ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಇಬ್ಬರು ಪ್ರಿಯಕರ ಜತೆ ಸೇರಿ ಗಂಡನನ್ನೇ ಕೊಂದ ಪತ್ನಿ

ತನ್ನ ಸುಖಕ್ಕಾಗಿ ಗಂಡನ ಕೊಲೆ ಮಾಡಿ ಮಳ್ಳಿ ತರ ಶವಗಾರದ ಮುಂದೆ ಕಣ್ಣೀರು ಹಾಕಿದ್ದಳು. ನನಗೇನೂ ಗೊತ್ತಿಲ್ಲ ಎಂದು ಇಬ್ಬರು ಪ್ರಿಯತಮರ ಜೊತೆ ಸೇರಿ ಗಂಡನ ಕತ್ತುಕೊಯ್ದು ನಾಟಕವಾಡಿದ್ದ ಪತ್ನಿಯ ನಿಜಬಣ್ಣವನ್ನ ಪೊಲೀಸ್ರು ಬಟಾಬಯಲು ಮಾಡಿದ್ದಾರೆ. ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾದ ಎಂದು ಕೊಲೆ ಮಾಡಿದ್ದ ಪತ್ನಿ ಸಮೇತ ಇಬ್ಬರು ಕೊಲೆ ಆರೋಪಿಗಳು ಕಂಬಿ ಹಿಂದೆ ಬಿದ್ದಿದ್ದಾರೆ. ಈ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.

ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಇಬ್ಬರು ಪ್ರಿಯಕರ ಜತೆ ಸೇರಿ ಗಂಡನನ್ನೇ ಕೊಂದ ಪತ್ನಿ
ಬಂಧಿತ ಆರೋಪಿಗಳು
Follow us
ದಿಲೀಪ್​, ಚೌಡಹಳ್ಳಿ
| Updated By: ರಮೇಶ್ ಬಿ. ಜವಳಗೇರಾ

Updated on: Nov 04, 2024 | 10:12 PM

ಮೈಸೂರು, (ನವೆಂಬರ್ 04): ಮಹಿಳೆಯೋರ್ವಳು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದಯ ತಾಳಿ ಕಟ್ಟಿದ ಗಂಡನನ್ನೇ ಕೊಂದಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಮಡುವಿಹಳ್ಳಿಯಲ್ಲಿ ನಡೆದಿದೆ. ನಂಜನಗೂಡು ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಸದಾಶಿವ(43) ಎಂಬ ವ್ಯಕ್ತಿಯನ್ನು ಸರ್ಕಾರಿ ಶಾಸಲೆಯ ಬಳಿ ಕೊಲೆಯಾಗಿತ್ತು. ಪತ್ನಿ ರಾಜೇಶ್ವರಿ ಹಾಗೂ ತನ್ನಿಬ್ಬರು ಗೆಳೆಯರಾದ ರಂಗಸ್ವಾಮಿ, ಶಿವಯ್ಯ ಎನ್ನುವರ ಜೊತೆ ಸೇರಿಕೊಂಡು ಪತಿಯನ್ನೇ ಕೊಂದಿದ್ದಳು. ಬಳಿಕ ವಾಮಾಚಾರಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಬಿಂಬಿಸಿ ರಾಜೇಶ್ವರಿ ಬಿಕ್ಕಿಬಿಕ್ಕಿ ಅತ್ತಿದ್ದಳು. ಆದ್ರೆ, ಪೊಲೀಸರು ತನಿಖೆ ನಡೆಸಿದಾಗ ಪತ್ನಿಯ ನವರಂಗಿಯಾಟ ಬಯಲಿಗೆ ಬಂದಿದೆ.

ಮೈಸೂರು ಜಿಲ್ಲೆಯಲ್ಲೊಂದು ಐನಾತಿ ಪತ್ನಿಯ ನಿಜ ಬಣ್ಣವನ್ನು ಪೊಲೀಸ್ರು ಬಟಾಬಯಲು ಮಾಡಿದ್ದಾರೆ. ತನ್ನ ರಂಗಿನಾಟಕ್ಕೆ ಪತಿ ಅಡ್ಡ ಬರ್ತಾನೆ ಎಂದು ತಿಳಿದ ಪತ್ನಿ ವಾಮಾಚಾರದ ಹೆಸರಲ್ಲಿ ಪತಿಕೊಂದು ಕಥೆ ಕಟ್ಟಿ ಸಿಕ್ಕಿಬಿದ್ದಿದ್ದಾಳೆ. ಅಂದ ಹಾಗೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದನ್ನ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಕುಂಡಿ ಗ್ರಾಮದ ಸುಮಾರು 47 ವರ್ಷದ ಸದಾಶಿವ ಕೊಲೆಯಾಗಿದ್ದು, ಇದೇ ಸದಾಶಿವನ ಪತ್ನಿ ರಾಜೇಶ್ವರಿ ಈಕೆಯ ಇಬ್ಬರು ಪ್ರಿಯಕರರಾದ ರಂಗಸ್ವಾಮಿ, ಶಿವಯ್ಯ ಬಂಧಿತ ಆರೋಪಿಗಳಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಮತ್ತೊಂದು ಹೇಯ ಕೃತ್ಯ: ಮೈಸೂರಿನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ವಾಮಾಚಾರದ ನಾಟಕವಾಡಿ ಪತ್ನಿ

ಅಂದಹಾಗೆ ಅಕ್ಟೋಬರ್ 17 ರಂದು ಮಡುವಿನಹಳ್ಳಿ ಸರ್ಕಾರಿ ಶಾಲೆಯ ಪಕ್ಕದ ಗದ್ದೆಯ ಬದುವಿನಲ್ಲಿ ಕತ್ತು ಕೊಯ್ದ ಸ್ಥಿತಿಯಲ್ಲಿ ಈ ಸದಾಶಿವ ಪತ್ತೆಯಾಗಿದ್ದ. ನರಳಾಟವಾಡ್ತ ಇದ್ದ ಸದಾಶಿವನನ್ನ ಕಂಡ ಸ್ಥಳಿಯರು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದ. ಆದ್ರೆ ಈ ಮೃತ ಸದಾಶಿವ ಸಿಕ್ಕ ಜಾಗದಲ್ಲಿ ರಕ್ತಕೊಡಿಯಂತೆ ಹರಿದಿತ್ತು ಪಕ್ಕದಲ್ಲೇ ನೂರ ಒಂದು ರೂಪಾಯಿ, ನಿಂಬೆಹಣ್ಣು, ಎಲೆ ಅಡಿಕೆ ಕುಡಿಕೆ ಬಿದ್ದಿತ್ತು. ಘಟನೆಯನ್ನ ಕಂಡವರು ವಾಮಾಚಾರಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಎಲ್ಲರೂ ಆರಂಭದಲ್ಲಿ ಅಂದುಕೊಂಡಿದ್ದರು. ಆದ್ರೆ ಈ ಐನಾತಿ ಪತ್ನಿ ರಾಜೇಶ್ವರಿಯೇ ಪತಿ ಕೊಂದು ವಾಮಾಚಾರದ ನಾಟಕವಾಡಿದ್ದಾಳೆ ಎಂದು ಆರಂಭದಲ್ಲಿ ಯಾರೂ ಕೂಡ ಊಹಿಸಿರಲಿಲ್ಲ.

ಇನ್ನೂ ಕೇಸ್ ದಾಖಲು ಮಾಡಿಕೊಂಡಿದ್ದ ಹುಲ್ಲಹಳ್ಳಿ ಪೊಲೀಸರು ಪ್ರಕರಣದ ಜಾಡು ಹಿಡಿದು ಹೊರಟಾಗ ಪತ್ನಿ ರಾಜೇಶ್ವರಿ ಮೇಲೆ ಗುಮಾನಿಬಂದಿದೆ. ಆಕೆಯ ಮೊಬೈಲ್ ಟ್ರ್ಯಾಕ್ ಮಾಡಿದ್ಮೆಲೆ ಪೊಲೀಸರೇ ಒಮ್ಮೆಲೆ ಶಾಕ್ ಆಗಿದ್ದಾರೆ. ಈ ರಾಜೇಶ್ವರಿ ಹಲವಾರು ಸಿಮ್ ಗಳನ್ನು ಬದಲಾವಣೆ ಮಾಡಿದ್ದು ಪ್ರಿಯಕರರಾದ ಶಿವಯ್ಯ, ರಂಗಸ್ವಾಮಿ ಜೊತೆ ನಿರಂತರವಾಗಿ ಮಾತನಾಡಿದ್ದು ಗೊತ್ತಾಗಿದೆ‌. ಪೊಲೀಸ್ರು ರಾಜೇಶ್ವರಿಯನ್ನ ಠಾಣೆಗೆ ಕರೆತಂದು ವಿಚಾರಣೆಗೊಳಪಡಿಸಿದಾಗ ನಿಜಬಣ್ಣ ಬಯಲಾಗಿದೆ.

ಒಟ್ಟಿನಲ್ಲಿ ತನ್ನ ಅನೈತಿಕ ಸಂಬಂಧಕ್ಕೆ ಪತಿಯನ್ನು ಈ ಪಾಪಿ ಪತ್ನಿ ಕತ್ತುಸೀಳಿ ಕೊಂದು ನಾಟಕವಾಡಿ ಇದೀಗ ಮಾಡಿದ ಪಾಪಕ್ಕೆ ಜೈಲು ಕಂಬಿಹಿಂದೆ ಬಿದ್ದಿದ್ದಾಳೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ