ಸಿಲಿಕಾನ್ ಸಿಟಿಯಲ್ಲಿ ಜೇಮ್ಸ್ ಬಾಂಡ್ ರೀತಿಯ ಗ್ಯಾಂಗ್ ಫೀಲ್ಡ್ಗೆ ಇಳಿದಿದೆ. ತಮಗೆ ತಾವೇ ಬಾಂಡ್ ಅಂತಾ ಹೆಸ್ರಿಟ್ಕೊಂಡು ಸಿಕ್ಕ ಸಿಕ್ಕ ಕಡೆ ಚೋರಿಗೆ ಇಳಿದಿದೆ. ಬೆಂಗಳೂರಿನ ಉದ್ಯಮಿ, ವ್ಯಾಪಾರಿಗಳೇ ಇವರ ಟಾರ್ಗೆಟ್! ಜೇಮ್ಸ್ ಗ್ಯಾಂಗ್ ಅಂತಲೇ ಕರೆಸಿಕೊಳ್ತಿದೆ ರಾಜಸ್ಥಾನ ಮೂಲದ ಈ ಬಿಚ್ಚು ಗ್ಯಾಂಗ್. ಕೋಡ್ ನಂಬರ್ ಇಟ್ಕೊಂಡು ಕಳ್ಳತನ ಮಾಡೋ ಕುಖ್ಯಾತ ಗ್ಯಾಂಗ್ ಇದಾಗಿದೆ. 007 ಅನ್ನೋ ಕೋಡ್ ನಂಬರ್ ಇಟ್ಕೊಂಡು ಕೈಚಳಕ ತೋರುತಿದೆ. ಕಳ್ಳತನ ಮಾಡಿ ಗೋಡೆ ಮೇಲೆ ಕೋಡ್ ನಂಬರ್ ಬರೆದು ಎಸ್ಕೇಪ್ ಆಗುತ್ತಿದ್ದಾರೆ!
ಪೊಲೀಸರಿಗೆ ಸವಾಲಾಕೋ ರೀತಿ ಕೋಡ್ ನಂಬರ್ ಬರೆಯುತ್ತಿದ್ದ ಖದೀಮರು:
ಕಳ್ಳತನ ಮಾಡಿದ ಮನೆಯ ಗೋಡೆಯ ಮೇಲೆ 007 ಫಿರ್ ಆಯೇಂಗೆ ಎಂದು ಬರೆದು ಎಸ್ಕೇಪ್ ಆಗುತ್ತಿದ್ದಾರೆ. ಆರೋಪಿಗಳು ಕೆ ಆರ್ ಮಾರ್ಕೆಟ್ ನ ಟೆಕ್ಸ್ ಟೈಲ್ಸ್ ಸೇಲ್ಸ್ ಕಾರ್ಪೊರೇಷನ್ ನಲ್ಲಿ ಕಳ್ಳತನ ಮಾಡಿದ್ದಾರೆ. ಅಗಸ್ಟ್ 22 ರ ರಾತ್ರಿ ವೇಳೆ ಟೆಕ್ಸ್ ಟೈಲ್ಸ್ ಶೋರೂಂ ಕಳ್ಳತನವಾಗಿದೆ. ಶೋರೂಂ ಬೀಗ ಮುರಿದು ಕಂತೆ ಕಂತೆ ಹಣ ಗಾಯಬ್ ಮಾಡಿದ್ದಾರೆ. ಅಸಾಮಿಗಳು ಡ್ರಾ ದಲ್ಲಿದ್ದ ಸುಮಾರು 25.45 ಲಕ್ಷ ಹಣ ಎಗರಿಸಿಕೊಂಡು ಹೋಗಿದ್ದಾರೆ.
ಬಳಿಕ ಗೋಡೆ ಹೊರಗಡೆ 007 ಫಿರ್ ಆಯೇಂಗೆ ಅಂತಾ ಬರೆದು ಹೋಗಿದ್ದಾರೆ. ಈ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಗೆ ಟೆಕ್ಸ್ ಟೈಲ್ಸ್ ಶೋರೂಂ ಮಾಲೀಕ ದೂರು ನೀಡಿದ್ದಾರೆ. ಬಿಚ್ಚು ಗ್ಯಾಂಗ್ ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ರಾಜಸ್ಥಾನದಲ್ಲಿ ನಾಲ್ವರ ಬಂಧಿಸಿದ ಮಾರ್ಕೆಟ್ ಪೊಲೀಸರು:
ಪ್ರಕರಣದ ಬೆನ್ನುಹತ್ತಿದ ಖಾಕಿ ಪಡೆ ಸುಮಾರು 15 ದಿನ ರಾಜಸ್ಥಾನದಲ್ಲಿ ಬೀಡು ಬಿಟ್ಟಿತ್ತು. ಈ ವೇಳೆ ಜೇಮ್ಸ್ ಗ್ಯಾಂಗ್ ಅನ್ನೋದು ರಾಜಸ್ಥಾನದ ಬಿಚ್ಚು ಗ್ಯಾಂಗ್ ಕೃತ್ಯ ಎಂದು ಪತ್ತೆಯಾಗಿದೆ. ಬಿಚ್ಚು ಗ್ಯಾಂಗ್ ಗೆ ಸೇರಿದ ನಾಲ್ವರನ್ನು ಪೊಲೀಸ್ ತಂಡ ಬಂಧಿಸಿ, ಕರೆತಂದಿದೆ.
ಪ್ರಮುಖ ಆರೋಪಿ ಸುನೀಲ್, ಭವಾನಿ ಸಿಂಗ್, ಆಶುರಾಮ್ ಗುಜಾರ್ ಮತ್ತು ಕಿಶೋರ್ ಸಿಂಗ್ ಬಂಧಿತರು. ಮಾರ್ಕೆಟ್ ಪೊಲೀಸರು ಸದ್ಯಕ್ಕೆ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸ್ತಿದ್ದಾರೆ.
Also Read:
Youtube inspiration: ಯುಟ್ಯೂಬ್ನಲ್ಲಿ ವೆಬ್ ಸಿರೀಸ್ ನೋಡಿ ಬೈಕ್ ಕದಿಯುತ್ತಿದ್ದ ಗ್ಯಾಂಗ್ ಬಂಧನ
‘007’ ಕೋಡ್ ನಂಬರ್ ಇಟ್ಕೊಂಡು ದರೋಡೆ ಮಾಡ್ತಿತ್ತು ಗ್ಯಾಂಗ್|JamesBond|Tv9 Kannada
Published On - 11:56 am, Sat, 2 October 21