Stale food at KSCA: ಆರ್​​ಸಿಬಿ ಪಂದ್ಯದ ವೇಳೆ ಹಳಸಿದ ಆಹಾರ ಸರಬರಾಜು – ಕೆಎಸ್‌ಸಿಎ ವಿರುದ್ಧ ಎಫ್‌ಐಆರ್ ದಾಖಲು

FIR against KSCA: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಪಂದ್ಯ ನೋಡಲು ಹೋಗಿದ್ದ 23 ವರ್ಷದ ಯುವಕ ಚೈತನ್ಯ ಎಂಬುವರು ತಮಗೆ ನೀಡಲಾದ ಆಹಾರ ಹಳಸಿತ್ತು ಎಂದು ದೂರು ದಾಖಲಿಸಿದ್ದಾರೆ.

Stale food at KSCA:  ಆರ್​​ಸಿಬಿ ಪಂದ್ಯದ ವೇಳೆ ಹಳಸಿದ ಆಹಾರ ಸರಬರಾಜು - ಕೆಎಸ್‌ಸಿಎ ವಿರುದ್ಧ ಎಫ್‌ಐಆರ್ ದಾಖಲು
ಆರ್​​ಸಿಬಿ ಪಂದ್ಯದ ವೇಳೆ ಹಳಸಿದ ಆಹಾರ ಸರಬರಾಜು: ಎಫ್‌ಐಆರ್ ದಾಖಲು
Follow us
|

Updated on:May 16, 2024 | 5:00 PM

ಕಳೆದ ಭಾನುವಾರ ಮೇ 12 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಟಿ20 ಕ್ರಿಕೆಟ್ ಪಂದ್ಯದ ವೇಳೆ ಪ್ರೇಕ್ಷಕರಿಗೆ ಹಳಸಿದ ಆಹಾರವನ್ನು ಬಡಿಸಿದ ಆರೋಪದ ಮೇಲೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಡಳಿತ ಮಂಡಳಿ ( Karnataka State Cricket Association -KSCA Management) ಮತ್ತು ಕ್ಯಾಂಟೀನ್ ಮ್ಯಾನೇಜರ್ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಐಪಿಎಲ್ ಪಂದ್ಯ (RCB vs Delhi Capitals IPL match) ನೋಡಲು ಹೋಗಿದ್ದ 23 ವರ್ಷದ ಯುವಕ ಚೈತನ್ಯ ಎಂಬುವರು ತಮಗೆ ನೀಡಲಾದ ಆಹಾರ ಹಳಸಿತ್ತು ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ (Cubbon Park police station) ದೂರು ದಾಖಲಿಸಿದ್ದಾರೆ.

ಕತಾರ್ ಏರ್‌ವೇಸ್ ಫ್ಯಾನ್ಸ್ ಟೆರೇಸ್ ಸ್ಟ್ಯಾಂಡ್‌ನಿಂದ ತನ್ನ ಸ್ನೇಹಿತ ಗೌತಮ್ ಅವರೊಂದಿಗೆ ಕ್ರೀಡಾಂಗಣದಲ್ಲಿ ಪಂದ್ಯವನ್ನು ವೀಕ್ಷಿಸಿದ್ದ 23 ವರ್ಷದ ಚೈತನ್ಯ ಅವರು ದೂರು ದಾಖಲಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಪಂದ್ಯದ ವೇಳೆ ಚೈತನ್ಯ ಅವರು ಸ್ಟ್ಯಾಂಡ್‌ ಸಮೀಪದಲ್ಲಿದ್ದ ಕ್ಯಾಂಟೀನ್‌ನಿಂದ ಆಹಾರ ಸೇವಿಸಿದ್ದಾರೆ. ಘೀ ರೈಸ್​​, ಇಡ್ಲಿ, ಚನ್ನಾ ಮಸಾಲ, ಕಟ್ಲೆಟ್, ರಾಯ್ತಾ, ಒಣ ಜಾಮೂನ್ ತಿಂದರು. ತಿಂದ ಸ್ವಲ್ಪ ಸಮಯದ ನಂತರ ಚೈತನ್ಯಗೆ ಹೊಟ್ಟೆನೋವು ಕಾಣಿಸಿಕೊಂಡಿತು.

Also Read: RCB vs CSK​ ಪಂದ್ಯ ರದ್ದತಿ ನಿರ್ಧರಿಸುವ ನಿಯಮಗಳಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ

ನಂತರ ಚೈತನ್ಯ ಕುಳಿತಲ್ಲೇ ಕುಸಿದು ಬಿದ್ದಿದ್ದಾರೆ. ಕ್ರೀಡಾಂಗಣದ ಸಿಬ್ಬಂದಿಯ ನೆರವಿನೊಂದಿಗೆ ಕ್ರೀಡಾಂಗಣದ ಹೊರಗೆ ಆಂಬುಲೆನ್ಸ್‌ನಲ್ಲಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು.

ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ವೈದ್ಯರು ಚೈತನ್ಯ ಅವರನ್ನು ಪರೀಕ್ಷಿಸಿ ಫುಡ್ ಪಾಯ್ಸನಿಂಗ್ ನಿಂದ ಬಳಲುತ್ತಿರುವುದನ್ನು ದೃಢಪಟ್ಟಿದ್ದಾರೆ. ಚೈತನ್ಯ ಅವರ ಆರೋಗ್ಯ ಹದಗೆಡಲು ಕ್ಯಾಂಟೀನ್‌ನಲ್ಲಿ ನೀಡಲಾದ ಆಹಾರ ಕಾರಣವಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: IPL 2024: RCB ಗೆಲ್ಲಲ್ಲ, ಪ್ಲೇಆಫ್​ ಪ್ರವೇಶಿಸಲ್ಲ ಎಂದ ಐವರು ಮಾಜಿ ಕ್ರಿಕೆಟಿಗರು

Published On - 4:47 pm, Thu, 16 May 24

Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Daily Devotional: ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ದೇವಿ ಆರಾಧನೆ ಮಹತ್ವ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ