ಬೆಳಗಾವಿ, ಮೇ.16: ಸ್ಕ್ರೂಡ್ರೈವರ್ನಿಂದ ಚುಚ್ಚಿ ಯುವಕನೋರ್ವನನ್ನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಮಹಾಂತೇಶನಗರದ ಬ್ರಿಡ್ಜ್ ಬಳಿ ಇಂದು(ಮೇ.16) ಮಧ್ಯಾಹ್ನ ನಡೆದಿದೆ. ಬೆಳಗಾವಿ(Belagavi)ಯ ಗಾಂಧಿನಗರ ನಿವಾಸಿ ಇಬ್ರಾಹಿಂ ಗೌಸ್(22) ಕೊಲೆಯಾದ ಯುವಕ. ಪ್ರೇಯಸಿ ಜೊತೆ ಬೈಕ್ನಲ್ಲಿ ಹೊರಟಿದ್ದ ಆಕೆಯ ಸಹೋದರನನ್ನ ಅಡ್ಡಗಟ್ಟಿದ ಆರೋಪಿ ಮುಜಾಮಿಲ್ ಸತ್ತಿಗೇರಿ, ಸ್ಕ್ರೂಡ್ರೈವರ್ನಿಂದ ಇರಿದು ಪರಾರಿಯಾಗಿದ್ದ. ಗಾಯಾಳು ಗೌಸ್ನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದಾವಣಗೆರೆ: ತಾಲೂಕಿನ ಓಬಜ್ಜಿಹಳ್ಳಿ ಬಳಿ ಚಾಕುವಿನಿಂದ ಇರಿದು ಯುವಕನನ್ನ ಬರ್ಬರವಾಗಿ ಹತ್ತೆ ಮಾಡಲಾಗಿದೆ. ದಾವಣಗೆರೆಯ ಬೂದಾಳ್ ರಸ್ತೆಯ ನಿವಾಸಿ ಸುದೀಪ್(25) ಮೃತ ರ್ದುದೈವಿ. ಇನ್ನು ಮೃತ ಸುದೀಪ್, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಸ್ಥಳಕ್ಕೆ ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ರಾತ್ರಿ ವೇಳೆ ಗಲಾಟೆಯಾಗಿ ಕೊಲೆಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ದಾವಣಗೆರೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ:ಹುಬ್ಬಳ್ಳಿ: ಅಂಜಲಿ ಕೊಲೆ ಮಾಡಿ ಹಂತಕ ಪರಾರಿಯಾಗಿದ್ದೆಲ್ಲಿಗೆ? ಮಹತ್ವದ ಸುಳಿವು ಲಭ್ಯ
ವಿಜಯನಗರ: ಕೂಡ್ಲಿಗಿ ತಾಲೂಕಿನ ಅಮಲಾಪುರ ಬಳಿ ಹೆದ್ದಾರಿಯಲ್ಲಿ ಲಾರಿಯೊಂದು ಡಿವೈಡರ್‌ಗೆ ಗುದ್ದಿ ಪಲ್ಟಿಯಾಗಿ ಹೊತ್ತಿಉರಿದ ಘಟನೆ ನಡೆದಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಟೈರ್ ಸ್ಪೋಟದಿಂದ ಲಾರಿಗೆ ಬೆಂಕಿ ತಗುಲಿದ ಶಂಕೆ ವ್ಯಕ್ತವಾಗಿದೆ. ಇನ್ನು ಹೆದ್ದಾರಿಯಲ್ಲಿ ಲಾರಿ ಅಡ್ಡಲಾಗಿ ಬಿದ್ದ ಹಿನ್ನೆಲೆ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಾನಾಹೊಸಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:32 pm, Thu, 16 May 24