Hyderabad: ಮದುವೆಯಾಗಲು ಒಪ್ಪಲಿಲ್ಲ ಎಂದು ಮಹಿಳಾ ಟೆಕ್ಕಿಯ ಕತ್ತು ಸೀಳಿದ ಯುವಕ

ಮದುವೆಯಾಗಲು ನಿರಾಕರಿಸಿದ್ದಕ್ಕೆ 22 ವರ್ಷದ ಮಹಿಳಾ ಸಾಫ್ಟ್​ವೇರ್ ಇಂಜಿನಿಯರ್​ನ ಕತ್ತು ಸೀಳಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

Hyderabad: ಮದುವೆಯಾಗಲು ಒಪ್ಪಲಿಲ್ಲ ಎಂದು ಮಹಿಳಾ ಟೆಕ್ಕಿಯ ಕತ್ತು ಸೀಳಿದ ಯುವಕ
Crime Scene
Image Credit source: Times Of India

Updated on: Jun 22, 2023 | 12:22 PM

ಮದುವೆಯಾಗಲು ನಿರಾಕರಿಸಿದ್ದಕ್ಕೆ 22 ವರ್ಷದ ಮಹಿಳಾ ಸಾಫ್ಟ್​ವೇರ್ ಇಂಜಿನಿಯರ್​ನ ಕತ್ತು ಸೀಳಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಈಗ ಟೆಕ್ಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ, ಆರೋಪಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆಯು ನರಸಿಂಗಿ ಪೊಲೀಸ್​ಠಾಣಾ ವ್ಯಾಪ್ತಿಯ ಪುಪ್ಪಲಗೂಡದಲ್ಲಿ ನಡೆದಿದೆ. ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ ಗಣೇಶ್​ ಯುವತಿಯನ್ನು ಮದುವೆಯಾಗಲು ಬಯಸಿದ್ದ , ಆಕೆಯು ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು.

ಯುವತಿ ಹೈದರಾಬಾದ್​ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು, ಹಾಸ್ಟೆಲ್​ವೊಂದರಲ್ಲಿ ವಾಸವಿದ್ದಳು. ಗಣೇಶ್​ ಮಂಗಳವಾರ ರಾತ್ರಿ ಹುಡುಗಿಯ ಹಾಸ್ಟೆಲ್​ಗೆ ಹೋಗಿ ಪುಪ್ಪಲಗುಡದ ಹೋಟೆಲ್​ ಬಳಿ ಕರೆದೊಯ್ದಿದ್ದ, ಅಲ್ಲಿ ಮತ್ತೊಮ್ಮೆ ಮದುವೆ ಪ್ರಸ್ತಾಪ ಇಟ್ಟಿದ್ದ, ಆಕೆ ಮತ್ತೆ ತಿರಸ್ಕರಿಸಿದ್ದಾಳೆ, ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಮತ್ತಷ್ಟು ಓದಿ: Hassan News: ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತು ಮನೆ ಒಡತಿ ಆತ್ಮಹತ್ಯೆ; ಮಗಳ ಸಾವಿನ ಸುದ್ದಿ ಕೇಳಿ ಸಾವನ್ನಪ್ಪಿದ ತಾಯಿ

ನಂತರ ಯುವಕ ಬ್ಯಾಗ್​ನಲ್ಲಿ ಇಟ್ಟಿದ್ದ ಚಾಕು ತೆಗೆದು ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ. ಆಕೆಯ ಕತ್ತು ಹಾಗೂ ಕೈಗಳ ಮೇಲೆ ಇರಿತದ ಗಾಯಗಳಾಗಿವೆ. ಅಲ್ಲೇ ಇದ್ದ ಸ್ಥಳೀಯರು ತಕ್ಷಣವೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ, ಗಣೇಶ್​ನನ್ನು ಬಂಧಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು, ಹೆಚ್ಚಿನ ತನಿಖೆ ನಡೆಯುತ್ತಿದೆ.

 

ಕ್ರೈಂ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us