ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನ ಹತ್ಯೆ: ಆರೋಪಿಗಳಿಗೆ ತೆಲುಗು ಸಿನೆಮಾ ಪ್ರೇರಣೆ

ದಾವಣಗೆರೆಯ ಇಮಾಮ್ ನಗರದಲ್ಲಿ ನಡೆದ ಭಯಾನಕ ಘಟನೆಯಲ್ಲಿ, 40 ಲಕ್ಷ ರೂ. ವಿಮಾ ಹಣಕ್ಕಾಗಿ ದುಗ್ಗೇಶ್ ಎಂಬಾತನನ್ನು ಅವನ ಸೋದರ ಅಳಿಯ ಗಣೇಶ್​ ಮತ್ತು ಅವನ ಸ್ನೇಹಿತರು ಕೊಲೆ ಮಾಡಿದ್ದಾರೆ. ದುಗ್ಗೇಶ್ ಅವರ ಹೆಸರಿನಲ್ಲಿ 2 ಲಕ್ಷ ರೂ. ವಿಮಾ ಪಾಲಿಸಿಯನ್ನು ಮಾಡಿಸಿ, ದುಗ್ಗೇಶ್ ಸಾಯದ ಕಾರಣ ಹತ್ಯೆ ಮಾಡಿದ್ದಾರೆ.

ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನ ಹತ್ಯೆ: ಆರೋಪಿಗಳಿಗೆ ತೆಲುಗು ಸಿನೆಮಾ ಪ್ರೇರಣೆ
ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನ ಹತ್ಯೆ: ಆರೋಪಿಗಳಿಗೆ ತೆಲುಗು ಸಿನೆಮಾ ಪ್ರೇರಣೆ
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಗಂಗಾಧರ​ ಬ. ಸಾಬೋಜಿ

Updated on: Nov 06, 2024 | 3:56 PM

ದಾವಣಗೆರೆ, ನವೆಂಬರ್​ 06: ತೆಲುಗು ಸಿನೆಮಾ ಒಂದರ ಕತೆಯಂತೆ ಇನ್ಶೂರೆನ್ಸ್ ದುಡ್ಡಿಗಾಗಿ ಅಳಿಯನನ್ನು ಹತ್ಯೆ (death) ಮಾಡಿರುವಂತಹ ಘಟನೆ ಇಮಾಮ್ ನಗರದಲ್ಲಿ ನಡೆದಿದೆ. ಇನ್ಶೂರೆನ್ಸ್​ ಹಣಕ್ಕಾಗಿ ಸೋದರ ಅಳಿಯ ಗಣೇಶ ಮತ್ತು ಸ್ನೇಹಿತರಿಂದ ದುಗ್ಗೇಶ್ (32) ಎಂಬಾತನನ್ನು ಕೊಲೆ ಮಾಡಲಾಗಿದೆ. ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಣೇಶ (24), ಅನಿಲ(18), ಶಿವಕುಮಾರ್ (25) ಮತ್ತು ಮಾರುತಿ (24) ಬಂಧಿಸಲಾಗಿದೆ.

ಮೃತ ದುರ್ಗೇಶ್​ ಖಾಸಗಿ ಬಸ್ ನಿಲ್ದಾಣ ಬಳಿ ಹಣ್ಣು ಮಾರಾಟ ಮಾಡಿಕೊಂಡಿದ್ದ. ಜೊತೆಗೆ ಸಾಕಷ್ಟು ಮಧ್ಯವ್ಯಸನಿ ಕೂಡ ಆಗಿದ್ದು, ಕುಡಿದು ಕುಡಿದು ತಿವ್ರ ಅಶಕ್ತನಾಗಿದ್ದ. ಹೀಗಾಗಿ ಒಂದು ವರ್ಷದಲ್ಲಿ ಆತ ಸಾಯುತ್ತಾನೆ ಎಂದು ದುರ್ಗೇಶ್ ಹೆಸರಲ್ಲಿ ಗಣೇಶ್ 2 ಲಕ್ಷ ರೂ. ಇನ್ಶೂರೆನ್ಸ್ ಮಾಡಿಸಿದ್ದ. ದುಗ್ಗೇಶ್ ಸತ್ತರೆ 40 ಲಕ್ಷ ರೂ. ಇನ್ಶೂರೆನ್ಸ್ ಸಿಗಬೇಕಿತ್ತು. ಆದರೆ ಇನ್ಶೂರೆನ್ಸ್ ಮಾಡಿಸಿ ಒಂದು ವರ್ಷವಾದರೂ ದುಗ್ಗೇಶ್ ಸಾಯದಿದ್ದಾಗ ಗಣೇಶ್​ ಕಂಗಾಲಾಗಿದ್ದಾನೆ.

ಇದನ್ನೂ ಓದಿ: 8ನೇ ತರಗತಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಪ್ರಿನ್ಸಿಪಾಲ್, ವಾರ್ಡನ್ ನಿರ್ಲಕ್ಷ್ಯ ಆರೋಪ

ಜನವರಿಗೆ ಮತ್ತೆ ಇನ್ಶೂರೆನ್ಸ್ ರಿನಿವಲ್ ಮಾಡಬೇಕಿತ್ತು. ಸುಮ್ಮನೆ ಇನ್ಶೂರೆನ್ಸ್ ಕಟ್ಟಿದ ಎರಡು ಲಕ್ಷ ರೂ. ಹಾಳಾಗುತ್ತದೆ ಎಂದು ಕಂಗಾಲಾಗಿದ್ದ ಗಣೇಶ್​, ಸ್ನೇಹಿತರ ಜೊತೆ ನಗರದ ಹೊರವಲಯದಲ್ಲಿ ದುಗ್ಗೇಶ್ ನನ್ನು ಟವೆಲ್​ನಿಂದ ಉಸಿರು ಬಿಗಿದು ಹತ್ಯೆ ಮಾಡಿದ್ದಾರೆ. ಮುಖ ಮತ್ತು ದೇಹದ ಇತರೆಡೆ ಪಂಚ್ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಇಬ್ಬರು ಪ್ರಿಯಕರ ಜತೆ ಸೇರಿ ಗಂಡನನ್ನೇ ಕೊಂದ ಪತ್ನಿ

ಹತ್ಯೆ ನಂತರ ಲಿಂಗೇಶ್ವರ ದೇವಸ್ಥಾನ ಬಳಿ ಆರೋಪಿಗಳು ಎಸೆದು ಹೋಗಿದ್ದರು. ಮತ್ತೆ ಅನುಮಾನಗೊಂಡು ಅಪರಿಚಿತರಂತೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ದುಗ್ಗೇಶ್ ಮೃತದೇಹವನ್ನು ಆಸ್ಪತ್ರೆಯಿಂದ ಮನೆಗೆ ತಂದು ಹೊಸ ಕತೆ ಕಟ್ಟಿದ್ದಾರೆ. ಯಾರೋ ಹೊಡೆದು ಬಿಸಾಕಿ ಹೋಗಿದ್ದರು ಎಂದಿದ್ದಾರೆ. ಆದರೆ ಅನುಮಾನಗೊಂಡ ಆಜಾದ್ ನಗರ ಠಾಣಾ ಪೊಲೀಸರು ವಿಚಾರಣೆ ಮಾಡಿದ್ದು, ಈ ವೇಳೆ ಆರೋಪಿ ಗಣೇಶ್​ ಸತ್ಯ ಬಾಯ್ಬಿಟ್ಟಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ