ಬೆಂಗಳೂರು, ಜೂ.05: ಲಿವಿಂಗ್ ಟುಗೆದರ್ ರಿಲೇಶನ್ಶಿಪ್(Living Together relationship)ನಲ್ಲಿದ್ದ ಜೋಡಿ ಅನುಮಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಬನ್ನೇರುಘಟ್ಟ(Bannerughatta)ದ ಜನತಾ ಕಾಲೋನಿಯಲ್ಲಿ ನಡೆದಿದೆ. ವಿಷಸೇವಿಸಿ ಪ್ರಭು(38) ಹಾಗೂ ಲಕ್ಕಮ್ಮ(30) ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಪ್ರಭು ಚಾಲಕನಾಗಿ ಕೆಲಸ ಮಾಡುತ್ತಿದ್ದರೆ, ಲಕ್ಕಮ್ಮ ಗಾರ್ಮೆಂಟ್ಸ್ ಕಂಪನಿಗೆ ಕೆಲಸ ಹೋಗುತ್ತಿದ್ದರು ಎನ್ನಲಾಗಿದೆ.
ಇನ್ನು ಕಳೆದ ಕೆಲ ವರ್ಷಗಳ ಹಿಂದೆ ಒಬ್ಬರಿಗೊಬ್ಬರ ಪರಿಚಯವಾಗಿತ್ತು. ಈ ಹಿನ್ನಲೆ ಇಬ್ಬರು ಒಂದೇ ಮನೆಯಲ್ಲಿ ಲಿವಿಂಗ್ ಟುಗೆದರ್ ರಿಲೇಶನ್ಶಿಪ್ನಲ್ಲಿದ್ದರು. ಇದೀಗ ಈ ಜೋಡಿ ಕಳೆದ ಮೂರು ದಿನಗಳ ಹಿಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಅವರು ವಾಸವಿದ್ದ ಮನೆಯಲ್ಲಿ ಕೆಟ್ಟ ದುರ್ವಾಸನೆ ಬರುವುದಕ್ಕೆ ಶುರುವಾಗಿದೆ. ಇದನ್ನ ಗಮನಿಸಿದ ಸ್ಥಳೀಯರು, ಪೊಲೀಸರಿಗೆ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಹೆಚ್ಚಿದ ಅಪಘಾತಗಳ ಸಂಖ್ಯೆ; ಮೂರೇ ವರ್ಷದಲ್ಲಿ 262 ಸಾವು
ಇನ್ನು ಇವರು ವಿಶ್ವನಾಥ್ ಎಂಬುವರ ಮನೆಯಲ್ಲಿ ಬಾಡಿಗೆಗಿದ್ದರು. ಮೃತ ಪಟ್ಟು ಮೂರ್ನಾಲ್ಕು ದಿನಗಳಾಗಿದ್ದರಿಂದ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ಶುರು ಮಾಡಿದ್ದಾರೆ. ಇತ್ತ
ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ, ಪ್ರಕರಣ ದಾಖಲಿಸಿದ್ದಾರೆ. ತನಿಖೆಯ ಬಳಿಕವೇ ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಬೆಳಕಿಗೆ ಬರಲಿದೆ.
ಹಾಸನ: ಜಿಲ್ಲೆಯ ಅರಕಲಗೂಡು ತಾಲೂಕಿನ ದೊಡ್ಡಮಗ್ಗೆ ಬಳಿ ಸಿಡಿಲು ಬಡಿದು ಇಬ್ಬರು ಕೂಲಿ ಕಾರ್ಮಿಕ ಮಹಿಳೆಯರ ಮೃತಪಟ್ಟಿದ್ದಾರೆ. ಕೂಲಿ ಕಾರ್ಮಿಕರಾದ ಮುತ್ತಮ್ಮ(70), ಪುಟ್ಟಮ್ಮ(63) ಸಾವು. ಇಂದು ಮಧ್ಯಾಹ್ನ ಜೋಳ ಬಿತ್ತನೆ ಮಾಡುತ್ತಿದ್ದ ವೇಳೆ ಮಳೆ ಬಂದಿದೆ. ಈ ಹಿನ್ನಲೆ ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಗಾಯಾಳುಗಳನ್ನು ಅರಕಲಗೂಡು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮತ್ತೋರ್ವ ಮಹಿಳೆಯ ಸ್ಥಿತಿ ಗಂಭೀರವಾಗಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಎ.ಮಂಜು, ಯೋಗಕ್ಷೇಮ ವಿಚಾರಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:42 pm, Wed, 5 June 24