ಚಿಕ್ಕಬಳ್ಳಾಪುರ, ಆ.21: ಚಿಂತಾಮಣಿ(chintamani)ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ 65 ವರ್ಷದ ವೃದ್ದೆ ರೋಗಿಯ ಮೇಲೆ 24 ವರ್ಷದ ಯುವಕ ಅತ್ಯಾಚಾರ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಚಿಕಿತ್ಸೆಗೆ ಬಂದು ಆಸ್ಪತ್ರೆಯ ಆಕ್ಸಿಜನ್ ಪ್ಲಾಂಟ್ ಬಳಿ ಇದ್ದ ವೃದ್ದೆ ಮೇಲೆ ಚಿಕಿತ್ಸೆಗೆ ಬಂದಿದ್ದ 24 ವರ್ಷದ ಯುವಕನಿಂದ ಅಮಾನವೀಯ ಘಟನೆ ನಡೆದಿದೆ. ಈ ಆರೋಪಿಯನ್ನು ಚಿಂತಾಮಣಿ ನಗರದ ಹೈದರಾಲಿ ನಗರದ ಇರ್ಪನ್ ಎಂದು ಗುರುತಿಸಲಾಗಿದೆ. ಇನ್ನು ಅಸ್ವಸ್ಥ ವೃದ್ದೆಗೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂತೋಷ ಕುಮಾರ್ ಅವರು ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಚಿಕ್ಕಬಳ್ಳಾಪುರ: ವಿಚ್ಚೇಧನ ಪಡೆಯದೆ ಎರಡನೇ ಮದುವೆಯಾಗುತ್ತಿರುವ ಹಿನ್ನಲೆ ಮೊದಲನೇ ಹೆಂಡತಿ ರಶ್ಮಿ ಹಾಗೂ ಅವರ ಅಕ್ಕ ರೋಸಿ ಎಂಬಾಕೆ ಮದುವೆ ಮನೆಗೆ ನುಗ್ಗಿ ಗಲಾಟೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ನಗರದ ಕ್ರೈಸ್ಟ್ ಚರ್ಚ್ನಲ್ಲಿ ನಡೆದಿದೆ. ವಿಚ್ಚೇದನ ಪಡೆಯದೇ ಚಿಕ್ಕಬಳ್ಳಾಪುರ ನಗರದ ನೋಹನ್ ಕಾಂತ್ ಎಂಬಾತ ಮತ್ತೋರ್ವ ಯುವತಿಯೊಂದಿಗೆ ಚರ್ಚ್ನಲ್ಲಿ ವಿವಾಹವಾಗುತ್ತಿದ್ದ ಆರೋಪ ಕೇಳಿಬಂದಿದೆ. ಆದರೆ, ನಾನು ವಿಚ್ಚೇದನ ಪಡೆದು ಎರಡನೇ ಮದುವೆಯಾಗುತ್ತಿರುವುದಾಗಿ ಗಂಡ ನೋಹನ್ ಕಾಂತ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ:100 ವರ್ಷದ ವೃದ್ಧೆ ಮೇಲೆ ಅತ್ಯಾಚಾರ ಯತ್ನ, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ವ್ಯಕ್ತಿ ಖುಲಾಸೆ
ಮದುವೆ ಮನೆಯಲ್ಲಿ ಪರಸ್ಪರರ ನಡುವೆ ಜೋರು ವಾಗ್ವಾದ ನಡೆದಿದ್ದು, ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಸಂಬಂಧಿಕರು ತಲುಪಿದ್ದರು. ಬೆಂಗಳೂರು ಮೂಲದ ನಿವಾಸಿ ರಶ್ಮಿವೊಂದಿಗೆ 2018 ರಲ್ಲಿ ನೋಹನ್ ಕಾಂತ್ ವಿವಾಹವಾಗಿದ್ದ ಎನ್ನಲಾಗಿದೆ. ಇನ್ನು ಸ್ಥಳಕ್ಕೆ ಚಿಕ್ಕಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಎರಡು ಕಡೆಯವರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ರಶ್ಮಿ ಹಾಗೂ ರೋಸಿ ಯನ್ನು ಪೊಲೀಸರು ಠಾಣೆಗೆ ಕರೆದೊಯ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ