ಜೆ.ಡಿ.ಎಸ್ ಸ್ಥಳಿಯ ಮುಖಂಡ ಅನುಮಾನಸ್ಪದ ಸಾವು: ಹಳೆ ದ್ವೇಷ ಹಿನ್ನಲೆ ಕೊಲೆ ಮಾಡಿರುವುದಾಗಿ ಶಂಕೆ

ಸಾರ್ವಜನಿಕರ ಜೊತೆ ಅನುಚಿತ ವರ್ತನೆ ಮತ್ತು ಬ್ಲ್ಯಾಕ್​ಮೇಲ್ ಆರೋಪದಡಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಠಾಣೆಯ ಎಎಸ್‌ಐ ಗಣಪತಿ ಶೇರಗಾರ ಅಮಾನತು ಮಾಡಿ ಎಸ್​ಪಿ ಸುಮನ್ ಪೆನ್ನೆಕರ್ ಆದೇಶ ಹೊರಡಿಸಿದ್ದಾರೆ.

ಜೆ.ಡಿ.ಎಸ್ ಸ್ಥಳಿಯ ಮುಖಂಡ ಅನುಮಾನಸ್ಪದ ಸಾವು: ಹಳೆ ದ್ವೇಷ ಹಿನ್ನಲೆ ಕೊಲೆ ಮಾಡಿರುವುದಾಗಿ ಶಂಕೆ
ಚಿಕ್ಕ ಆಂಜನಪ್ಪ ಮೃತ ವ್ಯಕ್ತಿ.
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jun 03, 2022 | 12:12 PM

ಚಿಕ್ಕಬಳ್ಳಾಪುರ: ಜೆ.ಡಿ.ಎಸ್ ಸ್ಥಳಿಯ ಮುಖಂಡ ಅನುಮಾನಸ್ಪದ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ ನಡೆದಿದೆ. ಬೈಕ್​ನಲ್ಲಿ ಬರ್ತಿದ್ದ ಚಿಕ್ಕ ಆಂಜನಪ್ಪನನ್ನು ಹೊಡೆದು ಬಿಸಾಡಿರುವ ಶಂಕೆ ವ್ಯಕ್ತವಾಗಿದೆ. ನಂತರ ಬೈಕ್ ಅಪಘಾತವೆಂದು ಸೃಷ್ಟಿ ಆರೋಪ ಮಾಡಲಾಗಿದೆ. ಹಳೆ ದ್ವೇಷ ಹಿನ್ನಲೆ ಗ್ರಾಮದ ಕೆಲವರು ಸೇರಿ ಕೊಲೆ ಮಾಡಿರುವುದಾಗಿ ಮೃತನ ತಮ್ಮಅಶ್ಚತ್ಥಪ್ಪ ದೂರು ನೀಡಲಾಗಿದೆ. ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸಾರ್ವಜನಿಕರ ಜೊತೆ ಅನುಚಿತ ವರ್ತನೆ: ಎಎಸ್‌ಐ ಗಣಪತಿ ಶೇರಗಾರ ಅಮಾನತು 

ಕಾರವಾರ: ಸಾರ್ವಜನಿಕರ ಜೊತೆ ಅನುಚಿತ ವರ್ತನೆ ಮತ್ತು ಬ್ಲ್ಯಾಕ್​ಮೇಲ್ ಆರೋಪದಡಿ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಠಾಣೆಯ ಎಎಸ್‌ಐ ಗಣಪತಿ ಶೇರಗಾರ ಅಮಾನತು ಮಾಡಿ ಎಸ್​ಪಿ ಸುಮನ್ ಪೆನ್ನೆಕರ್ ಆದೇಶ ಹೊರಡಿಸಿದ್ದಾರೆ. ಸ್ಥಳೀಯ ಸಂಸ್ಥೆಯ ವ್ಯಕ್ತಿಯೊ‌ಂದಿಗೆ ಎಎಸ್‌ಐ ಅನುಚಿತವಾಗಿ ವರ್ತನೆ ವಿಡಿಯೋ ವೈರಲ್ ಹಿನ್ನೆಲೆ ASI ಗಣಪತಿ ಅಮಾನತು ಮಾಡಿ ಆದೇಶ ಹೋರಡಿಸಲಾಗಿದೆ.

ಪ್ರಶಾಂತ್ ನಾಗರಾಜ್ ಕೊಲೆ ಪ್ರಕರಣ: ಪ್ರಮುಖ ಆರೋಪಿಯ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ 

ಹಾಸನ: ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಪೂರ್ಣಚಂದ್ರ ಜೆಡಿಎಸ್ ಪಕ್ಷದ ಕಾರ್ಯಕರ್ತನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜೆಡಿಎಸ್ ಮುಖಂಡರ ಜೊತೆ ಫ್ಲೆಕ್ಸ್​​ನಲ್ಲಿರೊ ಫೋಟೋಗಳು ವೈರಲ್ ಆಗಿವೆ. ಸಂಸದ ಪ್ರಜ್ವಲ್, ರೇವಣ್ಣ ಅವರ ಫ್ಲೆಕ್ಸ್‌ಗಳಲ್ಲಿ ಪೂರ್ಣಚಂದ್ರ ಫೋಟೋ ಇದ್ದು, ಜೆಡಿಎಸ್​ನ ಹಲವು ಕಾರ್ಯಕ್ರಮಗಳ ಫ್ಲೆಕ್ಸ್​ನಲ್ಲಿ ಕಾಣಿಸಿಕೊಂಡಿದ್ದಾನೆ. ಜೆಡಿಎಸ್​ನಿಂದಲೇ ನಗರಸಭೆ ಸದಸ್ಯನಾಗಿ ಆಯ್ಕೆ ಆಗಿದ್ದ ಕೊಲೆಯಾದ ಪ್ರಶಾಂತ್, ಒಂದೇ ಪಕ್ಷದ ಇಬ್ಬರು ಪ್ರಮುಖ ಕಾರ್ಯಕರ್ತರ ನಡುವೆ ಗಲಾಟೆ ನಡೆದಿತ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಪ್ರಶಾಂತ್ ಕೊಲೆ ಕೇಸ್​ನಲ್ಲಿ ಪೂರ್ಣಚಂದ್ರ ವಿರುದ್ದವೇ ಕೇಸ್ ದಾಖಲಾಗಿದೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಅಕ್ರಮವಾಗಿ ನಿರ್ಮಿಸಿದ್ದ ಐಷಾರಾಮಿ ಮನೆ ತೆರವಿಗೆ ಜೆಸಿಬಿ ಸಮೇತ ಬಿಡಿಎ ಅಧಿಕಾರಿಗಳು ಹಾಜರು

ಬೆಂಗಳೂರು: ಬಿಡಿಎ ಸ್ವಾಧೀನ ಪಡಿಸಿಕೊಂಡ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಐಷಾರಾಮಿ ಮನೆ ತೆರವಿಗೆ ಅಧಿಕಾರಿಗಳು ಆಗಮಿಸಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಮನೆ ತೆರವಿಗೆ ಅಧಿಕಾರಿಗಳು ಆಗಮಿಸಿದ್ದು, ಬೆಂಗಳೂರಿನ R.T.ನಗರದ ಹೆಚ್​ಜಿಹೆಚ್​ ಲೇಔಟ್​ನಲ್ಲಿರುವ ಜಾಗದಲ್ಲಿ ಬಿಡಿಎ ಜಾಗದಲ್ಲಿ ಮುನಿರಾಜು ಐಷಾರಾಮಿ ಮನೆ ನಿರ್ಮಿಸಿದ್ದ. ಕೋಟ್ಯಂತರ ರೂ. ಮೌಲ್ಯದ ಜಾಗ ವಶಕ್ಕೆ ಪಡೆಯಲು ಜೆಸಿಬಿ ಸಮೇತ ಬಿಡಿಎ ಅಧಿಕಾರಿಗಳು ಆಗಮಿಸಿದ್ದಾರೆ. ಸ್ಥಳಕ್ಕೆ ಹೆಬ್ಬಾಳ ಕ್ಷೇತ್ರದ ಶಾಸಕ ಭೈರತಿ ಸುರೇಶ್​ ಆಗಮಿಸಿದ್ದು, ಶಾಸಕರ ಮಧ್ಯಪ್ರವೇಶದಿಂದ ತೆರವು ಕಾರ್ಯಾಚರಣೆ ಸ್ಥಗಿತವಾಗಿದೆ.

ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿ: ರೈತ ಸ್ಥಳದಲ್ಲೇ ಸಾವು

ಹಾವೇರಿ: ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು, ರೈತ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಹಾನಗಲ್ ತಾಲೂಕಿನ ಹಿರೇಉಲ್ಲಾಳ ಗ್ರಾಮದಲ್ಲಿ ನಡೆದಿದೆ. ರಾಕೇಶ ಪೂಜಾರ (36) ವರ್ಷ ಮೃತ ರೈತ. ತಮ್ಮ ಜಮೀನಿಗೆ ರೋಟರ್ ಹೊಡೆಯಲು ಹೋಗುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಆಡೂರು ಠಾಣೆ ಪೊಲೀಸರ ಭೇಟಿ, ಪರಿಶೀಲನೆ ಮಾಡಿದ್ದಾರೆ. ಆಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮರಕ್ಕೆ ಬೈಕ್​ ಡಿಕ್ಕಿಯಾಗಿ ಯುವಕ ಯುವತಿ ದುರ್ಮರಣ

ಆನೇಕಲ್: ಯುವತಿ ಹಿಂದೆ ಕೂರಿಸಿ ಅತಿವೇಗದಿಂದ ಬೈಕ್ ಚಲಾವಣೆ ಮಾಡಿದ ಪರಿಣಾಮ ಮರಕ್ಕೆ ಢಿಕ್ಕಿ ಹೊಡೆದು ಯುವಕ ಯುವತಿ ದುರ್ಮರಣ ಹೊಂದಿರುವಂತಹ ಘಟನೆ ಬೆಂಗಳೂರು ಹೊರವಲಯ ಸರ್ಜಾಪುರದಲ್ಲಿ ನಡೆದಿದೆ. ಬೆಳಗಿನ ಜಾವ ಘಟನೆ ಸಂಭವಿಸಿದ್ದು, ಗಗನ್ ದೀಪ್(29), ಯಶಸ್ವಿನಿ (23) ಮೃತ ದುರ್ದೈವಿಗಳು. ಮೃತರಿಬ್ಬರು ಪ್ರೆಸ್ಟೀಜ್ ಕಂಪನಿಯ ಉದ್ಯೋಗಿಗಳು. ರಸ್ತೆ ತಿರುವಿನಲ್ಲಿ ಕಂಟ್ರೋಲ್​ಗೆ ಬಾರದ ಡಕೊಟಿ ಸ್ಪೋರ್ಟ್ ಬೈಕ್, ಮರಕ್ಕೆ ಗುದ್ದಿ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಸರ್ಜಾಪುರ ಪೊಲೀಸರು ಪರಿಶೀಲನೆ ಮಾಡಿದ್ದಾರೆ.

ಇನ್ನಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ