ಬೆಳಗಾವಿಯ ಕ್ಯಾಂಪ್ನಲ್ಲಿ ರಿಯಲ್ ಎಸ್ಟೇಟ್ ಏಜೆಂಟ್ನ ಬರ್ಬರ ಕೊಲೆ
ರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಬೆಳಗಾವಿಯ ಕ್ಯಾಂಪ್ ಪ್ರದೇಶದಲ್ಲಿ ನಡೆದಿದೆ.
ಬೆಳಗಾವಿ: ರಾತ್ರಿ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ (Murder) ಘಟನೆ ಬೆಳಗಾವಿಯ (Belagavi) ಕ್ಯಾಂಪ್ ಪ್ರದೇಶದಲ್ಲಿ ನಡೆದಿದೆ. ರಿಯಲ್ ಎಸ್ಟೇಟ್ ಏಜೆಂಟ್ ಸುಧೀರ್ ಕಾಂಬಳೆ(57) ಮೃತ ದುರ್ದೈವಿ. ಸುಧೀರ್ ಕಾಂಬಳೆ ದುಬೈನಲ್ಲಿ ವಾಸ ಮಾಡುತ್ತಿದ್ದು, 2 ವರ್ಷದ ಹಿಂದೆ ಕೊರೊನಾ ಹಿನ್ನೆಲೆ ಬೆಳಗಾವಿಗೆ ಬಂದಿದ್ದರು. ನಿನ್ನೆ ರಾತ್ರಿ ಹೆಂಡತಿ, ಮಕ್ಕಳು ಪಕ್ಕದ ರೂಮ್ನಲ್ಲಿ ಮಲಗಿದ್ದಾಗಲೇ ಆರೋಪಿಗಳು ಮನೆಗೆ ನುಗ್ಗಿ ಹತ್ಯೆಗೈದು ಪರಾರಿಯಾಗಿದ್ದರು. ದುಷ್ಕರ್ಮಿಗಳು ಸುದೀರ್ನ ಹೊಟ್ಟೆ, ಕತ್ತು, ಕೈ, ಮುಖಕ್ಕೆ ಇರಿದು ಹತ್ಯೆಗೈದಿದ್ದಾರೆ. ಸ್ಥಳಕ್ಕೆ ಕ್ಯಾಂಪ್ ಪೊಲೀಸರು, ಡಿಸಿಪಿ ರವೀಂದ್ರ ಗಡಾದಿ ಭೇಟಿ ನೀಡಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಲಾರಿ ಪಲ್ಟಿಯಾಗಿ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವು
ಉತ್ತರ ಕನ್ನಡ: ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಚಾಲಕ, ಕ್ಲೀನರ್ ಸಾವನ್ನಪ್ಪಿರುವ ಘಟನೆ ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ನಡೆದಿದೆ. ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಯಲ್ಲಾಪುರದಿಂದ ಮಂಗಳೂರು ಕಡೆ ಹೋಗುತ್ತಿತ್ತು. ಈ ವೇಳೆ ಲಾರಿ ಪಲ್ಟಿಯಾಗಿದ್ದು, ಚಾಲಕ ಹಾಗೂ ಕ್ಲಿನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಲ್ಟಿಯಾದ ರಭಸಕ್ಕೆ ಲಾರಿ ಸಂಪೂರ್ಣ ಛೀದ್ರವಾಗಿದೆ. ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಲ್ಲಾಪುರ ತಾಲೂಕಿನ ಅರಬೈಲ್ ಬಳಿ ಲಾರಿ ಪಲ್ಟಿಯಾಗಿ ಚಾಲಕ, ಕ್ಲೀನರ್ ದುರ್ಮರಣ; ಗ್ರಾನೈಟ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ನಡೆದ ಅಪಘಾತ; ಯಲ್ಲಾಪುರದಿಂದ ಮಂಗಳೂರು ಕಡೆ ಹೋಗುತ್ತಿದ್ದ ಲಾರಿ; ಯಲ್ಲಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
2 ವರ್ಷದ ಮಗು ಜೊತೆ ಮಲಪ್ರಭಾ ನದಿಗೆ ಹಾರಿರುವ ತಾಯಿ
ಬೆಳಗಾವಿ: 2 ವರ್ಷದ ಮಗು ಜೊತೆ ತಾಯಿ ಮಲಪ್ರಭಾ ನದಿಗೆ ಹಾರಿರುವ ಘಟನೆ ರಾಮದುರ್ಗದ ವೆಂಕಟೇಶ್ವರ ದೇಗುಲ ಬಳಿ ನಡೆದಿದೆ. ಓಬಳಾಪುರ ಗ್ರಾಮದ ರುದ್ರವ್ವ ಬಸವರಾಜ ಬನ್ನೂರ (30) , ಶಿವಲಿಂಗಪ್ಪ (2), ಜೊತೆ ಮಲಪ್ರಭಾ ನದಿಯ ಹಳೆ ಸೇತುವೆ ಮೇಲಿಂದ ನದಿಗೆ ಹಾರಿದ್ದಾಳೆ. ಮಹಿಳೆ ನದಿಯ ದಡದಲ್ಲಿ ಚಪ್ಪಲಿ ಬಿಟ್ಟು ಮಗುವಿನೊಂದಿಗೆ ನದಿಗೆ ಹಾರಿದ್ದು, ಚಪ್ಪಲಿ ಪತ್ನಿಯದ್ದೇ ಎಂದು ಪತಿ ಬಸವರಾಜ ಬನ್ನೂರ ಗುರುತಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ, ಪೊಲೀಸರಿಂದ ತಾಯಿ ಮಗುವಿಗಾಗಿ ಹುಡುಕಾಟ ನಡೆಯುತ್ತಿದೆ. ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:33 pm, Sat, 17 September 22