ದಾಖಲೆಗಳಿಲ್ಲದೆ ಅಕ್ರಮವಾಗಿ ಹಣ ಸಾಗಾಟ: 1.14 ಕೋಟಿ ರೂ. ಹಣ ಜಪ್ತಿ, ಓರ್ವ ವ್ಯಕ್ತಿಯ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 22, 2023 | 2:46 PM

ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 1.14 ಕೋಟಿ ರೂ. ಹಣ ಸಮೇತ ಒಂದು ಮೊಬೈಲ್​ ಜಪ್ತಿ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ.

ದಾಖಲೆಗಳಿಲ್ಲದೆ ಅಕ್ರಮವಾಗಿ ಹಣ ಸಾಗಾಟ: 1.14 ಕೋಟಿ ರೂ. ಹಣ ಜಪ್ತಿ, ಓರ್ವ ವ್ಯಕ್ತಿಯ ಬಂಧನ
ಪ್ರಾತಿನಿಧಿಕ ಚಿತ್ರ
Image Credit source: lagatar24.com
Follow us on

ಹುಬ್ಬಳ್ಳಿ: ದಾಖಲೆಗಳಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 1.14 ಕೋಟಿ ರೂ. ಹಣ (Illegal money) ಸಮೇತ ಒಂದು ಮೊಬೈಲ್​ ಜಪ್ತಿ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಪೊಲೀಸ್ ಇನ್ಸ್​ಪೆಕ್ಟರ್ ಎಂ.ಎಸ್.ಹೂಗಾರ ನೇತೃತ್ವದಲ್ಲಿ ಹುಬ್ಬಳ್ಳಿ ಉಪನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ಮಾಡಿ, ಹೊಸ ಬಸ್ ನಿಲ್ದಾಣದಿಂದ ಮಂಗಳೂರಿಗೆ ಹೊರಟಿದ್ದ ಮತ್ತು ಯಾವುದೇ ದಾಖಲೆಗಳಿಲ್ಲದೆ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ. ಉಪನಗರ ಠಾಣೆ ಪೊಲೀಸರ ಕಾರ್ಯಕ್ಕೆ ಆಯುಕ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಆದಾರ್ ಕಾರ್ಡ್ ಮಾಡಿಕೊಡಲು ದುಪ್ಪಟ್ಟು ಹಣ ವಸೂಲಿ

ಹಾಸನ: ಬೇಲೂರಿನ ಅಂಚೆ ಕಛೇರಿಯಲ್ಲಿ ಆದಾರ್ ಕಾರ್ಡ್ ಮಾಡಿಕೊಡುವ ನೆಪದಲ್ಲಿ ಭ್ರಷ್ಟಾಚಾರ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಸಾರ್ವಜನಿಕ ರಿಂದ ಅಕ್ರಮವಾಗಿ ಹಣ ವಸೂಲಿಮಾಡುತ್ತಿದ್ದ ನೌಕರನಿಗೆ ಸ್ಥಳಿಯರು ತರಾಟೆಗೆ ತೆಗದುಕೊಂಡಿದ್ದಾರೆ. ಅಂಚೆ ಇಲಾಖೆಯ ಬೇಲೂರು ಶಾಖೆ ನೌಕರ ಮಿಥುನ್ ವಿರುದ್ದ ಅಕ್ರಮ ಹಣ ವಸೂಲಿ ಆರೋಪ ಮಾಡಲಾಗಿದ್ದು, ಇದನ್ನು ಪ್ರಶ್ನಿಸಿದಾಗ ಮಿಥುನ್ ತಪ್ಪೊಪ್ಪಿಗೆ ಕೇಳಿಕೊಂಡಿದ್ದಾನೆ. ಫೋನ್ ನಂಬರ್ ಅಪ್ಡೇಟ್ ಮಾಡಲು 50.ರೂ ಬದಲಾಗಿ 120 ರೂ. ವಸೂಲಿ ಮಾಡುತ್ತಿದ್ದು, ಉಚಿತ ಆದಾರ್ ಕಾರ್ಡ್ ಮಾಡಿಕೊಡಬೇಕಿದ್ದರು ಅದಕ್ಕೆ ಅನಧಿಕೃತವಾಗಿ 200 ರೂ. ವಸೂಲಿ ಮಾಡಿಕೊಳ್ಳುತ್ತಿದ್ದ.

ಇದನ್ನೂ ಓದಿ: Ramanagara News: ನಾಪತ್ತೆಯಾಗಿದ್ದ ಅಪ್ರಾಪ್ತನ ಪತ್ತೆಗೆ BEOS ಟೆಕ್ನಾಲಜಿ ಬಳಕೆ; ಕರ್ನಾಟಕದಲ್ಲಿ ಇದೇ ಮೊದಲು

ಬಯೊಮೆಟ್ರಿಕ್ ಅಪ್ಡೇಟ್​ಗಾಗಿ 100 ಬದಲಾಗಿ 200 ರೂ. ವಸೂಲಿ ಮಾಡುತ್ತಿದ್ದ. ಆದರೆ ಇದಕ್ಕೆ ಯಾವುದಕ್ಕೂ ರಶೀದಿ ನೀಡದೆ ಜನರನ್ನು ವಂಚಿಸುತ್ತಿದ್ದನು. ಈ ಬಗ್ಗೆ ಅದಿಕಾರಿಗೆ ಮುತ್ತಿಗೆ ಹಾಕಿದ ಕರವೇ ನಾರಾಯಣಗೌಡ ಬಣದ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿದ್ದು, ಈ ವೇಳೆ ಮಿಥುನ್ ತಪ್ಪೊಪ್ಪಿಕೊಂಡಿದ್ದಾನೆ. ಕಳೆದ ಹಲವು ತಿಂಗಳಿನಿಂದ ಇದೇ ರೀತಿ ಹಣ ವಸೂಲಿ ಆರೋಪ ಮಾಡುತ್ತಿರುವ ಆರೋಪ ಈತನ ಮೇಲಿದ್ದು, ಸೂಕ್ತ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ದುರ್ಜನರ ಸಂಗ ಮಾಡಿ ಮಾಡದ ತಪ್ಪಿಗೆ ಜೀವ ತೆತ್ತ ಮೈಸೂರಿನ ಯುವಕ, ಸಜ್ಜನರ ಸಂಗ ಹೆಜ್ಜೇನ ಸವಿದಂತೆ ಎಂದು ಹೇಳಿದ್ದು ಇದಕ್ಕೆ

ಚಿರತೆ ದಾಳಿಗೆ ಬಾಲಕ ಸಾವು

ಮೈಸೂರು: ಹೊರಳಹಳ್ಳಿಯಲ್ಲಿ ಚಿರತೆ ದಾಳಿಗೆ ಬಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಹೊರಳಹಳ್ಳಿ ಪಕ್ಕದಲ್ಲಿರುವ ಜಮೀನಿನಲ್ಲಿ ನಡೆದಿದೆ. ಜಯಂತ್​(11) ಮೃತ ಬಾಲಕ. ಶ್ರೀಮಂತರ ಆಸ್ತಿ ಸಂಪಾದನೆ ಹುಚ್ಚು ಬಾಲಕ ಸಾವಿಗೆ ಕಾರಣವಾಯ್ತಾ ಎನ್ನುವ ಮಾತುಗಳು ಕೇಳಿಬರುತ್ತಿವೆ. ಶ್ರೀಮಂತ ವ್ಯಕ್ತಿಗೆ ಸೇರಿದ ಜಮೀನು ಚಿರತೆಗಳ ಅವಾಸಸ್ಥಾನವಾಯ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸುಮಾರು 40 ಎಕರೆ ಜಮೀನು ಖರೀದಿಸಿ ವ್ಯಕ್ತಿ ಓರ್ವರು ಬೀಡುಬಿಟ್ಟಿದ್ದಾರೆ. ಖಾಲಿ ಬಿಟ್ಟ ಪರಿಣಾಮ ಜಮೀನು ಕುರುಚುಲು ಕಾಡಿನಂತ್ತಾಗಿದೆ. ಸದ್ಯ ಈ ಜಮೀನು ಕಾಡು ಪ್ರಾಣಿಗಳ ಆವಾಸಸ್ಥಾನವಾಗಿ ಬದಲಾಗಿದೆ. ಇದೇ ಜಾಗದಲ್ಲಿ ಬಾಲಕ ಜಯಂತ್​ ಮೃತದೇಹ ಪತ್ತೆ ಆಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.