Jharkhand: ಸಾಲ ಮರುಪಾವತಿಸಿಲ್ಲ ಎಂದು ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಂದ ಫೈನಾನ್ಸ್​ ಕಂಪನಿ ಅಧಿಕಾರಿಗಳು

| Updated By: ನಯನಾ ರಾಜೀವ್

Updated on: Sep 17, 2022 | 11:00 AM

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರೈತನ ಟ್ರ್ಯಾಕ್ಟರ್ ಅನ್ನು ಬಲವಂತವಾಗಿ ತೆಗೆದುಕೊಳ್ಳಲು ಬಂದ ಫೈನಾನ್ಸ್ ಕಂಪನಿಯ ಅಧಿಕಾರಿಗಳು, ಟ್ರ್ಯಾಕ್ಟರ್ ಸಾಲದ ಕಂತು ಸಕಾಲಕ್ಕೆ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ವಿಕಲಚೇತನ ರೈತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ದುಷ್ಕೃತ್ಯ ಮೆರೆದಿದ್ದಾರೆ.

Jharkhand: ಸಾಲ ಮರುಪಾವತಿಸಿಲ್ಲ ಎಂದು ಗರ್ಭಿಣಿ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ಕೊಂದ ಫೈನಾನ್ಸ್​ ಕಂಪನಿ ಅಧಿಕಾರಿಗಳು
Death
Follow us on

ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರೈತನ ಟ್ರ್ಯಾಕ್ಟರ್ ಅನ್ನು ಬಲವಂತವಾಗಿ ತೆಗೆದುಕೊಳ್ಳಲು ಬಂದ ಫೈನಾನ್ಸ್ ಕಂಪನಿಯ ಅಧಿಕಾರಿಗಳು, ಟ್ರ್ಯಾಕ್ಟರ್ ಸಾಲದ ಕಂತು ಸಕಾಲಕ್ಕೆ ಮರುಪಾವತಿಸಲಿಲ್ಲ ಎಂಬ ಕಾರಣಕ್ಕೆ ವಿಕಲಚೇತನ ರೈತನ ಗರ್ಭಿಣಿ ಮಗಳ ಮೇಲೆ ಟ್ರ್ಯಾಕ್ಟರ್ ಹತ್ತಿಸಿ ದುಷ್ಕೃತ್ಯ ಮೆರೆದಿದ್ದಾರೆ.

ಗರ್ಭಿಣಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ, ಹಜಾರಿಬಾಗ್ ಹಿರಿಯ ಪೊಲೀಸ್ ಅಧೀಕ್ಷಕ ಮನೋಜ್ ರತನ್ ಚೌತ್ ಪ್ರಕಾರ, ಈ ಸಂಬಂಧ ಹಣಕಾಸು ಕಂಪನಿಯ ಸ್ಥಳೀಯ ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಎಲ್ಲಾ ಆರೋಪಿಗಳನ್ನು ಬಂಧಿಸಲು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಕುಮಾರ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
ಇಚಾಕ್ ಪೊಲೀಸ್ ಠಾಣಾ ವ್ಯಾಪ್ತಿಯ ಬರಿಯಾತ್‌ನ ವಿಕಲಚೇತನ ರೈತ ಮಿಥಿಲೇಶ್ ಮೆಹ್ತಾ ಅವರು ಟ್ರ್ಯಾಕ್ಟರ್ ಖರೀದಿಸಲು ಪಡೆದ ಕಂಪನಿಯ ಸಾಲದ ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿಗಳ ಬಾಕಿ ಕಂತುಗಳನ್ನು ಠೇವಣಿ ಮಾಡಬೇಕು ಎಂದು ಫೈನಾನ್ಸ್ ಕಂಪನಿಯಿಂದ ಸಂದೇಶ ಬಂದಿತ್ತು.

ಆದರೆ ಅದು ಸಾಧ್ಯವಾಗದಿದ್ದಾಗ, ಫೈನಾನ್ಸ್ ಕಂಪನಿಯ ಏಜೆಂಟರು ಮತ್ತು ಅಧಿಕಾರಿಗಳು ಶುಕ್ರವಾರ ಅವರ ಮನೆಗೆ ತಲುಪಿ ಟ್ರ್ಯಾಕ್ಟರ್ ಅನ್ನು ಕೊಂಯೊಯ್ಯಲು ಪ್ರಯತ್ನಿಸಿದರು.

ರೈತರ ಟ್ರ್ಯಾಕ್ಟರ್​ ಅನ್ನು ಹಿಂಪಡೆಯಲು ಹೋದಾಗ, ತಕ್ಷಣವೇ ಒಂದು ಲಕ್ಷದ ಇಪ್ಪತ್ತು ಸಾವಿರ ಬಾಕಿ ಮೊತ್ತವನ್ನು ಪಾವತಿಸಲು ಒತ್ತಾಯಿಸಿದರು.
ಆದರೆ ಫೈನಾನ್ಸ್ ಕಂಪನಿಯ ಉದ್ಯೋಗಿಗಳು ಒಪ್ಪದೆ ಬಲವಂತವಾಗಿ ಟ್ರ್ಯಾಕ್ಟರ್ ತೆಗೆದುಕೊಳ್ಳಲು ಮುಂದಾದರು.

ವಿಕಲಚೇತನ ರೈತನ 27 ವರ್ಷದ ಮಗಳು ಮೋನಿಕಾ ಅವರನ್ನು ತಡೆಯಲು ಓಡಿದಳು, ಆದರೆ ಆಕೆಗೆ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಅವರು ಹೇಳಿದರು.

ಘಟನೆಯ ನಂತರ ಆಕ್ರೋಶಗೊಂಡ ಗ್ರಾಮಸ್ಥರು ಮೃತದೇಹವನ್ನು ಇಟ್ಟು ಪ್ರತಿಭಟನೆ ನಡೆಸಿ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ಹಾಗೂ ಫೈನಾನ್ಸ್ ಕಂಪನಿಯ ನೌಕರರನ್ನು ಬಂಧಿಸುವಂತೆ ಒತ್ತಾಯಿಸಿದರು.

ಫೈನಾನ್ಸ್​​ನಲ್ಲಿ ಬಡ ಕುಟುಂಬವೊಂದು ಸಾಲ ಪಡೆದುಕೊಂಡಿತ್ತು. ಅದನ್ನು ಮರುಪಾವತಿಸದ ಕಾರಣ ಅಧಿಕಾರಿಗಳು ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಕರಣ ನಡೆದಿದೆ. ಹಜಾರಿಬಾಗ್​​ನ ಇಚ್ಚಾಕ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಮೂರು ತಿಂಗಳ ಗರ್ಭಿಣಿ ಪ್ರಾಣ ಕಳೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ಫೈನಾನ್ಸ್ ಕಂಪನಿಯ ರಿಕವರಿ ಎಜೆಂಟ್​, ಮ್ಯಾನೇಜರ್ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

 

ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ