Breathing: ನಿಮ್ಮ ಉಸಿರಾಟ ಕ್ರಿಯೆಯಿಂದಲೇ ದೀರ್ಘಾಯುಷ್ಯ, ಅಲ್ಪಾಯುಷ್ಯ ನಿರ್ಣಯ
Breathing Pattern: ಡಯಟ್, ವರ್ಕೌಟ್ ಹಾಗೂ ನಿಮ್ಮ ಜೀವನಶೈಲಿಯು ನಿಮ್ಮನ್ನು ಹೆಚ್ಚು ವರ್ಷಗಳ ಕಾಲ ಆರೋಗ್ಯದಿಂದಿರಲು ನೆರವಾಗುವುದರ ಜತೆಗೆ ಆಯುಷ್ಯವನ್ನು ಹೆಚ್ಚಿಸುತ್ತದೆ. ಉಸಿರಾಟ ಹೇಗಿರಬೇಕು ಎಂದು ನಮಗೆ ಯಾರೂ ಕಲಿಸಿ ಕೊಡುವುದಿಲ್ಲ.
ಡಯಟ್, ವರ್ಕೌಟ್ ಹಾಗೂ ನಿಮ್ಮ ಜೀವನಶೈಲಿಯು ನಿಮ್ಮನ್ನು ಹೆಚ್ಚು ವರ್ಷಗಳ ಕಾಲ ಆರೋಗ್ಯದಿಂದಿರಲು ನೆರವಾಗುವುದರ ಜತೆಗೆ ಆಯುಷ್ಯವನ್ನು ಹೆಚ್ಚಿಸುತ್ತದೆ. ಉಸಿರಾಟ ಹೇಗಿರಬೇಕು ಎಂದು ನಮಗೆ ಯಾರೂ ಕಲಿಸಿ ಕೊಡುವುದಿಲ್ಲ. ಇದು ನಮ್ಮ ದೇಹದ ಅನೈಚ್ಛಿಕ ಕಾರ್ಯವಾಗಿದ್ದು ಅಗತ್ಯಕ್ಕೆ ತಕ್ಕಂತೆ ತೀವ್ರಗೊಳ್ಳುವುದು ನಿಧಾನಗೊಳ್ಳುವುದು ಆಗುತ್ತಿರುತ್ತದೆ.
ಇತ್ತೀಚಿನವರೆಗೂ, ಅಂದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗವಾಗುವವರೆಗೂ ಉಸಿರಾಟದ ಮಹತ್ವದ ಬಗ್ಗೆ ಹೆಚ್ಚು ಚರ್ಚೆಗಳಾಗುತ್ತಿರಲಿಲ್ಲ. ಈ ರೋಗ ನೈರ್ಮಲ್ಯದ ಬಗ್ಗೆ ಪಾಠ ಕಲಿಸಿದಂತೆಯೇ ಉಸಿರಾಟದ ಮಹತ್ವದ ಬಗ್ಗೆಯೂ ಕಲಿಸಿದೆ.
ಆರೋಗ್ಯ ವೃದ್ದಿಗಾಗಿ ನಡೆಸುವ ಯಾವುದೇ ಕ್ರಿಯೆ ಅತಿಯಾದರೆ ವಿಷವೇ ಹೌದು. ಇದು ಆಹಾರ ಸೇವನೆಯೇ ಆಗಬಹುದು, ವ್ಯಾಯಾಮ ಅಥವಾ ನಿದ್ದೆಯೂ ಆಗಬಹುದು. ಅತಿಯಾಗಬಾರದು.
ಇದೇ ಮಾತು ಉಸಿರಾಟಕ್ಕೂ ಅನ್ವಯಿಸುತ್ತದೆ. ಅಗತ್ಯಕ್ಕೂ ಹೆಚ್ಚಿನ ಉಸಿರಾಟವನ್ನು (ಹೈಪರ್ ವೆಂಟಿಲೇಶನ್ ) ವೈದ್ಯರು ಮಾರಕ ಎಂದು ಗುರುತಿಸಿದ್ದು ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ.
ಕೆಲವು ಅಧ್ಯಯನಗಳ ಪ್ರಕಾರ ಕಾಫಿ ಕುಡಿಯುವವರು ಬೇಗ ಸಾವನ್ನಪ್ಪುವುದಿಲ್ಲ ಆಯುಷ್ಯ ಹೆಚ್ಚು ಎಂದು ಹೇಳಿದೆ.
ಅಸಹಜ ಉಸಿರಾಟ ಪ್ರಕ್ರಿಯೆ: ಧೂಮಪಾನಿಗಳು ಸಾಮಾನ್ಯವಾಗಿ ಅಸಹಜ ಉಸಿರಾಟ ಅಥವಾ ಉಸಿರಾಟ ತೊಂದರೆಯನ್ನು ಅನುಭವಿಸುತ್ತಾರೆ. ಧೂಮಪಾನಿಗಳಿಗೆ ಕಫ, ಉಬ್ಬಸ ರೀತಿಯ ಸಮಸ್ಯೆಗಳು ಕಾಡಲಿವೆ. ಇಂತವರ ಆಯುಷ್ಯ ಸಾಮಾನ್ಯವಾಗಿ ಕಡಿಮೆ ಇರುತ್ತದೆ.
ಹೈಪರ್ ವೆಂಟಿಲೇಶನ್ : ಉಸಿರಾಟದ ಮೂಲಕ ಗಾಳಿಯನ್ನು ನಮ್ಮ ಶ್ವಾಸಕೋಶಗಳು ಮೂಗಿನ ಹೊಳ್ಳೆಗಳ ಮೂಲಕ ಒಳಗೆಳೆದುಕೊಂಡು ಇದರಲ್ಲಿರುವ ಆಮ್ಲಜನಕವನ್ನು ಹೀರಿ ಉಳಿದ ಗಾಳಿ ಹಾಗೂ ರಕ್ತ ಕೊಂಡು ತಂದಿದ್ದ ಇಂಗಾಲದ ಡೈ ಆಕ್ಸೈಡ್ ಅನಿಲವನ್ನು ಹೊರಬಿಡುತ್ತದೆ. ಸಾಮಾನ್ಯ ಚಟುವಟಿಕೆಗಳಿಗೆ ತೀವ್ರಗತಿಯ ಉಸಿರಾಟದ ಅವಶ್ಯಕತೆ ಇಲ್ಲ. ಆದರೆ, ಈ ಅವಶ್ಯಕತೆ ಇರದೇ ಇದ್ದರೂ ತೀರಾ ಆಳವಾಗಿ ಉಸಿರಾಡುತ್ತಿದ್ದರೆ, ಇದರ ಗತಿಯೂ ತೀವ್ರವೇ ಇದ್ದರೆ ಇದನ್ನು ಹೈಪರ್ ವೆಂಟಿಲೇಶನ್ ಎಂದು ಕರೆಯುತ್ತಾರೆ.
ಮೂಗಿನ ಉಸಿರಾಟದ ಮಹತ್ವ: ಶ್ವಾಸಕೋಶಗಳ ಸಾಮರ್ಥ್ಯ ಹೆಚ್ಚಿಸಲು ಮಾತ್ರವಲ್ಲ, ದೇಹದಲ್ಲಿ ಇಂಗಾಲದ ಡೈ ಆಕ್ಸೈಡ್ ಮಟ್ಟಗಳನ್ನು ಆರೋಗ್ಯಕರ ಮಿತಿಗಳ ಒಳಗೇ ಇರಿಸಲೂ ಮೂಗಿನ ಉಸಿರಾಟ ಅವಶ್ಯವಾಗಿದೆ. ತನ್ಮೂಲಕ ಉಸಿರಾಟದ ಕ್ಷಮತೆ ಅತ್ಯುತ್ತಮಗೊಳ್ಳುತ್ತದೆ.
ವಿಶ್ರಾಂತ ಸ್ಥಿತಿ, ನಿದ್ದೆ ಅಥವಾ ಇತರ ಸಾಮಾನ್ಯ ಸಂದರ್ಭಗಳಲ್ಲಿ ಸದಾ ಮೂಗಿನಿಂದಲೇ ಉಸಿರಾಡಬೇಕು. ವ್ಯಾಯಾಮ ಅಥವಾ ತೀವ್ರಗತಿಯ ಚಟುವಟಿಕೆಯಲ್ಲಿ ಉಸಿರಾಟ ತೀವ್ರಗೊಂಡಾಗಲೂ ಆದಷ್ಟೂ ಮಟ್ಟಿಗೆ ಮೂಗಿನಿಂದಲೇ ಉಸಿರಾಟಬೇಕು. ಮೂಗಿನ ಉಸಿರಾಟದಿಂದ ಆಳವಾಗಿ ಉಸಿರಾಡಲು ಹಾಗೂ ಆಮ್ಲಜನಕ ಪಡೆದುಕೊಳ್ಳುವುದು ಇಂಗಾಲದ ಡೈ ಆಕ್ಸೈಡ್ ಹೊರಬಿಡುವುದು ಈ ಕಾರ್ಯವೂ ಅತ್ಯುತ್ತಮವಾಗಿ ಜರುಗುತ್ತದೆ.
ಬಾಯಿಯ ಉಸಿರಾಟ ಅಪಾಯಕಾರಿಯೂ ಆಗಬಹುದು: ಬಾಯಿಯಿಂದ ಉಸಿರಾಡುವ ಮೂಲಕ ನಿದ್ದೆ ತಡೆ ತಡೆದು ಬರುವುದು, ಸ್ಲೀಪ್ ಅಪ್ನಿಯಾ, ಗೊರಕೆ, ಬಾಯಿ ಒಣಗುವುದು ಹಾಗೂ ಇನ್ನಿತರ ಸಂಬಂಧಿತ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಸ್ಥಿತಿಗಳಲ್ಲಿ ಯಾವುದೊಂದು ಕಾಣಿಸಿಕೊಂಡರೂ ತಕ್ಷಣ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಪ್ರಾರಂಭಿಸಬೇಕು.
ಉಸಿರಾಟದಲ್ಲಿ ನಿಮಿಷಕ್ಕೆ ಹನ್ನೆರಡರಿಂದ ಹದಿನಾರು ಉಸಿರಾಟಗಳು ಸಂಭವಿಸುತ್ತವೆ. ಆದರೆ ಬಾಯಿಯ ಉಸಿರಾಟದಲ್ಲಿ ಇದು ಇನ್ನಷ್ಟು ಹೆಚ್ಚಾಗಬಹುದು. ಅದರಲ್ಲೂ ಅಸ್ತಮಾ ರೋಗಿಗಳು ಹಾಗೂ ಈಗಾಗಲೇ ಇರುವ ಇತರ ಕಾಯಿಲೆಗಳ ವ್ಯಕ್ತಿಗಳಲ್ಲಿ ಈ ಗತಿ ನಿಮಿಷಕ್ಕೆ ಇಪ್ಪತ್ತಕ್ಕೂ ಹೆಚ್ಚುವುದನ್ನು ಗಮನಿಸಬಹುದು.
ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಆಧರಿಸಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ