ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ

ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಬಳಿಕ ಪತಿ ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ತಾಲೂಕಿನ ಹೆಮ್ಮಾಡಿಯ ದೇವಲ್ಕುಂದ ಗ್ರಾಮದಲ್ಲಿ ನಡೆದಿದೆ.

ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ಪತಿ
ಪ್ರಾತಿನಿಧಿಕ ಚಿತ್ರ
Edited By: ವಿವೇಕ ಬಿರಾದಾರ

Updated on: Aug 22, 2022 | 3:39 PM

ಉಡುಪಿ: ಪತ್ನಿಯನ್ನು (Wife) ಬರ್ಬರವಾಗಿ ಹತ್ಯೆಗೈದು ಬಳಿಕ ಪತಿ (Husband) ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ (Kundapur) ತಾಲೂಕಿನ ಹೆಮ್ಮಾಡಿಯ ದೇವಲ್ಕುಂದ ಗ್ರಾಮದಲ್ಲಿ ನಡೆದಿದೆ. ಪತಿ ರವಿ ಆಚಾರಿ ಪತ್ನಿ ಪೂರ್ಣಿಮಾ(38) ಗೆ ಕಬ್ಬಿಣದ ಪ್ಲೇಟ್​ನಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ರವಿ ಆಚಾರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರವಿ ಪೂಜಾರಿ ಲಾರಿ ಚಾಲಕನಾಗಿದ್ದಾನೆ. ದಂಪತಿ ಶಿವಮೊಗ್ಗ ಜಿಲ್ಲೆ ಸಾಗರ ಮೂಲದವರಾಗಿದ್ದಾರೆ.

ಕುಟುಂಬದ ಕಾರ್ಯಕ್ರಮವೊಂದಕ್ಕೆ ಪತಿ ಪತ್ನಿಯನ್ನು ಶಿವಮೊಗ್ಗದಿಂದ ಕರೆಸಿದ್ದನು. ದಂಪತಿ ಮಧ್ಯೆ ಜಗಳದಲ್ಲಿ ಪತಿ ಪತ್ನಿಯನ್ನು ಕೊಲೆಗೈದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕ್ಕಾಗಿ ಮೊಮ್ಮಗನನ್ನ ಕಿಡ್ನಾಪ ಮಾಡಿಸಿದ ಖತರ್ನಾಕ್ ಅಜ್ಜ: ಓರ್ವನ ಬಂಧನ, ಮೂವರು ಪರಾರಿ

ಕಾರವಾರ: ಅಜ್ಜನಿಂದಲೇ ಮೊಮ್ಮಗನ ಕಿಡ್ನಾಪ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಕೊಟ್ಟ ಹಣ ವಾಪಾಸ್ ಪಡೆಯಲು ಖತರ್ನಾಕ್ ಅಜ್ಜ ತನ್ನ ಮೊಮ್ಮಗನನ್ನ ಕಿಡ್ನಾಪ ಮಾಡಿಸಿದ. ಭಟ್ಕಳದಲ್ಲಿ 20 ನೇ ತಾರೀಖು ರಾತ್ರಿ ವೇಳೆ ಎಂಟು ವರ್ಷದ ಬಾಲಕನನ್ನು ಕಿಡ್ನಾಪ ಮಾಡಲಾಗಿತ್ತು. ಭಟ್ಕಳದ ಆಜಾದ ನಗರದಲ್ಲಿ ಅಲಿ ಇಸ್ಲಾಂ ಸಾದಾ (8) ಬಾಲಕನನ್ನು ಕಿಡ್ನಾಪ ಮಾಡಲಾಗಿತ್ತು. ಇಂದು ಗೋವಾದ ಕಲ್ಲಂಗುಟ್ ಬೀಚ್ ಸಮೀಪ ಬಾಲಕ ಪತ್ತೆಯಾಗಿದ್ದಾನೆ. ಬಾಲಕನ ಜೊತೆಗಿದ್ದ ಓರ್ವ ಆರೋಪಿ ಬಂಧನ ಮಾಡಲಾಗಿದೆ. ಭಟ್ಕಳ ಬದ್ರಿಯಾ ನಗರದ ಅನಿಸ್ ಭಾಷಾ ಬಂಧಿತ. ಇನ್ನೂ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಒಟ್ಟು ನಾಲ್ವರು ಅಪಹರಣ ಮಾಡಿದ್ದರು.

ಬಾಲಕನ ತಂದೆ ಮತ್ತು ಮಾವನ ನಡುವೆ ಹಣಕಾಸಿನ ವ್ಯವಹಾರ ಸಂಬಂಧವಾಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಪ್ರಮುಖ ಆರೋಪಿ ಇನಾಯತ್ ಉಲ್ಲಾ ತಾಯಿಯ ಸಂಬಂಧಿ. ಈ ಹಿಂದೆ ಕೂಡ ಬಾಲಕನ ತಂದೆಗೆ ಬೆದರಿಕೆ ಹಾಕಲಾಗಿತ್ತು ಎಂದು ಎಸ್ಪಿ ಸುಮನ್ ಪೆನ್ನೆಕರ್ ಮಾಹಿತಿ ನೀಡಿದರು. ಇನ್ನೂ ನಾಲ್ವರು ಆರೋಪಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಅಸಭ್ಯ ವರ್ತನೆ ಬಗ್ಗೆ ಪೋಷಕರಿಗೆ ತಿಳಿಸಿದ್ದಕ್ಕೆ ಬಾಲಕಿಗೆ ಚಾಕು ಇರಿದು ಕೊಲೆ; ಆತ್ಮಹತ್ಯೆ ಮಾಡಿಕೊಂಡ ಆರೋಪಿ

ಹಳೆ ದ್ವೇಷ ಹಿನ್ನೆಲೆ ಯುವಕನ ಮೇಲೆ ಹಲ್ಲೆ

ಶಿವಮೊಗ್ಗ: ತಡರಾತ್ರಿ ಬೈಕ್​ ಅಡ್ಡಗಟ್ಟಿ ಯುವಕನ ಮೇಲೆ ಹಲ್ಲೆ ಮಾಡಿರುವಂತಹ ಘಟನೆ ತಾಲೂಕಿನ ಕೋಟೆ ಗಂಗೂರು ಗ್ರಾಮದಲ್ಲಿ ನಡೆದಿದೆ. ಕೀಜರ್​(29) ಹಲ್ಲೆಗೊಳಗಾದ ಯುವಕ. ಜೂಜಾಟದ ವಿಚಾರವಾಗಿ ಗಲಾಟೆ ನಡೆದಿದ್ದು, ಭಾಸ್ಕರ್​ ಮತ್ತು ತಂಡದಿಂದ ಕೀಜರ್​ ಮೇಲೆ ಲಾಂಗ್​ನಿಂದ ಹಲ್ಲೆ ಮಾಡಲಾಗಿದೆ ಎನ್ನಲಾಗುತ್ತಿದೆ. ಕೀಜರ್ ಮೇಲಿನ ಹಲ್ಲೆಗೆ ಪ್ರತಿಯಾಗಿ ಮತ್ತೊಂದು ಗುಂಪು ದಾಂದಲೆ ಮಾಡಲಾಗಿದೆ. ಸೋಮಿನಕೊಪ್ಪ ಅಫ್ರಿದಿ, ಸೈಯದ್​, ಅಫ್ಸರ್​ ಗ್ಯಾಂಗ್​ನಿಂದ ಗಲಾಟೆ ಮಾಡಿದ್ದು, ಲೋಕೇಶ್​ಗೆ ಸೇರಿದ ಕಾರು, ಬೈಕ್​​ ಮೇಲೆ ರಾಡ್​ನಿಂದ ದಾಳಿ ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 3:35 pm, Mon, 22 August 22

TV9 Web

TV9 Kannada

Read More
Loading...
Unable to load recommendations.
Follow Us