ಜೈನ ಮುನಿ ನಂದಿ ಕಾಮಕುಮಾರ ಹತ್ಯೆ ಪ್ರಕರಣ: ಸಿಐಡಿ ಸಲ್ಲಿಸಿದ್ದ ಚಾರ್ಜ್ ಶೀಟ್​ನಲ್ಲಿ ಸ್ಫೋಟಕ ವಿಚಾರ ಬಯಲಿಗೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಅವರನ್ನು ಜುಲೈ 5 ರಂದು ಹತ್ಯೆ ಮಾಡಿ ಮೃತದೇಹವನ್ನು ತುಂಡಗಳನ್ನು ಮಾಡಿ ಬೋರ್​​ವೆಲ್​ಗೆ ಹಾಕಲಾಗಿತ್ತು. ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಸಿಐಡಿ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದೆ.

ಜೈನ ಮುನಿ ನಂದಿ ಕಾಮಕುಮಾರ ಹತ್ಯೆ ಪ್ರಕರಣ: ಸಿಐಡಿ ಸಲ್ಲಿಸಿದ್ದ ಚಾರ್ಜ್ ಶೀಟ್​ನಲ್ಲಿ ಸ್ಫೋಟಕ ವಿಚಾರ ಬಯಲಿಗೆ
ಜೈನ ಮುನಿ ನಂದಿ ಕಾಮಕುಮಾರ ಹತ್ಯೆ ಪ್ರಕರಣದ ಆರೋಪಿಗಳ ವಿರುದ್ಧ ಚಾರ್ಜ್​ಶೀಟ್ ಸಲ್ಲಿಸಿದ ಸಿಐಡಿ
Updated By: Rakesh Nayak Manchi

Updated on: Dec 07, 2023 | 1:20 PM

ಬೆಂಗಳೂರು, ಡಿ.7: ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿಪರ್ವತ ಆಶ್ರಮದ ಜೈನಮುನಿಗಳಾದ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ (Jain Muni Nandi Kamakumar) ಬರ್ಬರ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಆರೋಪಿಗಳ ವಿರುದ್ಧ ಬೆಳಗಾವಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್ ಸಲ್ಲಿಸಿದ್ದಾರೆ. 500 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್​ನಲ್ಲಿ ಮತ್ತೊಂದು ಸ್ಫೋಟಕ ವಿಚಾರ ಬಯಲಿಗೆ ಬಂದಿದೆ.

ಹತ್ಯೆಗೆ ಹಣಕಾಸಿನ ವಿಚಾರ ಮಾತ್ರವಲ್ಲ, ಬೈಗುಳವೂ ಕಾರಣ ಎನ್ನುವ ವಿಚಾರ ಸಿಬಿಐ ತನಿಖೆ ವೇಳೆ ಹೊರಬಿದ್ದಿದೆ. ಪ್ರಕರಣದ ಸಂಪೂರ್ಣ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು, ಆರೋಪಿಗಳಾದ ನಾರಾಯಣ ಮಾಳಿ ಮತ್ತು ಹುಸೇನ್‌ ಡಾಲಾಯತ್ ವಿರು್ಧ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಬೆಳಗಾವಿಯ ನ್ಯಾಯಾಲಯಕ್ಕೆ ಬರೋಬ್ಬರಿ 500 ಕ್ಕೂ ಹೆಚ್ಚು ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಬಳಿ ಟಿಪ್ಪರ್ ಗೆ ಢಿಕ್ಕಿ ಹೊಡೆದು ಹೊತ್ತಿಯುರಿದ ಕಾರು, ಇಬ್ಬರು ಸಜೀವ ದಹನ ಇಬ್ಬರಿಗೆ ಗಂಭೀರ ಸುಟ್ಟಗಾಯಗಳು

ಸಿಐಡಿ ಚಾರ್ಜ್​ಶೀಟ್​ನಲ್ಲಿ 10 ಮಂದಿಯನ್ನು ಸಾಕ್ಷ್ಯಾಧಾರಗಳನ್ನಾಗಿಸಿ 164 ಹೇಳಿಕೆಗಳ ಜೊತೆ ಟೆಕ್ನಿಕಲ್ ಎವಿಡೆನ್ಸ್ ಸಂಗ್ರಹಿಸಿದೆ. ಜೈನ‌ಮುನಿ ಜೊತೆ ಆರೋಪಿ ನಾರಾಯಣ ಮಾಳಿ ಹೆಚ್ಚು ಒಡನಾಟ ಹೊಂದಿದ್ದ ಬಗ್ಗೆ ಸಾಕ್ಷಿಗಳು ನೀಡಿದ ಹೇಳಿಕೆಯನ್ನು ದಾಖಲಿಸಲಾಗಿದೆ. ಆರು ಲಕ್ಷ ಹಣದ ಜೊತೆ ಜೈನ ಮುನಿಗಳು ಆರೋಪಿಯನ್ನ ಹೀಯಾಳಿಸಿ ನಿಂದನೆ ಮಾಡಿದ್ದರು.

ಇದರಿಂದಾಗಿ ಕೋಪಗೊಂಡಿದ್ದ ಆರೋಪಿ ನಾರಾಯಣ ಕೊಲೆ ಮಾಡಲು ಪ್ಲ್ಯಾನ್ ಮಾಡಿದ್ದನು. ಜೈನ ಮುನಿಗಳು ಕಾಣುತ್ತಲೇ ಇಲ್ಲವೆಂದು ಭಕ್ತಾದಿಗಳು ಸುಮ್ಮನಾಗುತ್ತಾರೆಂದು ಆರೋಪಿಗಳು ಭಾವಿಸಿದ್ದರು. ಅದೇ ಕಾರಣಕ್ಕೆ ಕೊಲೆ ಮಾಡಿ ಗುರುತು ಸಹ ಸಿಗದಂತೆ ದೇಹ ತುಂಡರಿಸಿ ಬೋರ್​​ವೆಲ್​ಗೆ ಹಾಕಿದ್ದರು. ತುಂಡರಿಸಲು ಬಳಸಿದ್ದ ಮಚ್ಚು ಮತ್ತು ಚೀಲವನ್ನು ರಾಯಭಾಗದ ಮೇಲ್ಸೇತುವೆ ಬಳಿ ಎಸೆದಿದ್ದರು. ದೇಹ ತುಂಡರಿಸಲು ಬಳಸಿದ್ದ ಮಾರಕಾಸ್ತ್ರವನ್ನು ಸಿಐಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ