ಐಐಟಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಆರೋಪ: ಜಾರ್ಖಂಡ್ನ ಐಎಎಸ್ ಅಧಿಕಾರಿ ಅಮಾನತು
ಖುಂಟಿ ಎಸ್ಡಿಎಂ ಆಗಿರುವ ಸಯ್ಯದ್ ರಿಯಾಜ್ ಅಹ್ಮದ್ ನ್ನು ಅಮಾನತು ಮಾಡಲು ಮುಖ್ಯಮಂತ್ರಿ ಹೇಮಂತ್ ಸೊರೇನ್ ಆದೇಶಿಸಿದ್ದಾರೆ. ಎಸ್ಡಿಎಂ ವಿರುದ್ಧ ಲೈಂಗಿಕ ಕಿರುಕುಳ ಆರೋಪವಿದೆ ಎಂದು ಮುಖ್ಯಮಂತ್ರಿಯವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಂಚಿ: ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ (IIT) ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತರಾಗಿದ್ದ ಐಎಎಸ್ (IAS) ಅಧಿಕಾರಿ ಸಯ್ಯದ್ ರಿಯಾಜ್ ಅಹ್ಮದ್ನ್ನು ಜಾರ್ಖಂಡ್ (Jharkhand) ಸರ್ಕಾರ ಶುಕ್ರವಾರ ಅಮಾನತು ಮಾಡಿದೆ. ಖುಂಟಿ ಎಂಬಲ್ಲಿ ಸಬ್ ಡಿವಿಷನಲ್ ಮೆಜಿಸ್ಟ್ರೇಟ್ ಆಗಿರುವ ಅಹ್ಮದ್ನ್ನು ಗುರುವಾರ ಬಂಧಿಸಲಾಗಿದ್ದು ಎರಡು ವಾರಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿ ಅಹ್ಮದ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಖುಂಟಿ ಎಸ್ಡಿಎಂ ಆಗಿರುವ ಸಯ್ಯದ್ ರಿಯಾಜ್ ಅಹ್ಮದ್ ನ್ನು ಅಮಾನತು ಮಾಡಲು ಮುಖ್ಯಮಂತ್ರಿ ಹೇಮಂತ್ ಸೊರೇನ್ ಆದೇಶಿಸಿದ್ದಾರೆ. ಎಸ್ಡಿಎಂ ವಿರುದ್ಧ ಲೈಂಗಿಕ ಕಿರುಕುಳ ಆರೋಪವಿದೆ ಎಂದು ಮುಖ್ಯಮಂತ್ರಿಯವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಹ್ಮದ್ ವಿರುದ್ಧ ಐಪಿಸಿ ಸೆಕ್ಷನ್ 354( ಕಿರುಕುಳ ಅಥವಾ ಮಹಿಳೆಯ ಮೇಲೆ ಬಲವಂತ), 354ಎ(ಲೈಂಗಿಕ ದೌರ್ಜನ್ಯ) ಮತ್ತು 509 (ಮಹಿಳೆಯ ನಮ್ರತೆಗೆ ಧಕ್ಕೆ ತರುವ ರೀತಿಯಲ್ಲಿ ವರ್ತನೆ ಅಥವಾ ನುಡಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಜುಲೈ 5ರಂದು ನ್ಯಾಯಾಲಯ ಅಹ್ಮದ್ ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತು. ಸಂತ್ರಸ್ತೆ ಸೇರಿದಂತೆ ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಖುಂಟಿಯಲ್ಲಿ ತರಬೇತಿ ಪಡೆಯಲು ಹೊರ ರಾಜ್ಯದಿಂದ ಬಂದಿದ್ದರು. ಶನಿವಾರ ಇವರು ಡೆಪ್ಯುಟಿ ಡೆವಲಪ್ಮೆಂಟ್ ಕಮಿಷನರ್ ಮನೆಯಲ್ಲಿ ನಡೆದ ರಾತ್ರಿ ಭೋಜನದಲ್ಲಿ ಪಾಲ್ಗೊಂಡಿದ್ದರು. ಆಕೆ ಪಾರ್ಟಿಯಲ್ಲಿ ಒಬ್ಬಂಟಿಯಾಗಿದ್ದಾಗ ಎಸ್ಡಿಎಂ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ.
Published On - 5:06 pm, Fri, 8 July 22