ಅನೈತಿಕ ಸಂಬಂಧ ಆರೋಪ: ಪತ್ನಿಯನ್ನ ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಪತಿ!

ಬೆಂಗಳೂರು: ಅದೊಂದು ಪುಟ್ಟ ಮನೆ.. ಸುಖೀ ಸಂಸಾರ.. ಗಂಡ, ಹೆಂಡತಿ, ಮಕ್ಕಳು.. ಕಷ್ಟ ಅನ್ನೋದು ಇದ್ರೂ ಸಹ ಇಬ್ಬರೂ ದುಡಿದು ಜೀವನ ಮಾಡ್ತಿದ್ರು. ಆದ್ರೆ ಅದೊಂದು ಸಣ್ಣ ಕಾರಣಕ್ಕೆ ಜಗಳ ಶುರುವಾಗಿತ್ತು. ಆದ್ರೆ ಆಮೇಲೆ ಆಗಿದ್ದೇ ಘನಘೋರ ಘಟನೆ. ಅದು ಕಳೆದ ರಾತ್ರಿ ಸುಮಾರು 9 ಗಂಟೆ 30 ನಿಮಿಷ ಸಮಯ. ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೋ ಲವಕುಶ ನಗರದ ಜನತೆ ಒಂದು ಕ್ಷಣ ಬೆಚ್ಚಿಬಿದ್ದಿದ್ರು. ಮನೆಯೊಳಗೆ ನಡೀತಿದ್ದ ಜಗಳ ಕ್ಷಣಕ್ಷಣಕ್ಕೂ ಜೋರಾಗ್ತಿತ್ತು. ಅಷ್ಟೇ ನೋಡ […]

ಅನೈತಿಕ ಸಂಬಂಧ ಆರೋಪ: ಪತ್ನಿಯನ್ನ ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದ ಪತಿ!
Follow us
ಸಾಧು ಶ್ರೀನಾಥ್​
| Updated By: ಆಯೇಷಾ ಬಾನು

Updated on: Jul 01, 2020 | 11:51 AM

ಬೆಂಗಳೂರು: ಅದೊಂದು ಪುಟ್ಟ ಮನೆ.. ಸುಖೀ ಸಂಸಾರ.. ಗಂಡ, ಹೆಂಡತಿ, ಮಕ್ಕಳು.. ಕಷ್ಟ ಅನ್ನೋದು ಇದ್ರೂ ಸಹ ಇಬ್ಬರೂ ದುಡಿದು ಜೀವನ ಮಾಡ್ತಿದ್ರು. ಆದ್ರೆ ಅದೊಂದು ಸಣ್ಣ ಕಾರಣಕ್ಕೆ ಜಗಳ ಶುರುವಾಗಿತ್ತು. ಆದ್ರೆ ಆಮೇಲೆ ಆಗಿದ್ದೇ ಘನಘೋರ ಘಟನೆ.

ಅದು ಕಳೆದ ರಾತ್ರಿ ಸುಮಾರು 9 ಗಂಟೆ 30 ನಿಮಿಷ ಸಮಯ. ಬೆಂಗಳೂರಿನ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರೋ ಲವಕುಶ ನಗರದ ಜನತೆ ಒಂದು ಕ್ಷಣ ಬೆಚ್ಚಿಬಿದ್ದಿದ್ರು. ಮನೆಯೊಳಗೆ ನಡೀತಿದ್ದ ಜಗಳ ಕ್ಷಣಕ್ಷಣಕ್ಕೂ ಜೋರಾಗ್ತಿತ್ತು. ಅಷ್ಟೇ ನೋಡ ನೋಡ್ತಿದ್ದಂತೆ ಮಹಿಳೆಯೊಬ್ಬಳು ಬೀದಿಗೆ ಓಡೋಡಿ ಬಂದಿದ್ಳು. ಆಕೆಯನ್ನ ವ್ಯಕ್ತಿಯೊಬ್ಬ ಅಟ್ಟಾಡಿಸಿಕೊಂಡು ಬಂದವನೇ ಏಕಾಏಕಿ ಚಾಕುವಿನಿಂದ ಅಟ್ಯಾಕ್ ಮಾಡೇಬಿಟ್ಟಿದ್ದ.

ಚಾಕು ಇರಿದು ತಲೆ ಮೇಲೆ ಕಲ್ಲು ಹಾಕಿದ ಕ್ರೂರಿ! ಹೌದು ಅಷ್ಟಕ್ಕೂ ಕೊಲೆಯಾಗಿರೋ ಈಕೆ ಹೆಸ್ರು ಹೇಮ. ಇನ್ನು ಈತ ಮೃತ ಹೇಮಾಳ ಪತಿ ಮಂಜುನಾಥ್. ಇಬ್ಬರೂ ಹಲವು ವರ್ಷಗಳಿಂದ ನೆಮ್ಮದಿಯಾಗಿ ಜೀವನ ಸಾಗಿಸ್ತಿದ್ರು. ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದ ಮಂಜುನಾಥ್ ಮನೆಗೆ ಸರಿಯಾಗಿ ಬರ್ತಿರಲಿಲ್ಲವಂತೆ. ಜೊತೆಗೆ ಇತ್ತ ಹೇಮಾ ಕೂಡ ಮತ್ತೊಬ್ಬನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗ್ತಿದೆ. ಅದೇ ರೀತಿ ಪತಿಯೂ ಕೂಡ ಬೇರೊಬ್ಬಳ ಜತೆ ಸಂಬಂಧ ಇರಿಸಿಕೊಂಡಿದ್ದನಂತೆ.

ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ಕೂಡ ನಡೀತಿತ್ತು. ಆದ್ರೆ ನಿನ್ನೆ ರಾತ್ರಿ ಗಲಾಟೆ ತಾರಕಕ್ಕೇರಿದ್ದು ಪತ್ನಿಯನ್ನ ಬರ್ಬರವಾಗಿ ಹತ್ಯೆ ಮಾಡಿಬಿಟ್ಟಿದ್ದಾನೆ. ಚಾಕುವಿನಿಂದ ಇರಿದಿದ್ದಲ್ಲದೇ ತಲೆ ಮೇಲೆ ಕಲ್ಲು ಕೂಡ ಎತ್ತಿಹಾಕಿ ಎಸ್ಕೇಪ್ ಆಗಿದ್ದಾನೆ.

ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ರಾಜಗೋಪಾಲನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸಿ ಕೇಸ್ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರೋ ಕೊಲೆಗಾರ ಪತಿ ಮಂಜುನಾಥ್‌ಗಾಗಿ ಬಲೆ ಬೀಲಿಸಿದ್ದಾರೆ.

‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?