Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ಸೌದೆ ಆರಿಸ್ತಿದ್ದ ಕಾರ್ಮಿಕ‌ ರೈಲಿಗೆ ಸಿಲುಕಿ ಸಾವು

ಶಿವಮೊಗ್ಗ(Shivamogga)ದ ವಿದ್ಯಾನಗರದ ಬಳಿಯಿರುವ ರೈಲ್ವೆ ಹಳಿ ಪಕ್ಕದಲ್ಲಿ ಸೌದೆ ಆರಿಸುತ್ತಿದ್ದ ಕಾರ್ಮಿಕನೋರ್ವ ರೈಲು‌ ಹರಿದು ಕಾರ್ಮಿಕ‌ನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಈ ಕುರಿತು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗದಲ್ಲಿ ಸೌದೆ ಆರಿಸ್ತಿದ್ದ ಕಾರ್ಮಿಕ‌ ರೈಲಿಗೆ ಸಿಲುಕಿ ಸಾವು
ರೈಲಿಗೆ ಸಿಲುಕಿ ಮೃತಪಟ್ಟ ಕಾರ್ಮಿಕ
Follow us
Basavaraj Yaraganavi
| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 02, 2024 | 3:16 PM

ಶಿವಮೊಗ್ಗ, ಜೂ.02: ರೈಲು‌ ಹರಿದು ಕಾರ್ಮಿಕ‌ನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗ(Shivamogga)ದ ವಿದ್ಯಾನಗರದ ಬಳಿ ನಡೆದಿದೆ. ರುದ್ರಪ್ಪ (68) ಮೃತ ದುರ್ದೈವಿ. ಇತ ರೈಲ್ವೆ ಹಳಿ(Railway track) ಬಳಿ ಸೌದೆ ಆರಿಸುತ್ತಿದ್ದ ವೇಳೆ ಮೈಸೂರು ತಾಳಗುಪ್ಪ ರೈಲಿಗೆ ಸಿಲುಕಿ ಈ ಅವಘಡ ನಡೆದಿದೆ. ಇನ್ನು ರುದ್ರಪ್ಪ,  ಸ್ವಲ್ಪ ಕಿವುಡು ಹಾಗೂ ಕಣ್ಣು ಮಂಜಿನಿಂದ ಬಳಲುತ್ತಿದ್ದನಂತೆ. ಹೀಗಾಗಿ ರೈಲು ಬಂದ ಶಬ್ದ ಕೇಳಿಸದೇ ದುರ್ಘಟನೆ ಸಂಭವಿಸಿದ್ದು, ಈ ಕುರಿತು ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಕೊಡಗು: ಸೋಮವಾರಪೇಟೆಯ ನಗರದ ಎ.ಮಂಜು ಲೇಔಟ್​ನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ. ಮೃತನನ್ನು ತಾಲೂಕಿ ಹಾಗಲ್ಲದೆ ಗ್ರಾಮದ‌ ನಿವಾಸಿ ಉಲ್ಲಾಸ್(27) ಎಂದು ಗುರುತಿಸಲಾಗಿದೆ. ಇತ ವಿದ್ಯುತ್ ಕಂಬದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಶುರು ಮಾಡಿದ್ದಾರೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಚಲಿಸುವ ರೈಲಿಗೆ ಸಿಲುಕಿ 80ಕ್ಕೂ ಹೆಚ್ಚು ಕುರಿಗಳು ಸ್ಥಳದಲ್ಲಿ ಸಾವು

ಚಿತ್ರದುರ್ಗದ ಮನೆ ಆವರಣದಲ್ಲೇ ಗಾಂಜಾ ಬೆಳೆ ಪತ್ತೆ

ಚಿತ್ರದುರ್ಗ: ಕರುವಿನ ಕಟ್ಟೆ ವೃತ್ತದ ಬಳಿಯ ಮನೆಯೊಂದರ ಆವರಣದಲ್ಲಿಯೇ ಗಾಂಜಾ ಬೆಳೆದಿದ್ದ ಆರೋಪದ ಮೇಲೆ ಚಿತ್ರದುರ್ಗ ಸಿಇಎನ್ ಠಾಣೆ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಗಾಂಜಾ ಬೆಳೆ ಪತ್ತೆಯಾಗಿದ್ದು, ಆರೋಪಿ ಕರಿಬಸಪ್ಪ(55) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಿಇಎನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ