ಹೈದರಾಬಾದ್: ಬಂಜಾರಾ ಹಿಲ್ಸ್‌ನಲ್ಲಿ ಮರ್ಸಿಡಿಸ್ ಬೆಂಜ್ ಕಾರಿನೊಳಗೆ 17 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ (Gang rape) ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ (BJP) ಶುಕ್ರವಾರ ಹೈದರಾಬಾದ್‌ನ ಜುಬಿಲಿ ಹಿಲ್ಸ್ ಪೊಲೀಸ್ ಠಾಣೆಯಲ್ಲಿ (Jubilee Hills police station) ಬೃಹತ್ ಪ್ರತಿಭಟನೆ ನಡೆಸಿದೆ. ಬಿಜೆಪಿ ಪಕ್ಷದ ಮುಖಂಡರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸುತ್ತಿರುವುದು ವಿಡಿಯೊದಲ್ಲಿ ಕಾಣಬಹುದು. ಈ ವಿಡಿಯೊ ಶೇರ್ ಮಾಡಿರುವ ಎಎನ್ಐ ಸುದ್ದಿಸಂಸ್ಥೆ ಪ್ರತಿಭಟನೆಯ ಸ್ಥಳದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿ ಮಾಡಿದೆ. ಮೇ 28ರಂದು ಬಂಜಾರಾ ಹಿಲ್ಸ್ ನಲ್ಲಿರುವ ಪಬ್ವೊಂದರಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡು ವಾಪಸ್ ಬರುವಾಗ ನಾಲ್ಕು ಅಪ್ರಾಪ್ತರು ಬಾಲಕಿಯನ್ನು ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಈ ಘಟನೆ ಬಗ್ಗೆ ಮೇ31ರಂದು ಸಂತ್ರಸ್ತೆಯ ಕುಟುಂಬದವರು ದೂರು ನೀಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹೆಸರು ಹೇಳಲು ಬಯಸದ ಪೊಲೀಸ್ ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ್ದು, ಹೈದರಾಬಾದ್‌ನ ಹಳೇ ನಗರದ ಶಾಸಕರ ಮಗನೂ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಹೆಚ್ಚಿನ ಮಾಹಿತಿಗಳು ತನಿಖೆ ನಂತರವೇ ಹೊರಬರಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಪ್ರಾಥಮಿಕ ಮಾಹಿತಿ ವರದಿ ಪ್ರಕಾರ ಮೇ 28ರಂದು ಮಧ್ಯಾಹ್ನ ನನ್ನ ಮಗಳು ಆಕೆಯ ಫ್ರೆಂಡ್ ಆತಿಥ್ಯ ವಹಿಸಿದ ಪಾರ್ಟಿಯಲ್ಲಿ ಭಾಗವಹಿಸಲು ಜುಬಿಲಿ ಹಿಲ್ಸ್ ಗೆ ಹೋಗಿದ್ದಳು ಎಂದು ಸಂತ್ರಸ್ತೆಯ ಅಪ್ಪ ಹೇಳಿದ್ದಾರೆ. ಆಕೆಯ ಕುತ್ತಿಗೆಯಲ್ಲಿ ಗಾಯವಾಗಿತ್ತು. ಆಕೆ ಅದೆಷ್ಟು ಆಘಾತಕ್ಕೀಡಾಗಿದ್ದಳು ಎಂದರೆ ಅಲ್ಲಿ ಏನು ನಡೆಯಿತು ಎಂಬುದನ್ನು ಹೇಳಲೂ ಆಕೆಗೆ ಆಗುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ.
#WATCH | BJP Telangana members protest at Jubliee Hills PS, Hyderabad over Jubliee Hills rape case Security forces were deployed at the protest site.
A case was registered against 5 minors for allegedly raping a minor girl on May 28. pic.twitter.com/gbPvsbzNNW
— ANI (@ANI) June 3, 2022
ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಆರಂಭದಲ್ಲಿ ಭಾರತೀಯ ದಂಡ ಸಂಹಿತೆ ಮತ್ತು POCSO ಕಾಯಿದೆಯ ಸೆಕ್ಷನ್ 354 (ದಾಳಿ ಅಥವಾ ಕ್ರಿಮಿನಲ್ ಶಕ್ತಿ) ಸೆಕ್ಷನ್ 354 ಅಡಿಯಲ್ಲಿ ಹೆಸರಿಸದ ಆರೋಪಿಗಳನ್ನು ದಾಖಲಿಸಿದ್ದಾರೆ. ಗುರುವಾರ ಪೊಲೀಸರು ಹುಡುಗಿಯೊಂದಿಗೆ ಮಾತನಾಡಿದ ನಂತರ ಮತ್ತು ಆಕೆಯ ವೈದ್ಯಕೀಯ ಪರೀಕ್ಷೆಯ ವರದಿಯ ಆಧಾರದ ಮೇಲೆ ಐಪಿಸಿ ಸೆಕ್ಷನ್ 376 (ಗ್ಯಾಂಗ್ ರೇಪ್) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 9:32 pm, Fri, 3 June 22