ರಿವರ್ಸ್ ಬಂದ ನೆರೆಮನೆಯ ಕಾರು: 2 ವರ್ಷದ ಕಂದಮ್ಮ ಸಾವು

ರು ರಿವರ್ಸ್ ತೆಗೆಯುವ ವೇಳೆ ಚಕ್ರಕ್ಕೆ ಸಿಲುಕಿ ಎರಡು ವರ್ಷದ ಕಂದ ಸಾವೀಗೀಡಾದ ಘಟನೆ ರಾಷ್ಟ್ರ ರಾಜಧಾನಿಯಲ್ಲಿ ನಡೆದಿದೆ.

ರಿವರ್ಸ್ ಬಂದ ನೆರೆಮನೆಯ ಕಾರು: 2 ವರ್ಷದ ಕಂದಮ್ಮ ಸಾವು
Car
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Oct 09, 2022 | 8:46 PM

ನವದೆಹಲಿ: ಯಾವುದೇ ಒಂದು ವಾಹನ ಚಾಲಾಯಿಸುವಾಗ ಮೈಯಲ್ಲ ಕಣ್ಣಾಗಿರಬೇಕು ಎಂದು ಹೇಳುವುದು ಸುಳ್ಳಲ್ಲ. ವಾಹನ ಚಲಾಯಿಸಬೇಕಾದರೆ ಸ್ವಲ್ಪ ಯಾಮಾರಿದ್ರು ಏನೆಲ್ಲಾ ಅನಾಹುತಗಳು ಆಗುತ್ತವೆ ಎನ್ನುವುದಕ್ಕೆ ಈ ಸುದ್ದಿ ಸಾಕ್ಷಿ.

ಹೌದು…ಕಾರು ರಿವರ್ಸ್ ತೆಗೆಯುವ ವೇಳೆ ಚಕ್ರಕ್ಕೆ ಸಿಲುಕಿ ಎರಡು ವರ್ಷದ ಕಂದಮ್ಮ ಸಾವೀಗೀಡಾದ ಹೃದಯ ವಿದ್ರಾವಕ ಘಟನೆ ನವದೆಹಲಿಯಲ್ಲಿ ನಡೆದಿದೆ.

ಕೆಎಸ್​​ಆರ್​​ಟಿಸಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸಾವು

ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇಂದು(ಅಕ್ಟೋಬರ್. 09) ಮಧ್ಯಾಹ್ನ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ.

ಎರಡು ವರ್ಷದ ಮಗು ತನ್ನ ಮನೆಯ ಮುಂದೆ ಗೇಟ್‌ನ ಹೊರಭಾಗದ ರಸ್ತೆಯಲ್ಲಿ ಆಟವಾಡುತ್ತಿತ್ತು. ಈ ವೇಳೆ ನೆರೆ ಮನೆಯವರು ಮಗುವನ್ನು ನೋಡದೇ ಏಕಾಏಕಿ ಕಾರನ್ನು ರಿವರ್ಸ್‌ ತೆಗೆದುಕೊಂಡಿದ್ದಾರೆ. ಪರಿಣಾಮ ಮಗು ಕಾರಿನ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯ ಬಳಿಕ ಪೊಲೀಸರು ಕಾರು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ವಾಹನ ಚಾಲಾಯಿಸುವಾಗ ಮೈಯಲ್ಲ ಕಣ್ಣಾಗಿರಬೇಕು. ಅದರಲ್ಲೂ ರಿವರ್ಸ್ ತೆಗೆದುಕೊಳ್ಳುವಾಗಂತೂ ಎಚ್ಚರ ವಹಿಸಲೇಬೇಕು. ಅಲ್ಲದೇ ಒಮ್ಮೆ ಗಾಡಿ ಮೂವ್ ಮಾಡುವ ಮೊದಲು ಒಂದು ಸಲ ಕೆಳಗೆ ಇಣುಕಿ ಸಹ ನೋಡಬೇಕು. ಯಾಕಂದ್ರೆ, ವಾಹನದ ಕೆಳಗಡೆ ನಾಯಿ ಮಲಗಿಕೊಂಡಿರುತ್ತವೆ.

Published On - 8:31 pm, Sun, 9 October 22