ಕಾರು ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ: ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು
ಬಿಜೆಪಿ ನಾಯಕನ ಹತ್ಯೆಗೆ ಯತ್ನಿಸಿದ್ದ ಇಬ್ಬರು ಎಇಗಳ ಅಮಾನತು ಮಾಡಲಾಗಿದೆ. ಲೋಕೋಪಯೋಗಿ ವೃತ್ತದ ಎಇ ಶಂಭುಕುಮಾರ್, ಬೆಂಗಳೂರಿನ ಕೆ.ಆರ್.ವೃತ್ತದ ಇಂಜಿನಿಯರ್ ಎಂ.ಅಶ್ವಿನಿ ಅಮಾನತ್ತಾಗಿದ್ದಾರೆ.
ತುಮಕೂರು: ಕಾರು ಹಾಗೂ ಟಿಟಿ ವಾಹನದ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿರುವಂತಹ ಘಟನೆ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೇಗೂರು ಬ್ರಿಡ್ಜ್ ಬಳಿ ನಡೆದಿದೆ. ಟಿಟಿ ವಾಹನದಲ್ಲಿದ್ದ ಮೂವರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೆಂಗಳೂರು ಕಡೆಯಿಂದ ಹಾಸನ ಕಡೆಗೆ ಕಾರು ತೆರಳುತ್ತಿದ್ದು, ರಸ್ತೆ ಡಿವೈಡರ್ ದಾಟಿ ಹಾಸನ ಕಡೆಯಿಂದ ಬರ್ತಿದ್ದ ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ. ಸ್ಥಳಕ್ಕೆ ಕುಣಿಗಲ್ ಪೊಲೀಸರು ಭೇಟಿ ನೀಡಿ, ಪರಿಶೀಲನೆ ಮಾಡಿದ್ದಾರೆ.
ಅಪರಿಚಿತ ಶವ ಪತ್ತೆ
ಜಿಲ್ಲೆಯ ತುರುವೇಕೆರೆ ತಾಲೂಕಿನ ಡಿಬಿ ಹಟ್ಟಿ ಕೆರೆಯಲ್ಲಿ ಸುಮಾರು (35) ವರ್ಷದ ಅಪರಿಚಿತ ಶವ ಪತ್ತೆಯಾಗಿದ್ದು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ. ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಜಾಮಿಯಾ ಮಸೀದಿ ವಿವಾದ: ಹಿಂದೂ ಪರ ಸಂಘಟನೆಗಳಿಂದ ಇಂದು ಶ್ರೀರಂಗಪಟ್ಟಣ ಚಲೋ
ಮನೆ ಬೀಗ ಒಡೆದು ಕಳ್ಳತನ
ಮನೆಯ ಬೀಗ ಒಡೆದು 30 ಸಾವಿರ ಹಣ ಹಾಗೂ 20 ಗ್ರಾಂ ಚಿನ್ನ ದೋಚಿ ಖದೀಮರು ಪರಾರಿಯಾಗಿರುವಂತಹ ಘಟನೆ ತಾಲೂಕಿನ ಹೆಗ್ಗೆರೆಯಲ್ಲಿ ನಡೆದಿದೆ. ಗಾರೆ ಕೆಲಸ ಮಾಡಿಕೊಂಡಿದ್ದ ಗ್ರಾಮದ ಕಿರಣ್ ಎಂಬಾತರ ಮನೆಯಲ್ಲಿ ಕಳುವಾಗಿದೆ. ಮನೆಗೆ ಬೀಗ ಹಾಕಿಕೊಂಡು ಬೇರೆ ಊರಿಗೆ ಹೋದಾಗ ಘಟನೆ ಸಂಭವಿಸಿದ್ದು, ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.
ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಎಸಿಬಿ ಬಲೆಗೆ
ಖಾತೆ ಬದಲಾವಣೆ ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಪಿಡಿಓ ಎಸಿಬಿ ಬಲೆಗೆ ಬಿದ್ದಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಬೇಗೂರು ಗ್ರಾಪಂ ಪಿಡಿಓ ಸೌಮ್ಯ ಎಸಿಬಿ ಬಲೆಗೆ ಬಿದ್ದಿದ್ದಾರೆ. ಗ್ರಾಪಂ ವ್ಯಾಪ್ತಿಯ ಕುರುಪಾಳ್ಯ ಗ್ರಾಮದ ವಿನೋದ್ ಗೌಡರಿಂದ ಖಾತೆ ಬದಲಾವಣೆಗಾಗಿ 10 ಸಾವಿರ ಲಂಚ ಪಡೆಯುವಾಗ ಎಸಿಬಿಗೆ ಸಿಕ್ಕಿಕೊಂಡಿದ್ದಾರೆ. ತಾಲೂಕು ಪಂಚಾಯಿತಿ ದ್ವೀತಿಯ ದರ್ಜೆ ಲೆಕ್ಕ ಸಹಾಯಕಿ ಅನಸೂಯ ಸೂಚಿಸಿದ್ದ ಪಿಡಿಓ ಸೌಮ್ಯ. ವಿನೋದ್ ಗೌಡರಿಂದ ಲಂಚ ಪಡೆಯುವಾಗ ಸೌಮ್ಯ ಬಲೆಗೆ ಬಿದ್ದಿದ್ದಾರೆ. ತುಮಕೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರಿಂದ ಪ್ರಕರಣ ದಾಖಲು ಮಾಡಲಾಗಿದೆ.
ಬಿಜೆಪಿ ನಾಯಕನ ಹತ್ಯೆಗೆ ಯತ್ನಿಸಿದ್ದ ಇಬ್ಬರು ಎಇಗಳ ಅಮಾನತು
ಬಿಜೆಪಿ ನಾಯಕನ ಹತ್ಯೆಗೆ ಯತ್ನಿಸಿದ್ದ ಇಬ್ಬರು ಎಇಗಳ ಅಮಾನತು ಮಾಡಲಾಗಿದೆ. ಲೋಕೋಪಯೋಗಿ ವೃತ್ತದ ಎಇ ಶಂಭುಕುಮಾರ್, ಬೆಂಗಳೂರಿನ ಕೆ.ಆರ್.ವೃತ್ತದ ಇಂಜಿನಿಯರ್ ಎಂ.ಅಶ್ವಿನಿ ಅಮಾನತ್ತಾಗಿದ್ದಾರೆ. ಎಂ.ಅಶ್ವಿನಿ, ಪಿಡಬ್ಲ್ಯುಡಿಯ ಪಿಆರ್ಎಎಂಸಿ ವಿಭಾಗದ ಇಂಜಿನಿಯರ್ ಆಗಿದ್ದು, ಶಂಭುಕುಮಾರ್, ಅಶ್ವಿನಿ ಸೇರಿ ಮೂವರಿಂದ ತುಮಕೂರು ಜಿಲ್ಲಾ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಓಂಕಾರೇಶ್ವರ ಹತ್ಯೆ ಯತ್ನಿಸಲಾಗಿದೆ. ಓಂಕಾರೇಶ್ವರ ಮೇಲೆ ಕಾರು ಹತ್ತಿಸಿ ಹತ್ಯೆ ಯತ್ನ ಆರೋಪದಡಿ ಏ. 12ರಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಇಂಜಿನಿಯರ್ ಎಂ.ಅಶ್ವಿನಿ ನ್ಯಾಯಾಂಗ ಬಂಧನದಲ್ಲಿದ್ದು, ಸಹಾಯಕ ಇಂಜಿನಿಯರ್ ಶಂಭುಕುಮಾರ್ ತಲೆಮರೆಸಿಕೊಂಡಿದ್ದಾನೆ.
ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.