ಕೊರೊನಾ ಇದ್ರೂ, ರಾಜಧಾನಿಯಲ್ಲಿ ರೀಫಿಲ್ಲಿಂಗ್ ದಂಧೆ ನಡೆಯುತ್ತಲೇ ಇದೆ

|

Updated on: May 20, 2020 | 6:31 PM

ಬೆಂಗಳೂರು: ರಾಜಧಾನಿಯಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಪೊಲೀಸರು ಸಹ ನಗರದಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಆದ್ರೆ ಕೊರೊನಾ ನಡುವೆಯೂ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆಯಲ್ಲಿ ಖದೀಮರು ತೊಡಗಿದ್ದಾರೆ. ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 6 ಆರೋಪಿಗಳನ್ನ ಬಂಧಿಸಿದ್ದಾರೆ. ರಾಜು, ಅಮರ್, ಲಕ್ಷ್ಯಯ್ಯ, ವಿನಯ್, ಪ್ರಕಾಶ್, ತಿಮ್ಮಪ್ಪ ಬಂಧಿತ ಆರೋಪಿಗಳು. ಪೀಣ್ಯಾ, ಕೆಂಗೇರಿ, ಕಾಮಾಕ್ಷಿಪಾಳ್ಯ, ಆರ್.ಆರ್.ನಗರ, ವಿಜಯನಗರ ಕಡೆ ರೇಡ್ ಮಾಡಿ ಒಟ್ಟು 384 ಸಿಲಿಂಡರ್​ಗಳನ್ನು […]

ಕೊರೊನಾ ಇದ್ರೂ, ರಾಜಧಾನಿಯಲ್ಲಿ ರೀಫಿಲ್ಲಿಂಗ್ ದಂಧೆ ನಡೆಯುತ್ತಲೇ ಇದೆ
Follow us on

ಬೆಂಗಳೂರು: ರಾಜಧಾನಿಯಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಹೆಚ್ಚಾಗುತ್ತಲೇ ಇದೆ. ಪೊಲೀಸರು ಸಹ ನಗರದಲ್ಲಿ ಬಿಗಿಯಾದ ಕ್ರಮಗಳನ್ನು ಕೈಗೊಂಡಿದ್ದಾರೆ. ಆದ್ರೆ ಕೊರೊನಾ ನಡುವೆಯೂ ನಗರದಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ದಂಧೆಯಲ್ಲಿ ಖದೀಮರು ತೊಡಗಿದ್ದಾರೆ.

ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡ್ತಿದ್ದ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ 6 ಆರೋಪಿಗಳನ್ನ ಬಂಧಿಸಿದ್ದಾರೆ. ರಾಜು, ಅಮರ್, ಲಕ್ಷ್ಯಯ್ಯ, ವಿನಯ್, ಪ್ರಕಾಶ್, ತಿಮ್ಮಪ್ಪ ಬಂಧಿತ ಆರೋಪಿಗಳು. ಪೀಣ್ಯಾ, ಕೆಂಗೇರಿ, ಕಾಮಾಕ್ಷಿಪಾಳ್ಯ, ಆರ್.ಆರ್.ನಗರ, ವಿಜಯನಗರ ಕಡೆ ರೇಡ್ ಮಾಡಿ ಒಟ್ಟು 384 ಸಿಲಿಂಡರ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಯಾವುದೇ ಸುರಕ್ಷತಾ ಕ್ರಮಗಳನ್ನ ಬಳಸದೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡ್ತಿದ್ದರು. ಸುಮಾರು 3.73 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಠಾಣೆಗಳಲ್ಲಿ 6 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

Published On - 1:44 pm, Wed, 20 May 20