ಅಶ್ಲೀಲ ವೀಡಿಯೋ ವೀಕ್ಷಣೆ ಚಟ; ದೈಹಿಕ ಸಂಪರ್ಕಕ್ಕೆ ಒಪ್ಪದ ಮಗಳನ್ನೇ ಕೊಂದ ತಂದೆ
ಕಾಡಿನಲ್ಲಿ ತಂದೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. 12 ವರ್ಷದ ಬಾಲಕಿ ಕಿರುಚಾಡಿ ತನ್ನ ತಾಯಿಗೆ ಹೇಳುವಂತೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪಗೊಂಡ ಆತ ಮಗಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾನೆ. ಬಳಿಕ ಮನೆಗೆ ತೆರಳಿ ಅಂಗಿ ಬದಲಿಸಿ ಪತ್ನಿಗೆ ಮಗಳು ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದಾನೆ.
ಅಶ್ಲೀಲ ವೀಡಿಯೋ ನೋಡುವ ಚಟ ಹೊಂದಿದ್ದ ವ್ಯಕ್ತಿಯೊಬ್ಬ ತನ್ನ ಮಗಳ ಮೇಲೆಯೇ ಅತ್ಯಾಚಾರ ನಡೆಸಲು ಮುಂದಾಗಿದ್ದು, ಈ ವೇಳೆ ಆಕೆ ವಿರೋಧಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ತನ್ನ ಮಕ್ಕಳನ್ನೇ ಕೊಂದಿದ್ದಾನೆ. ಈ ಘಟನೆ ಹೈದರಾಬಾದ್ ನಗರದ ಸಮೀಪವಿರುವ ಮಿಯಾಪುರದಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಪೊಲೀಸರು ಆತನನ್ನು ಬಂಧಿಸಿದ್ದು, ಈ ವೇಳೆ ಆತ ತನ್ನ ಮಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ.
ಆರೋಪಿಯ ಕುಟುಂಬವು ಇತ್ತೀಚೆಗೆ ತೆಲಂಗಾಣದ ಮಹುಬಾಬಾದ್ ಜಿಲ್ಲೆಯಿಂದ ಮಿಯಾಪುರಕ್ಕೆ ಸ್ಥಳಾಂತರಗೊಂಡಿತ್ತು. ಮನೆಯಿಂದ ಸ್ಪಲ್ಪ ದೂರ ಕಾಡು ಪ್ರದೇಶದಲ್ಲಿ ಬಾಲಕಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಸಿಸಿಟಿವಿ ದೃಶ್ಯಾವಳಿಯಿಂದ ಪೊಲೀಸರು ಸುಳಿವುಗಳನ್ನು ಕಂಡುಕೊಂಡಿದ್ದು,ಪಾಪಿ ತಂದೆ ತನ್ನ ಮಗಳೊಂದಿಗೆ ಕಾಡು ದಾರಿಯಲ್ಲಿ ಹೋಗಿರುವುದು ಮತ್ತು ಕೆಳ ಹೊತ್ತಿನ ಬಳಿಕ ಒಬ್ಬಂಟಿಯಾಗಿ ಹಿಂದಿರುಗಿಸಿ ಬಂದಿರುವುದು ಸೆರೆಯಾಗಿದೆ.
ಇದನ್ನೂ ಓದಿ: ಲೋನ್‌ಗೆಂದು ಹೋಗಿ ಬ್ಯಾಂಕ್ ಸಿಇಒನನ್ನೇ ತನ್ನ ಬಲೆಗೆ ಬೀಳಿಸಿ 4 ಕೋಟಿ ರೂ. ದೋಚಿದ ಮಹಿಳೆ
ಕಾಡಿನಲ್ಲಿ ತಂದೆ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದೆ. 12 ವರ್ಷದ ಬಾಲಕಿ ಕಿರುಚಾಡಿ ತನ್ನ ತಾಯಿಗೆ ಹೇಳುವಂತೆ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪಗೊಂಡ ಆತ ಮಗಳ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾನೆ. ಬಳಿಕ ಮನೆಗೆ ತೆರಳಿ ಅಂಗಿ ಬದಲಿಸಿ ಪತ್ನಿಗೆ ಮಗಳು ಕಾಣೆಯಾಗಿದ್ದಾಳೆ ಎಂದು ತಿಳಿಸಿದ್ದಾನೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:43 pm, Sat, 22 June 24