ನಮ್ಮ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಅಂದಿದ್ದಕ್ಕೆ ಕೊಲೆ: ಐವರು ವಶಕ್ಕೆ

ರಾಗಿಮನಗಡ್ಡದಲ್ಲಿ ಪಟಾಕಿ ಹಚ್ಚುವ ವಿಚಾರವಾಗಿ ಕೊಲೆ ನಡೆದಿರುವಂತಹ ಘಟನೆ ನಡೆದಿದೆ. ಪಟಾಕಿ ಹೊಡೆಯುವುದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದು, ಪರಸ್ಪರ ದೂರು ದಾಖಲಾಗಿದೆ.

ನಮ್ಮ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಅಂದಿದ್ದಕ್ಕೆ ಕೊಲೆ: ಐವರು ವಶಕ್ಕೆ
ನಮ್ಮ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಅಂದಿದ್ದಕ್ಕೆ ಕೊಲೆ: ಐವರು ವಶಕ್ಕೆ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Nov 01, 2024 | 3:32 PM

ರಾಯಚೂರು, ನವೆಂಬರ್​ 01: ನಮ್ಮ ಮನೆ ಬಳಿ ಯಾಕೆ ಪಟಾಕಿ ಹಚ್ಚುತ್ತೀರಿ ಅಂದಿದ್ದಕ್ಕೆ ಕೊಲೆ (death) ಮಾಡಿರುವಂತಹ ಘಟನೆ ನಗರದ ರಾಗಿಮನಗಡ್ಡದಲ್ಲಿ ನಡೆದಿದೆ. ನರಸಿಂಹಲು(32) ಮೃತ ವ್ಯಕ್ತಿ. ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪರಸ್ಪರ ಕೇಸ್ ದಾಖಲಾಗಿದ್ದು, ಐವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರಾಗಿಮನಗಡ್ಡದಲ್ಲಿ ಕಾರ್ನರ್ ಬಳಿ ಮನೆ ಹೊಂದಿರುವ ಮೃತ ನರಸಿಂಹ, ನಿನ್ನೆ ರಾತ್ರಿ ರಸ್ತೆಯಲ್ಲಿ ಅದೇ ಏರಿಯಾದ ಹುಡುಗರು‌‌ ಪಟಾಕಿ ಹೊಡೆಯುತ್ತಿದ್ದರು. ಆಗ ಯಾಕೆ ಪಟಾಕಿ ಹೊಡೆಯುತ್ತಿದ್ದಿರಿ ಅಂತ ನರಸಿಂಹ ಪ್ರಶ್ನಿಸಿದ್ದಾರೆ. ಆಗ ಏರಿಯಾ ಹುಡುಗರು ಮಾತು ಕೇಳದ ಹಿನ್ನೆಲೆ ನರೇಶ್, ಪ್ರವೀಣ್ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾರೆ. ಆಗ ಹಲ್ಲೆಗೊಳಗಾದ ಯುವಕರು ಹಾಗೂ ಅವರ ಕಡೆಯವರಿಂದ ನರಸಿಂಹನ ಹತ್ಯೆ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 5 ಲಕ್ಷ ರೂ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ: ಓರ್ವ ಬಂಧನ

ಮೃತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿಲ್ಲ. ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಉನ್ನತ ಮೂಲಗಳಿಂದ ಸ್ಪಷ್ಟನೆ ನೀಡಲಾಗಿದೆ. ಆಗ ಹಲ್ಲೆಗೊಳಗಾದ ಕಡೆಯವರಿಂದ ನರಸಿಂಹಲುನನ್ನ ಎಳೆತಂದು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದೆ. ಇತ್ತ ಮೃತನ ವಿರುದ್ಧವೂ ಹಲ್ಲೆಗೊಳಗಾದವರಿಂದ ಕೌಂಟರ್ ಕೇಸ್ ದಾಖಲಿಸಿದ್ದಾರೆ.

ಮೈ ಮೇಲೆ ಟೀ ಚೆಲ್ಲಿಕೊಂಡು ಗಾಯಗೊಂಡಿದ್ದ ಮಗು ಸಾವು

ಶಿವಮೊಗ್ಗ: ಮೈ ಮೇಲೆ ಟೀ ಚೆಲ್ಲಿಕೊಂಡು ಗಾಯಗೊಂಡಿದ್ದ ಮಗು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಹೊಸನಗರ ತಾಲೂಕಿನ ಹಿರೀಮನೆ ಗ್ರಾಮದಲ್ಲಿ ಅ.24 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ರಾಜೇಶ್ ಹಾಗು ಅಶ್ವಿನಿ ದಂಪತಿ ಪುತ್ರ ಅಥರ್ವ (2) ಮೃತ ಮಗು.

ಕಳೆದ ವಾರ ರಾಜೇಶ್ ಅವರ ನೆರೆಮನೆ ನಿವಾಸಿ ಮೃತಪಟ್ಟಿದ್ದರು. ಹೀಗಾಗಿ ಅಂತಿಮ ದರ್ಶನ ಪಡೆಯಲು ಬಂದಿದ್ದ ಸಂಬಂಧಿಕರಿಗೆ ಅಶ್ವಿನಿ ಟೀ ರೆಡಿ ಮಾಡಿಟ್ಟಿದ್ದರು. ಟೀ ಪಾತ್ರೆಯನ್ನು ಮೈಮೇಲೆ ಬೀಳಿಸಿಕೊಂಡು ಮಗು ಗಾಯಗೊಂಡಿತ್ತು.

ಇದನ್ನೂ ಓದಿ: ಉಡುಪಿ ಬಾಲಕೃಷ್ಣ ಹತ್ಯೆ: ಆರೋಪಿಗಳ 5 ತಿಂಗಳ ಕೊಲೆ ಸಂಚು ಬಯಲು

ಗಾಯಗೊಂಡ ಮಗುವಿಗೆ ಕಳೆದೊಂದು ವಾರದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿದೆ. ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನನ್ನ ಮಗ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ನನಗೆ ಒಂದೇ: ಜಮೀರ್ ಅಹ್ಮದ್
ನನ್ನ ಮಗ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ನನಗೆ ಒಂದೇ: ಜಮೀರ್ ಅಹ್ಮದ್
ಭಟ್ಕಳ: ಮುಸ್ಲಿಂ ಜನಪ್ರತಿನಿಧಿಯಿಂದ ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ
ಭಟ್ಕಳ: ಮುಸ್ಲಿಂ ಜನಪ್ರತಿನಿಧಿಯಿಂದ ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ
ಕೊಹ್ಲಿ ಸಲಹೆ, ಸುಂದರ್ ಮ್ಯಾಜಿಕಲ್ ಸ್ಪಿನ್; ಕಿವೀಸ್ ನಾಯಕ ಔಟ್
ಕೊಹ್ಲಿ ಸಲಹೆ, ಸುಂದರ್ ಮ್ಯಾಜಿಕಲ್ ಸ್ಪಿನ್; ಕಿವೀಸ್ ನಾಯಕ ಔಟ್
ನಾಯಕನಾದವನು ಕಣ್ಣೀರು ಒರೆಸಬೇಕೇ ಹೊರತು ಹಾಕಬಾರದು: ಯೋಗೇಶ್ವರ್
ನಾಯಕನಾದವನು ಕಣ್ಣೀರು ಒರೆಸಬೇಕೇ ಹೊರತು ಹಾಕಬಾರದು: ಯೋಗೇಶ್ವರ್
ಕುಚಿಕು ಫ್ರೆಂಡ್ಸ್; ವೈರತ್ವ ಮರೆತು ಮುದ್ದಾಡುತ್ತಿರುವ ನಾಯಿ-ಕೋತಿ
ಕುಚಿಕು ಫ್ರೆಂಡ್ಸ್; ವೈರತ್ವ ಮರೆತು ಮುದ್ದಾಡುತ್ತಿರುವ ನಾಯಿ-ಕೋತಿ
ಸೋನಿಯ, ರಾಹುಲ್ ಗಾಂಧಿಯಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ: ಸೋಮಣ್ಣ
ಸೋನಿಯ, ರಾಹುಲ್ ಗಾಂಧಿಯಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ: ಸೋಮಣ್ಣ
ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಕರ್ನಾಟಕದಂತೆ ಬೇರೆ ರಾಜ್ಯಕ್ಕೆ ತನ್ನ ಧ್ವಜ, ನಾಡಗೀತೆ ಇಲ್ಲ: ಶಿವಕುಮಾರ್
ಕರ್ನಾಟಕದಂತೆ ಬೇರೆ ರಾಜ್ಯಕ್ಕೆ ತನ್ನ ಧ್ವಜ, ನಾಡಗೀತೆ ಇಲ್ಲ: ಶಿವಕುಮಾರ್
ತಡವಾಗಿ ಆಗಮಿಸಿದ ಡಿಕೆ ಶಿವಕುಮಾರ್, ಅವರಿಗಾಗಿ ಕಾಯದ ಸಿದ್ದರಾಮಯ್ಯ
ತಡವಾಗಿ ಆಗಮಿಸಿದ ಡಿಕೆ ಶಿವಕುಮಾರ್, ಅವರಿಗಾಗಿ ಕಾಯದ ಸಿದ್ದರಾಮಯ್ಯ
ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ಪರಂಪರೆ ಮುಂದುವರಿಸಿದ ನಿಖಿಲ್
ಸಾರ್ವಜನಿಕವಾಗಿ ಕಣ್ಣೀರು ಸುರಿಸುವ ಪರಂಪರೆ ಮುಂದುವರಿಸಿದ ನಿಖಿಲ್