ಪತ್ನಿಗೆ ಫೋನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆ ಮಾಡಿ ಮೂಟೆ ಕಟ್ಟಿದ!
ಬೆಂಗಳೂರು: ಹೆಂಡತಿ ಮೊಬೈಲ್ಗೆ ಫೋನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿರುವ ಘಟನೆ ನಗರದ ಎನ್ಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅಂದ್ರಹಳ್ಳಿಯ ಪ್ರಸನ್ನ ಬಡಾವಣೆಯ ನಿವಾಸಿ ಕೇದಾರ್ ಸಹಾನಿ ಕೊಲೆಯಾದ ವ್ಯಕ್ತಿ. ಸೆಪ್ಟೆಂಬರ್ 5ರಂದು ರಾತ್ರಿ ಈ ದುರ್ಘಟನೆ ನಡೆದಿದೆ. ಆರೋಪಿ ರಾಹುಲ್ @ ಚೋಟಾ ಲಾಲ್ ಮತ್ತು ಮೃತ ಕೇದಾರ್ ಸಹಾನಿ ಪೈಂಟಿಗ್ ಕೆಲಸ ಮಾಡಿಕೊಂಡಿದ್ದರು. ಕೇದಾರ್ ಪತ್ನಿ ಕುಸುಮಾ ಮೊಬೈಲ್ಗೆ ರಾಹುಲ್ ಆಗಾಗ ಕರೆ ಮಾಡ್ತಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಜೊತೆ ಜಗಳ […]
ಬೆಂಗಳೂರು: ಹೆಂಡತಿ ಮೊಬೈಲ್ಗೆ ಫೋನ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನ ಕೊಲೆ ಮಾಡಿರುವ ಘಟನೆ ನಗರದ ಎನ್ಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ. ಅಂದ್ರಹಳ್ಳಿಯ ಪ್ರಸನ್ನ ಬಡಾವಣೆಯ ನಿವಾಸಿ ಕೇದಾರ್ ಸಹಾನಿ ಕೊಲೆಯಾದ ವ್ಯಕ್ತಿ. ಸೆಪ್ಟೆಂಬರ್ 5ರಂದು ರಾತ್ರಿ ಈ ದುರ್ಘಟನೆ ನಡೆದಿದೆ.
ಆರೋಪಿ ರಾಹುಲ್ @ ಚೋಟಾ ಲಾಲ್ ಮತ್ತು ಮೃತ ಕೇದಾರ್ ಸಹಾನಿ ಪೈಂಟಿಗ್ ಕೆಲಸ ಮಾಡಿಕೊಂಡಿದ್ದರು. ಕೇದಾರ್ ಪತ್ನಿ ಕುಸುಮಾ ಮೊಬೈಲ್ಗೆ ರಾಹುಲ್ ಆಗಾಗ ಕರೆ ಮಾಡ್ತಿದ್ದ. ಈ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ರಾಹುಲ್ ಜೊತೆ ಜಗಳ ಮಾಡಿದ್ದ.
ಕೊಲೆ ನಡೆದ ದಿನ.. ಮಾತನಾಡುವ ಬಾ ಎಂದು ಅಪಾರ್ಟ್ಮೆಂಟ್ ಬಳಿ ರಾಹುಲ್ ಕೇದಾರ್ನನ್ನು ಕರೆಸಿಕೊಂಡು ಕಂಠ ಪೂರ್ತಿ ಎಣ್ಣೆ ಕುಡಿಸಿ ಸಿಲಿಂಡರ್ನಿಂದ ತಲೆ ಜಜ್ಜಿ ಕೊಲೆ ಮಾಡಿದ್ದಾನೆ. ನಂತರ ಮೃತ ದೇಹವನ್ನು ಅದೇ ಅಪಾರ್ಟ್ಮೆಂಟ್ನ ಕಾಪೌಂಡ್ನಲ್ಲಿ ಮೂಟೆ ಕಟ್ಟಿ ಎಸೆದು ಸಿಮ್ ಬಿಸಾಕಿ ಬಿಹಾರದಲ್ಲಿ ತಲೆ ಮರೆಸಿಕೊಂಡಿದ್ದ. ಸದ್ಯ ಬ್ಯಾಡರಹಳ್ಳಿ ಇನ್ಸ್ಪೆಕ್ಟರ್ ರಾಜೀವ್ ಅಂಡ್ ಟೀಂ ಆರೋಪಿಯನ್ನ ಪತ್ತೆ ಹಚ್ಚಿ ಬಂಧಿಸಿದ್ದಾರೆ.