ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಹೋಟೆಲ್​ವೊಂದರ ಮುಂದೆ ಎರಡು ಸೂಟ್ ಕೇಸ್​ನಲ್ಲಿ ಹಣ ತುಂಬಿ ಮಹಮ್ಮದ್ ಆಸೀಪ್ ಮಹಿಳೆಗೆ ನೀಡಿದ್ದನಂತೆ. ಸದ್ಯ ನಿಮಗೆ 1 ಕೋಟಿ 87 ಲಕ್ಷದ 45 ಸಾವಿರ ಹಣ ನೀಡಿದ್ದೇನೆ. ಉಳಿದ 48 ಕೋಟಿಯನ್ನು ಮತ್ತೆ ಕೊಡಿಸುತ್ತೇನೆ ಅಂತ ಹೇಳಿದ್ದನಂತೆ. ಹಣ ಸಿಕ್ಕ ಖುಷಿಯಲ್ಲಿದ್ದ ಮಹಿಳೆ, ಸೂಟ್​ಕೇಸ್​ನಲ್ಲಿದ್ದ ಹಣ ಪರಿಶೀಲಿಸದೆ ಅದನ್ನು ತಾವು ಉಳಿದುಕೊಂಡಿದ್ದ ಹೋಟೆಲ್​ಗೆ ತಗೆದುಕೊಂಡು ಹೋಗಿದ್ದರು. ನಂತರ ಆ ಹಣವನ್ನು ಹೇಗೆ ಮುಂಬೈಗೆ ತಗೆದುಕೊಂಡು ಹೋಗುವುದು ಅಂತ ಯೋಚನೆ ಮಾಡಿ, ಹಣದ ಬ್ಯಾಗ್ ತಗೆದು ನೋಡಿದಾಗ ಮಹಮ್ಮದ್ ಆಸೀಪ್ ನೀಡಿರುವುದು ಅಸಲಿ ನೋಟ್ ಅಲ್ಲ, ನಕಲಿ ನೋಟು ಎಂದು ಗೊತ್ತಾಗಿದೆ.

ಮಹಮ್ಮದ್ ಆಸೀಪ್, ಮಹಿಳೆಗೆ ನೀಡಿದ್ದ 1.87 ಕೋಟಿ ಹಣದಲ್ಲಿ, ಐದು ಸಾವಿರ ರೂ. ನೋಟುಗಳು ಮಾತ್ರ ಅಸಲಿಯಾಗಿದ್ದವು. ಮಹಮ್ಮದ್​ ಆಸೀಪ್​ ಹಣದ ಬಂಡಲ್ ಮೇಲೆ ಮಾತ್ರ 500 ಬೆಲೆಯ ಒಂದೊಂದು ಅಸಲಿ ನೋಟು ಇಟ್ಟಿದ್ದನು. ಉಳಿದ ಎಲ್ಲ ನೋಟುಗಳನ್ನು ಕೋಟಾ ನೋಟು ಇಟ್ಟಿದ್ದನು.

ಕೋಟಾ ನೋಟು ನೋಡಿ ಶಾಕ್ ಆಗಿದ್ದ ಮಹಿಳೆ, ಹುಬ್ಬಳ್ಳಿ ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು, ಆರೋಪಿ ಪತ್ತೆಗೆ ಮುಂದಾದರು. ಖಚಿತ ಮಾಹಿತಿ ಮೇರೆಗೆ ಮುರ್ಡೇಶ್ವರದಲ್ಲಿ ಆರೋಪಿಯನ್ನು ಪತ್ತೆ ಮಾಡಿ, ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ನಾಯಿ ಕೊಡೆಗಳಂತೆ ಹುಟ್ಟುತ್ತಿರುವ ಪಿಜಿಗಳಿಗೆ ಜಿಲ್ಲಾಡಳಿತ ಲಗಾಮು: ಮಾಲೀಕರಿಗೆ ಢವಢವ

ಮಂಗಳವಾರ ಆರೋಪಿಯನ್ನು ಬಂಧಿಸಿದ ಪೊಲೀಸರು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಇನ್ನು ಮಹಮ್ಮದ್ ಆಸೀಪ್, ಬೆಂಗಳೂರಿನಲ್ಲೂ ಕೂಡ ಕೋಟಾ ನೋಟ್ ಪ್ರಕರಣದಲ್ಲಿ ಆರೋಪಿಯಾಗಿದ್ದನಂತೆ. ತಾನೊಬ್ಬ ವಿಐಪಿ ಅಂತ ಹೇಳಿಕೊಂಡು ಅಡ್ಡಾಡುತ್ತಿದ್ದ ಮಹಮ್ಮದ್ ಆಸೀಪ್, ಅನೇಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದನು. ಅವರಿಗೆ ಸಾಲ ಕೊಡಿಸುವುದಾಗಿ ಹೇಳಿ ಲಕ್ಷ ಲಕ್ಷ ಹಣ ಪಡೆದು, ಕೋಟಾ ನೋಟು ನೀಡಿ ಯಾಮಾರಿಸುವುದು ಈತನ ಕಾಯಕವಾಗಿತ್ತು. ನಕಲಿ ನೋಟುಗಳನ್ನು ತಮಿಳುನಾಡಿನಲ್ಲಿ ಪ್ರಿಂಟ್ ಹಾಕಿಸಿಕೊಂಡು ಬಂದಿದ್ದ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಮಹಮ್ಮದ್ ಆಸೀಪ್ ಜೈಲು ಪಾಲಾಗಿದ್ದಾನೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ