AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್ ಅಪ್ರಾಪ್ತೆ ಮೇಲಿನ ಸಾಮೂಹಿಕ ರೇಪ್ ಪ್ರಕರಣದಲ್ಲಿ ಒಬ್ಬನ ಬಂಧನ, ಉಳಿದವರ ಬಗ್ಗೆ ಸುಳಿವು, ಆರೋಪಿಗಳಲ್ಲಿ 3 ಅಪ್ರಾಪ್ತರು!

‘ಸಂತ್ರಸ್ತೆ ದುರಳರ ಗುರುತಿನ ಬಗ್ಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಆಕೆ ಒಬ್ಬನ ಹೆಸರು ಉಲ್ಲೇಖಿಸಿದ ಕೂಡಲೇ ವಿಶೇಷ ತಂಡಗಳು ಕೂಡಲೇ ಅವನಿದ್ದ ಸ್ಥಳಕ್ಕೆ ಧಾವಿಸಿ ಬಂಧಿಸಿವೆ. ಸಿಸಿಟಿವಿ ಫುಟೇಜನ್ನು ನಾವು ಪಡೆದಿದ್ದು ಅದು ಮತ್ತು ಸಂತ್ರಸ್ತೆಯ ಹೇಳಿಯ ಆಧಾರದ ಮೇಲೆ ಅ ಮೇಲೆ ಐವರು ರೇಪಿಸ್ಟ್ ಗಳ ಗುರುತು ಹಚ್ಚಿದ್ದೇವೆ,’ ಎಂದು ಪೊಲೀಸ್ ಅಧಿಕಾರಿ ಜೋಯೆಲ್ ಡೇವಿಸ್ ಹೇಳಿದ್ದಾರೆ.

ಹೈದರಾಬಾದ್ ಅಪ್ರಾಪ್ತೆ ಮೇಲಿನ ಸಾಮೂಹಿಕ ರೇಪ್ ಪ್ರಕರಣದಲ್ಲಿ ಒಬ್ಬನ ಬಂಧನ, ಉಳಿದವರ ಬಗ್ಗೆ ಸುಳಿವು, ಆರೋಪಿಗಳಲ್ಲಿ 3 ಅಪ್ರಾಪ್ತರು!
ಪೊಲೀಸ್ ಅಧಿಕಾರಿ ಜೋಯೆಲ್ ಡೇವಿಸ್
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jun 04, 2022 | 1:56 AM

Share

ಹೈದರಾಬಾದ್: ತೆಲಂಗಾಣದ ರಾಜಧಾನಿ ಹೈದರಾಬಾದನಲ್ಲಿ (Hyderabad) ಕಳೆದ ಶನಿವಾರ ಅಂದರೆ ಮೇ 28ರ ಸಾಯಂಕಾಲ ಐಷಾರಾಮಿ ಕಾರೊಂದರಲ್ಲಿ 17-ವರ್ಷ-ವಯಸ್ಸಿನ ಅಪ್ರಾಪ್ತೆಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಅಪರಾಧವೆಸಗಿರುವ ಐವರು ದುರುಳರ ಪೈಕಿ ಮೂವರು ಅಪ್ರಾಪ್ತರು (minors) ಅಂತ ಪೊಲೀಸ್ ಮೂಲಗಳು ತಿಳಿಸಿವೆ. ದುಬಾರಿ ಕಾರುಗಳಲ್ಲಿ ಓಡಾಡುವ ಪ್ರಭಾವಿ ರಾಜಕಾರಣಿಗಳ (influential politicians) ಮಕ್ಕಳು ಮೊಮ್ಮಕ್ಕಳು ನಡೆಸಿರುವ ಘೋರ ಕೃತ್ಯ ನಗರದಲ್ಲಿ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿದೆ. ತೆಲಂಗಾಣದ ಸರ್ಕಾರದ ಗೃಹ ಸಚಿವರ ಮೊಮ್ಮಗ ಅಪರಾಧದಲ್ಲಿ ಭಾಗೀದಾರ ಅಲ್ಲವೆಂದು ಪೊಲೀಸರು ಹೇಳಿದ್ದಾರೆ.

‘ಸಂತ್ರಸ್ತೆ ದುರಳರ ಗುರುತಿನ ಬಗ್ಗೆ ಯಾವ ಮಾಹಿತಿಯನ್ನೂ ನೀಡಿಲ್ಲ. ಆಕೆ ಒಬ್ಬನ ಹೆಸರು ಉಲ್ಲೇಖಿಸಿದ ಕೂಡಲೇ ವಿಶೇಷ ತಂಡಗಳು ಕೂಡಲೇ ಅವನಿದ್ದ ಸ್ಥಳಕ್ಕೆ ಧಾವಿಸಿ ಬಂಧಿಸಿವೆ. ಸಿಸಿಟಿವಿ ಫುಟೇಜನ್ನು ನಾವು ಪಡೆದಿದ್ದು ಅದು ಮತ್ತು ಸಂತ್ರಸ್ತೆಯ ಹೇಳಿಯ ಆಧಾರದ ಮೇಲೆ ಅ ಮೇಲೆ ಐವರು ರೇಪಿಸ್ಟ್ ಗಳ ಗುರುತು ಹಚ್ಚಿದ್ದೇವೆ,’ ಎಂದು ಪೊಲೀಸ್ ಅಧಿಕಾರಿ ಜೋಯೆಲ್ ಡೇವಿಸ್ ಹೇಳಿದ್ದಾರೆ.

ಸಿಸಿಟಿವಿ ಫುಟೇಜಲ್ಲಿ ಸಂತ್ರಸ್ತೆಯು ತನಗೆ ಪಬ್ ನಲ್ಲಿ ಭೇಟಿಯಾದ ಅತ್ಯಾಚಾರಿಗಳ ಜೊತೆ ಅದೇ ಪಬ್ ಹೊರಭಾಗದಲ್ಲಿ ನಿಂತಿರುವ ದೃಶ್ಯ ಪೊಲೀಸರಿಗೆ ಸಿಕ್ಕಿದೆ. ಆ ಹುಡುಗರು ಸಂತ್ರಸ್ತೆಗೆ ಅವಳ ಮನೆಗೆ ಡ್ರಾಪ್ ಮಾಡುವುದಾಗಿ ಹೇಳಿದ್ದಾರೆ. ಆದರೆ ಆಕೆ ಕಾರು ಹತ್ತಿದ ಕೂಡಲೇ ನಗರದ ಒಂದು ಪ್ರತಿಷ್ಠಿತ ಬಡಾವಣೆಯಲ್ಲಿ, ಅದೇ ಕಾರೊಳಗೆ ಸರತಿಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಒಬ್ಬನು ದುಷ್ಕೃತ್ಯ ನಡೆಸುವಾಗ ಉಳಿದ ನಾಲ್ವರು ಕಾರಿನ ಸುತ್ತ ಕಾವಲು ನಿಂತಿದ್ದರು.

ನಗರದ ಪೊಲೀಸ್ ಠಾಣೆಯೊಂದರ ಎದುರುಗಡೆ ಪ್ರತಿಭಟನೆ ನಡೆಸುತ್ತಾ ಘೋಷಣೆಗಳನ್ನು ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ನಂತರ ಬಿಡುಗಡೆ ಮಾಡಿದರು.

ಸಂತ್ರಸ್ತೆ ತಂದೆಯ ದೂರಿನ ಆಧಾರದ ಪೊಲೀಸರು ಕೇವಲ ಅಸಭ್ಯ ವರ್ತನೆಯ ಪ್ರಕರಣ ಮಾತ್ರ ದಾಖಲಿಸಿಕೊಂಡಿದ್ದರು, ಬಳಿಕ ಅದನ್ನು ಸಾಮೂಹಿಕ ಅತ್ಯಾಚಾರ ಪ್ರಕಾರಣವಾಗಿ ಬದಲಾಯಿಸಲಾಯಿತು.

‘ಸಂತ್ರಸ್ತೆಯ ತಂದೆ ನಮ್ಮಲ್ಲಿಗೆ ಬಂದು ದೂರಿನಲ್ಲಿ ದಾಖಲಿಸಿದ ಅಂಶಗಳ ಆಧಾರದ ಮೇಲೆ ನಾವು ಪೋಕ್ಸೋ ಕಾಯ್ದೆ ಅಡಿಯಲ್ಲಿ ಮಹಿಳೆ ವಿರುದ್ಧ ದುರ್ವರ್ತನೆ ಪ್ರಕರಣ ಮಾತ್ರ ದಾಖಲಿಸಿಕೊಂಡೆವು. ಮಗಳ ಜೊತೆ ಏನು ಸಂಭವಿಸಿದೆ ಅನ್ನೋದು ಅವರಿಗೆ ಗೊತ್ತಿರಲಿಲ್ಲ. ಸಂತ್ರಸ್ತೆ ಯಾವುದೇ ಸಂಗತಿಯನ್ನು ಬಹಿರಂಗಪಡಿಸುವ ಸ್ಥಿತಿಯಲ್ಲಿರಲಿಲ್ಲ,’ ಎಂದು ಜೋಯೆಲ್ ಡೇವಿಸ್ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಗೃಹಸಚಿವ ಮೊಹಮ್ಮದ್ ಮಹಮೂದ್ ಅಲಿ, ಡಿಜಿಪಿ ಮತ್ತು ಹೈದರಾಬಾದ್ ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಂಡಿರುವ ತೆಲಂಗಾಣ ಐಟಿ ಸಚಿವ ಕೆಟಿ ರಾಮರಾವ್ ಅವರು ಸದರಿ ರೇಪ್ ಪ್ರಕರಣದಲ್ಲಿ ತ್ವರಿತ ಕ್ರಮ ತೆಗೆದುಕೊಂಡು ಅಪರಾಧಿಗಳು ಎಷ್ಟೇ ಪ್ರಭಾವಿಗಳ ಮಕ್ಕಳಾಗಿದ್ದರೂ ಯಾವುದೇ ವಿನಾಯಿತಿ ತೋರಿಸಬಾರದೆಂದು ಹೇಳಿದ್ದಾರೆ.

ತೆಲಂಗಾಣ ರಾಷ್ಟ್ರ ಸಮಿತಿ ಧುರೀಣೆ ಕೆ ಕವಿತಾ ಅವರು ತೆಲಂಗಾಣ ಪೊಲೀಸರ ಕಾರ್ಯಕ್ಷಮತೆ ಬಗ್ಗೆ ವಿಶ್ವಾಸ ಮಹಿಳೆಯರ ಸುರಕ್ಷತೆ ಕುರಿತು ಕಳವಳ ವ್ಕಕ್ತಪಡಿಸಿದ್ದಾರೆ

‘ಒಬ್ಬ ಅಪ್ರಾಪ್ತೆ ಅತ್ಯಾಚಾರಕ್ಕೊಳಗಾಗಿರುವುದು ದುಖಃಕರ ಮತ್ತು ನಾವೆಲ್ಲ ನಾಚಿಕೆಯಿಂದ ತಲೆತಗ್ಗಿಸುವ ಸಂಗತಿಯಾಗಿದೆ. ತೆಲಂಗಾಣ ಪೊಲೀಸರು ಪ್ರಕರಣದ ಆಳದವರೆಗೆ ಹೋಗುತ್ತಾರೆಂಬ ನಂಬಿಕೆ ನನಗಿದೆ. ಮಹಿಳೆಯರ ಸುರಕ್ಷತೆ ವಿಷಯಕ್ಕೆ ಬಂದರೆ ಯಾವುದಕ್ಕೂ ರಾಜಿಯಾಗದ ಧೋರಣೆಯನ್ನು ನಾವು ಅನಸರಿಸಿಕೊಂಡು ಬಂದಿದ್ದೇವೆ,’ ಎಂದು ಕವಿತಾ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.