ಕೊಡಗು: ಸೈಬೀರಿಯನ್ ಹಸ್ಕಿ ನಾಯಿಗೆ ಶೂಟ್ (Shoot) ನೀಡಿರುವ ಘಟನೆ ಮಡಿಕೇರಿ (Madakeri) ತಾಲೂಕಿನ ತಾಳತ್ ಮನೆ ಗ್ರಾಮದಲ್ಲಿ ನಡೆದಿದೆ. ಹಸ್ಕಿ ನಾಯಿ ಗುಂಡೇಟು ತಿಂದು ತೀವ್ರ ನರಳಾಡುತ್ತಿದೆ. ಎಂಕೆ ನಾಚಪ್ಪ ಎಂಬುವರಿಗೆ ಸೇರಿದ 70 ಸಾವಿರ ರೂ ಬೆಲೆ ಬಾಳುವ ವಿದೇಶೀ ತಳಿಯ ನಾಯಿ ಇದಾಗಿದೆ. ನಾಯಿ ಯಜಮಾನನೊಂದಿಗೆ ವಾಕ್ ತೆರಳುತ್ತಿದ್ದಾಗ, ರಾಜೀವ್ ಲೋಚನ್ ಎಂಬುವವರು ಗುಂಡು ಹೊಡೆದಿದ್ದಾರೆ. ಈ ಸಂಬಂಧ ನಾಯಿ ಮಾಲಿಕರು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ನಾಯಿ ಮೇಲೆ ಗುಂಡು ಹಾರಿಸಿದ ಆರೋಪ ಕೇಳಿಬಂದಿದೆ.
ಭೂ ವ್ಯಾಜ್ಯಕ್ಕೆ 2 ಕುಟುಂಬಗಳ ನಡುವೆ ಗಲಾಟೆ, ಗುಂಡೇಟು
ಚಿಕ್ಕಮಗಳೂರು: ಭೂ ವ್ಯಾಜ್ಯ ವಿಚಾರಕ್ಕೆ ಎರಡು ಕುಂಟುಂಬಗಳ ನಡುವೆ ಗಲಾಟೆ ನಡೆದಿದ್ದು, ಗಲಾಟೆ ವೇಳೆ ವ್ಯಕ್ತಿಯ ಕಾಲಿಗೆ ಗುಂಡು ಹಾರಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ರೈತ ಸಂಘದ ಜಿಲ್ಲಾಧ್ಯಕ್ಷ ದುಗ್ಗಪ್ಪಗೌಡ ನಾರಾಯಣ್ ಎಂಬುವರ ಕಾಲಿಗೆ ಗುಂಡು ಹಾರಿಸಿದ ಆರೋಪಿ.
ಮಂಚೇಗೌಡ ಮತ್ತು ದುಗ್ಗಪ್ಪಗೌಡ ಎಂಬುವವರ ನಡುವೆ ಜಮೀನು ವಿವಾದ ಇದೆ. ಮಂಚೇಗೌಡರ ಜಾಗದಲ್ಲಿ ದುಗ್ಗಪ್ಪ ಗೌಡರಿಂದ ಮನೆ ನಿರ್ಮಾಣ ಆರೋಪ ಕೇಳಿಬಂದಿದೆ. ಹೀಗಾಗಿ ಭೂ ವಿವಾದ ಪಂಚಾಯಿತಿ ತೆರಳಿದ್ದವರ ಮೇಲೆ ದುಗ್ಗಪ್ಪಗೌಡ ಗುಂಡು ಹಾರಿಸಿದ್ದಾನೆ. ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಡಿಗೆರೆ ಪೊಲೀಸರು ದುಗ್ಗಪ್ಪಗೌಡನನ್ನು ಬಂಧಿಸಿದ್ದಾರೆ.
ಹೆಂಡತಿ ಮೇಲೆ ಕಣ್ಣು ಹಾಕಿದ್ದಕ್ಕೆ ಸ್ನೇಹಿತನ ಮರ್ಡರ್
ಬೆಳಗಾವಿ: ಅ.7ರಂದು ಕರೋಶಿ ಗ್ರಾಮದಲ್ಲಿ ಕೊಳೆತ ಸ್ಥಿಯಲ್ಲಿ ಯುವಕನ ಶವ ಪತ್ತೆಯಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಚಿಕ್ಕೋಡಿ ಪೊಲೀಸರು, ಸಾವಿನ ಕಾರಣವನ್ನು ಬೇಧಿಸಿದ್ದಾರೆ. ಕಳೆದ ರವಿವಾರ ಅ.2 ರಂದು ಕೊಲೆಯಾದ ಸುನೀಲ್ ಸಾಳುಂಕೆ ಕೆಲಸಕ್ಕೆ ಹೋಗಿದ್ದನು. ಕೆಲಸಕ್ಕೆ ಹೋದ ಸುನೀಲ್ಗೆ ಸಂಜೆ ಮಹಾಂತೇಶ್ ತಳವಾರ್ ಎಂಬಾತ ಪಾರ್ಟಿಗೆಂದು ಕರೆದಿದ್ದಾನೆ. ಪಾರ್ಟಿಗೆ ಬಂದ ಸುನಿಲ್ಗೆ ಮಹಾಂತೇಶ್ ತಳವಾರ್ ಮತ್ತು ಕಲ್ಲೋಳ ಗ್ರಾಮದ ರಾಜು ದೊಡ್ಡಮನಿ ಹಗ್ಗದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ.
ಕೊಲೆ ಮಾಡಿ, ಆರೋಪಿಗಳು ಅರಣ್ಯ ಪ್ರದೇಶದಲ್ಲಿ ಎಸೆದು ಹೋಗಿದ್ದರು. ಕೊಲೆಯಾದ ಐದು ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಸುನೀಲ್ ಶವ ಪತ್ತೆಯಾಗಿತ್ತು. ಈಗ ಶವ ಪತ್ತೆಯಾಗಿ 8 ದಿನಗಳ ಬಳಿಕ ಪೊಲೀಸರು ಜೈನಾಪುರ ಗ್ರಾಮದ ಮಹಾಂತೇಶ್ ತಳವಾರ್ ಮತ್ತು ಕಲ್ಲೋಳ ಗ್ರಾಮದ ರಾಜು ದೊಡ್ಡಮನಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಸುನೀಲ್, ಮಹಾಂತೇಶ್ ತಳವಾರ್ ಮೇಲೆ ಕಣ್ಣು ಹಾಕಿದ್ದಕ್ಕೆ ಕೊಲೆ ಮಾಡಿದ್ದಾಕಿ ಬಾಯಿ ಬಿಟ್ಟಿದ್ದಾನೆ.
ಬೈಕ್ ಗೆ ಟಾಟಾ ಏಸಿ ಡಿಕ್ಕಿ, ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಕೋಲಾರ: ಬೈಕ್ಗೆ ಟಾಟಾ ಏಸಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಕೆಜಿಎಫ್ ತಾಲ್ಲೂಕಿನ ತಲ್ಲಪಲ್ಲಿ ಕ್ರಾಸ್ ಬಳಿ ನಡೆದಿದೆ. ದಾಸೇನಹಳ್ಳಿ ಬಾಬು (35) ಮೃತ ವ್ಯಕ್ತಿ. ವಿಷಯ ತಿಳಿದು ಸ್ಥಳಕ್ಕೆ ಬಂದ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಬೇತಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಕೆಜಿಎಫ್ ಎಸ್ಪಿ ಧರಣಿದೇವಿ ಭೇಟಿ ಪರಿಶೀಲನೆ ಮಾಡಿದ್ದಾರೆ.
ಧಗಧಗನೆ ಹೊತ್ತಿ ಉರಿದ ಲಾರಿ
ಬೆಂಗಳೂರು: ಬೆಂಗಳೂರಿನ ಸುಮ್ಮನಹಳ್ಳಿ ಬಳಿ ಕೊರಿಯರ್ ಲಾರಿಯೊಂದು ಧಗಧಗನೆ ಹೊತ್ತಿ ಉರಿದಿದೆ. ಮಧ್ಯಾಹ್ನ 2 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಚಾಲಕ ಪ್ರಾಣಾಯಾಮದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಆಗಮಿಸದ ಅಗ್ನಿಶಾಮಕ ಸಿಬ್ಬಂದಿಗಳು ಅಗ್ನಿ ನಿಂದಿಸಿದ್ದಾರೆ.
ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:21 pm, Sun, 9 October 22