ಬಗೆದಷ್ಟು ಬಯಲಾಗುತ್ತಿದೆ ಕೇರಳ ರಾಬರಿ ಗ್ಯಾಂಗ್ ಅಸಲಿಯತ್ತು: ವಿಚಾರಣೆ ವೇಳೆ ರಿವೀಲ್ ಆಯ್ತು ಸ್ಪೋಟಕ ಸತ್ಯ
Chamarajanagar: ದುಬೈನಲ್ಲೇ ಕುಳಿತು ಕರ್ನಾಟಕದಲ್ಲಿ ಕಳ್ಳತನ ಮಾಡಿಸಲಾಗುತ್ತಿದೆ ಎಂಬ ಸ್ಪೋಟಕ ಸತ್ಯ ಕೇರಳ ಗ್ಯಾಂಗ್ನ್ನು ಪೊಲೀಸರು ವಿಚಾರಣೆ ಮಾಡಿದಾಗ ಗೊತ್ತಾಗಿದೆ. ಚಿನ್ನದ ವ್ಯಾಪಾರಿಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡಲಾಗುತ್ತಿದೆ. ಈ ಕೆಲಸಕ್ಕೆ ಕೇರಳ ಗ್ಯಾಂಗ್ ಬಡ ಕೂಲಿ ಮಾಡುವ ಯುವಕರನ್ನು ಮುಖ್ಯವಾಗಿ ಟಾರ್ಗೆಟ್ ಮಾಡುತ್ತಿದೆ.
ಚಾಮರಾಜನಗರ, ಡಿಸೆಂಬರ್ 07: ಚಿನ್ನದ ವ್ಯಾಪಾರಿಗಳನ್ನೆ ಟಾರ್ಗೆಟ್ ಮಾಡಿ ರಾಬರಿ ಮಾಡುತ್ತಿದ್ದ ಕೇರಳ ಗ್ಯಾಂಗ್ನ (Kerala gang) ಅಸಲಿಯತ್ತು ಬಗೆದಷ್ಟು ಬಯಲಾಗುತ್ತಿದೆ. ದುಬೈನಲ್ಲೇ ಕುಳಿತು ಕರ್ನಾಟಕದಲ್ಲಿ ಕಳ್ಳತನ ಮಾಡಿಸಲಾಗುತ್ತಿದೆ ಎಂಬ ಸ್ಪೋಟಕ ಸತ್ಯ ಪೊಲೀಸರ ವಿಚಾರಣೆ ವೇಳೆ ಹೊರಬಿದಿದ್ದೆ. ಸದ್ಯ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದ 2 ರಾಬರಿ ಪ್ರಕರಣದ ಪೈಕಿ 15 ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.
ಕಳೆದ ಮೂರು ತಿಂಗಳ ಹಿಂದೆ ಬೇಗೂರು ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣಗಳು ನಡೆದಿದ್ದವು. ಆದರೆ ಬಂಧಿತ ಆರೋಪಿಗಳು ಕೇವಲ 15 ಸಾವಿರ ರೂ. ಕೂಲಿಗಾಗಿ ಈ ಕೃತ್ಯವೆಸಗಿದ್ದು ಬೆಳಕಿಗೆ ಬಂದಿತ್ತು. ದುಬೈನಲ್ಲೇ ಕುಳಿತು ಆಪರೇಟ್ ಮಾಡುತ್ತಿರುವ ಆ ಅನಾಮಿಕನಿಗಾಗಿ ಪೊಲೀಸ್ ತಲಾಷ್ ನಡೆಸಿದ್ದಾರೆ.
ಕದ್ದು ಮುಚ್ಚಿ ವ್ಯವಹಾರ ಮಾಡುವ ಚಿನ್ನದ ಉದ್ಯಮಿಗಳೆ ಇವರ ಟಾರ್ಗೆಟ್
ತೆರಿಗೆ ಕಟ್ಟದೆ ಕದ್ದು ಮುಚ್ಚಿ ವ್ಯವಹಾರ ಮಾಡುವ ಚಿನ್ನದ ಉದ್ಯಮಿಗಳೆ ಈ ಗ್ಯಾಂಗ್ನ ಟಾರ್ಗೆಟ್. ಚಿನ್ನವನ್ನ ಮಾರಿ ತೆರಿಗೆ ಪಾವತಿಸದೆ ಹಣ ತರುತ್ತಿದ್ದವರನ್ನ ರಸ್ತೆಯಲ್ಲಿ ಅಡ್ಢ ಗಟ್ಟಿ ಹಣ ಎಗರಿಸುತ್ತಿದ್ದರು. ಯಾವುದೇ ರಾಬರಿ ಮಾಡುವ ಮುನ್ನ ಮೂರು ತಂಡಗಳಾಗಿ ಕಾರ್ಯಚರಣೆ ನಡೆಸುತ್ತಿದ್ದರು.
ಇದನ್ನೂ ಓದಿ: ಕಲಬುರಗಿ: ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ವಕೀಲನ ಬರ್ಬರ ಹತ್ಯೆ
ಇನ್ಫಾರ್ಮಶನ್, ಎಕ್ಸಿಕ್ಯೂಟಿವ್ ತಂಡಗಳಂತೆ ಮೂರು ಪ್ರತ್ಯೇಕ ತಂಡದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಥೇಟ್ ಸಿನಿಮಾ ಮಾದರಿಯಲ್ಲೇ ಹೊಂಚು ಹಾಕಿ ಹಣ ಕಳ್ಳತನ ಮಾಡುತ್ತಿದ್ದರು. ಹಾಗಂತ ಹಣ ದೋಚುವವರು ಅಸಲಿಗೆ ಕಳ್ಳರು ಅಲ್ಲಾ. ಒಂದು ದಿನಕ್ಕೆ 15 ಸಾವಿರ ರೂ. ಹಣ ನೀಡಿ ಬೇರೆಯವರಿಂದ ಕಳ್ಳತನ ಮಾಡಿಸುತ್ತಿದ್ದಾರೆ.
ಇದನ್ನೂ ಓದಿ: 11 ತಿಂಗಳಲ್ಲಿ 16 ಸಾವಿರ ಸೈಬರ್ ಪ್ರಕರಣಗಳು ದಾಖಲು! ಈ ವರ್ಷ ದೇಶದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ ಸಾಧ್ಯತೆ
ಕಾರಿನ ನಂಬರ್ ಹಾಗೂ ಕಾರಿನ ಬಣ್ಣವನ್ನ ಹೇಳಿ ಆ ಕಾರಿನ ಮೇಲೆ ದಾಳಿ ಮಾಡಿ ಹಣ ತರುವಂತೆ ಕೇರಳ ಗ್ಯಾಂಗ್ನ ತಾಕೀತು ಮಾಡುತ್ತಾನೆ. ಹಣ ಕಳ್ಳತನ ಮಾಡಿದ ಬಳಿಕ ನಿಗದಿತ ಸ್ಥಳಕ್ಕೆ ಬಂದು ಹಣದ ಬ್ಯಾಗ್ ಇಟ್ಟು ಹೋಗುವುದಷ್ಟೇ ಇವರ ಕೆಲಸವಾಗಿದೆ. ಕಳ್ಳತನ ಮಾಡಲು ಒಂದು ದಿನಕ್ಕೆ 15 ಸಾವಿರ ರೂ. ಕೂಲಿ ನಿಗದಿ ಮಾಡಲಾಗಿದೆ. ಬಡ ಕೂಲಿ ಮಾಡುವ ಯುವಕರೇ ಈ ಗ್ಯಾಂಗ್ನ ಮುಖ್ಯ ಟಾರ್ಗೆಟ್.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.